Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಬಗ್ಗೆ ಹೊರಬಿದ್ದೇಬಿಡ್ತು ಮಹತ್ವದ ಮಾಹಿತಿ
Bengaluru-Chennai Expressway: ದೇಶದಲ್ಲಿ ಇದೇ ವರ್ಷ ಹಲವು ಹೆದ್ದಾರಿಗಳು ಉದ್ಘಾಟನೆಗಲಿವೆ. ಈ ಸಾಲಿನಲ್ಲಿ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕೂಡ ಒಂದಾಗಿದೆ. ಆಗಾಗ ಈ ಹೆದ್ದಾರಿ ಬಗ್ಗೆ ಮಾಹಿತಿಗಳು ಹೊರಬೀಳುತ್ತಲೇ ಇರುತ್ತವೆ. ಹಾಗೆಯೇ ಇದೀಗ ಮತ್ತೊಂದು ಮಹತ್ವದ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ. ಇಲ್ಲಿದೆ ನೋಡಿ ಮಾಹಿತಿ.
ಇದೇ ವರ್ಷದ ಅಂದರೆ 2025ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಬೇಕಿದ್ದ 262 ಕಿಲೋ ಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ವಿಳಂಬವಾಗುತ್ತಿದೆ. ನಿಗದಿತ ಸಮಯಕ್ಕಿಂತ ವಿಳಂಬವಾಗಿ ಉದ್ಘಾಟನೆಯಾಗಲಿದೆ. ಅಂದರೆ ಮುಂಗಾರು ಮಳೆ ಮುಗಿದ ಮೇಲೆ ಅಂದರೆ ಈ ವರ್ಷದ ಅಂತ್ಯದಲ್ಲಿ ಡಿಸೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಆರ್ಥಿಕ ಸಮಸ್ಯೆಗಳು ಸೇರಿದಂತೆ ಹಲವು ಕಾರಣಾಂತರಗಳಿಂದ ಈ ಹೆದ್ದಾರಿ ಉದ್ಘಾಟನೆ ದಿನಾಂಕ ಹಲವು ಬಾರಿ ಮುಂದೂಡಿಕೆಯಾಗುತ್ತಲೇ ಬಂದಿದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾಮಗಾರಿ ಮುಗಿಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಸಂಪೂರ್ಣವಾಗಿ ಮುಕ್ತವಾಗಿದ್ದು, ಈ ಭಾಗದಲ್ಲಿ ಸಂಚಾರಕ್ಕೂ ಕೂಡ ಮುಕ್ತವಾಗಿದೆ. ಆದರೆ, ತಮಿಳುನಾಡು, ಆಂಧ್ರ ಭಾಗದಲ್ಲಿ ಮಾತ್ರ ಕಾಮಗಾರಿ ಬಾಕಿ ಉಳಿದುಕೊಂಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಕಾಮಗಾರಿ ಪ್ರಗತಿ ಬಗ್ಗೆ ವರದಿ ನೀಡಿದ್ದಾರೆ. ತಮಿಳುನಾಡಿನಲ್ಲಿ 106 ಕಿಲೋ ಮೀಟರ್ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯನ್ನು 4 ಪ್ಯಾಕೇಜ್‌ಗಳಲ್ಲಿ ನಿರ್ಮಿಸಲಾಗಿದೆ. ಗುಡಿಪಾಲ (ಎಪಿ)ನಿಂದ ವಾಲಜಾಪೇಟೆ, ವಾಲಜಾಪೇಟೆಯಿಂದ ಅರಕ್ಕೋಣಂ, ಅರಕ್ಕೋಣಂನಿಂದ ಕಾಂಚಿಪುರಂ ಮತ್ತು ಕಾಂಚೀಪುರಂನಿಂದ ಶ್ರೀಪೆರುಂಬುದೂರ್ 4 ಪ್ಯಾಕೇಜ್‌ಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಕಾಮಗಾರಿಯ ಪ್ರಗತಿಯು ವಾಲಜಾಪೇಟೆಯಿಂದ ಅರಕ್ಕೋಣಂ ವಿಭಾಗದಲ್ಲಿ ಶೇಕಡ 90ರಷ್ಟು, ಅರಕ್ಕೋಣಂನಿಂದ ಕಾಂಚಿಪುರಂ ವಿಭಾಗದಲ್ಲಿ ಶೇಕಡ 52ರಷ್ಟರವರೆಗೆ ಇದೆ. ತಮಿಳುನಾಡಿನಲ್ಲಿ, ಅರಕ್ಕೋಣಂನಿಂದ ಕಾಂಚಿಪುರಂ ವಿಭಾಗದ ಕಾಮಗಾರಿ ಪ್ರಗತಿ ಶೇಕಡ 52ರಷ್ಟು ವಿಳಂಬ ಆಗಿದೆ.
ಜಿಲ್ಲಾಡಳಿತವು ಹೆಚ್ಚುವರಿ ಹೈಟೆನ್ಷನ್ ಯುಟಿಲಿಟಿಯನ್ನು ಸ್ಥಳಾಂತರಿಸುವಾಗ ಭೂಮಿ ಮತ್ತು ಬೆಳೆಗೆ ಪರಿಹಾರ ನಿರ್ಧರಿಸುವಲ್ಲಿನ ವಿಳಂಬ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾಂಚಿಪುರಂನಿಂದ ಶ್ರೀಪೆರಂಬುದೂರು ವಿಭಾಗದ ಕಾಮಗಾರಿಗಳು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ವಾಲಜಾಪೇಟೆನಿಂದ ಅರಕ್ಕೋಣಂ ವಿಭಾಗದ ಕಾಮಗಾರಿಗಳು ಜುಲೈ ವೇಳೆಗೆ ಪೂರ್ಣಗೊಳ್ಳಲಿವೆ.
ಎಲ್ಲಿಂದ ಎಲ್ಲಿವರೆಗೆ ಯಾವಾಗ ಪೂರ್ಣ?
* ಕಾಂಚಿಪುರಂನಿಂದ ಶ್ರೀಪೆರಂಬುದೂರು-ಸೆಪ್ಟೆಂಬರ್ ವೇಳೆಗೆ ಪೂರ್ಣ
* ವಾಲಜಾಪೇಟೆನಿಂದ ಅರಕ್ಕೋಣಂ - ಜುಲೈ ವೇಳೆಗೆ ಪೂರ್ಣ
262 ಕಿಲೋ ಮೀಟರ್ ಉದ್ದದ ಬೆಂಗಳೂರು-ಚೆನ್ನೈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಬಳಿಯ ಹೊಸಕೋಟೆಯಲ್ಲಿ ಪ್ರಾರಂಭವಾಗಿ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳುತ್ತದೆ. ಆಂಧ್ರಪ್ರದೇಶದ ಚಿತ್ತೂರು ಮೂಲಕ ಇದು ಹಾದು ಹೋಗಲಿದೆ. ಒಟ್ಟು ಮೂರು ರಾಜ್ಯಗಳಲ್ಲಿ 10 ಪ್ಯಾಕೇಜ್‌ಗಳ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ 71 ಕಿಲೋ ಮೀಟರ್ ಕಾಮಗಾರಿ ಮುಕ್ತಾಯವಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಾಕಿಯಿದೆ.
ಕರ್ನಾಟಕದಲ್ಲಿನ ಮೂರು ಹಂತಗಳು
ಹಂತ 1: ಹೊಸಕೋಟೆ-ಮಾಲೂರು ನಡುವೆ 27.1 ಕಿಲೋ ಮೀಟರ್
ಹಂತ 2: ಮಾಲೂರು-ಬಂಗಾರಪೇಟೆ 27.1 ಕಿಲೋ ಮೀಟರ್
ಹಂತ 3: ಬಂಗಾರಪೇಟೆ-ಬೇತಮಂಗಲ, 17.5 ಕಿಲೋ ಮೀಟರ್
ಈ ಎಕ್ಸ್‌ಪ್ರೆಸ್ ಸಂಪೂರ್ಣ ಪ್ರವೇಶ ನಿಯಂತ್ರಿತ ಆಗಿದ್ದು, ಆರಂಭದಲ್ಲಿ ನಾಲ್ಕು ಪಥಗಳನ್ನು ಒಳಗೊಂಡಿದೆ. ಆದರೆ ವಾಹನಗಳ ಸಂಚಾರದ ಪ್ರಮಾಣ ಹೆಚ್ಚಾದಂತೆ 6ರಿಂದ 8 ಪಥಗಳವರೆಗೂ ವಿಸ್ತರಣೆ ಮಾಡಲಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.











Click it and Unblock the Notifications