ಬಿಟ್ಟು ತಬಾಹಿ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರು CEO ಫಿದಾ: ಆರ್ಥಿಕ ನೆರವಿಗೆ ಮುಂದು!

ದೇಶದೆಲ್ಲೆಡೆ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕ ಬಿಟ್ಟು ತಬಾಹಿ (Bittu Tabahi) ಇದೀಗ ಸೋಶಿಯಲ್‌ ಮಿಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕೇವಲ ಮಾತಿನಲ್ಲಿ ಮಾತ್ರವಲ್ಲದೆ, ಮೈಯಲ್ಲೇ ಸ್ವಚ್ಛತೆಯನ್ನ ಅಳವಡಿಸಿಕೊಂಡಿರುವ ಈ ಯುವಕನ ಕಾರ್ಯವೈಖರಿಗೆ ಕೇವಲ ಸಾಮಾನ್ಯ ಜನತೆ ಮಾತ್ರವಲ್ಲ, ಕಾರ್ಪೊರೇಟ್ ದಿಗ್ಗಜರು ಕೂಡ ತಲೆದೂಗಿದ್ದಾರೆ.

ಹೌದು, ಇದೀಗ ಬಿಟ್ಟು ತಬಾಹಿ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬೆಂಗಳೂರಿನ ಐಟಿ ಕಂಪನಿಯ ಸಿಇಒ ಒಬ್ಬರು, ಈ ಯುವಕನಿಗೆ ಆರ್ಥಿಕ ನೆರವು ನೀಡಲು ಮತ್ತು ನಿಧಿ ಸಂಗ್ರಹಿಸಲು ಮುಂದೆ ಬಂದಿರುವುದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Bengaluru CEO Siddharth Dialani Offers To Raise Funds For Bittu Tabahi s Cleanliness Drives In MP

ಬೆಂಗಳೂರು ಸಿಇಒ ಸಿದ್ದಾರ್ಥ್ ದಿಯಾಲಾನಿ ಮೆಚ್ಚುಗೆ

ಬೆಂಗಳೂರು ಮೂಲದ ಸಿಇಒ ಸಿದ್ದಾರ್ಥ್ ದಿಯಾಲಾನಿ ಅವರು ಬಿಟ್ಟು ತಬಾಹಿ ಅವರ ಈ ನಿಸ್ವಾರ್ಥ ಸೇವೆಯನ್ನ ಕಂಡು ಬೆರಗಾಗಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬಿಟ್ಟು ಅವರ ಕಾರ್ಯವನ್ನ ಶ್ಲಾಘಿಸಿ ಪೋಸ್ಟ್ ಮಾಡಿದ್ದಾರೆ. "ಬಿಟ್ಟು ತಬಾಹಿ ಅವರ ಕೆಲಸವನ್ನು ನೋಡಿ ನಾನು ವೈಯಕ್ತಿಕವಾಗಿ ಪ್ರೇರಣೆಗೊಂಡಿದ್ದೇನೆ. ಭಾರತದಲ್ಲಿ ಸ್ವಚ್ಛತೆಗಾಗಿ ಇನ್ನಷ್ಟು ಕೆಲಸ ಮಾಡಲು ಅವರ ಈ ಪ್ರಯತ್ನ ನನಗೆ ಸ್ಫೂರ್ತಿ ನೀಡಿದೆ. ದಯವಿಟ್ಟು ಯಾರಾದರೂ ನನ್ನನ್ನು ಅವರೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತೀರಾ?" ಎಂದು ಸಿದ್ದಾರ್ಥ್ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಬಿಟ್ಟು ಅವರ ಕಾರ್ಯಚಟುವಟಿಕೆಗಳಿಗೆ ತಮ್ಮ ಕಡೆಯಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇದೇ ರೀತಿ ಯೋಚಿಸುವ ಇತರ ಸ್ನೇಹಿತರು ಮತ್ತು ಸಮಾನ ಮನಸ್ಕರಿಂದ ನಿಧಿ ಸಂಗ್ರಹಿಸಿ, ಬಿಟ್ಟು ತಬಾಹಿ ಮಾಡುತ್ತಿರುವ ಈ ಬೃಹತ್ ಮಟ್ಟದ ಸ್ವಚ್ಛತಾ ಕಾರ್ಯಕ್ಕೆ ಬೆಂಬಲ ನೀಡುವ ಇಚ್ಛೆಯನ್ನ ಅವರು ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಅಜ್ನಾರ್ ನದಿ ಸ್ವಚ್ಛತೆ

ಬಿಟ್ಟು ತಬಾಹಿ ಅವರ ಅಸಲಿ ಹೆಸರು ಸುರೇಂದ್ರ ಸಿಂಗ್ ಚೌಧರಿ. ಇವರು ಮಧ್ಯಪ್ರದೇಶದ ಅಜ್ನಾರ್ ನದಿಯ ಘಾಟ್‌ಗಳನ್ನ ಶುಚಿಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಮಲಿನಗೊಂಡಿದ್ದ ನದಿ ತೀರಗಳು ಮತ್ತು ನೀರಿನ ಒಡಲಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನ ತಮ್ಮ ಕೈಯಾರೆ ಸ್ವಚ್ಛಗೊಳಿಸುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಯಾವುದೇ ಫಲಾಪೇಕ್ಷೆ ಇಲ್ಲದೆ, ಸ್ವಯಂಪ್ರೇರಿತರಾಗಿ ಕೆಸರು ಮತ್ತು ಕಸದ ರಾಶಿಗೆ ಇಳಿದು ಪರಿಸರವನ್ನ ಕಾಪಾಡುತ್ತಿರುವ ಈ ಯುವಕನ ಸಮರ್ಪಣಾ ಭಾವಕ್ಕೆ ಈಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪರಿಸರ ಸ್ವಯಂಸೇವಕನಿಗೆ ನೆಟ್ಟಿಗರ ಬೆಂಬಲ

ಸಿದ್ದಾರ್ಥ್ ದಿಯಾಲಾನಿ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಬಿಟ್ಟು ತಬಾಹಿಗೆ ಬೆಂಬಲ ಸೂಚಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಟ್ಟು ಅವರು ನಿಯಮಿತವಾಗಿ ತಮ್ಮ ಯುಪಿಐ ಕ್ಯೂಆರ್ ಕೋಡ್ ಹಂಚಿಕೊಳ್ಳುತ್ತಿದ್ದು, ಆಸಕ್ತರು ನೇರವಾಗಿ ಅವರಿಗೆ ದೇಣಿಗೆ ನೀಡಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: "ಅವರು ಇಡೀ ಭಾರತವನ್ನೇ ಸ್ವಚ್ಛಗೊಳಿಸಬಹುದು. ಆದರೆ ನಮ್ಮ ನಾಗರಿಕ ಪ್ರಜ್ಞೆ ಇಲ್ಲದ ಜನರು ಅವರಿಗೆ ಜೀವನಪೂರ್ತಿ ಕಸ ಹಾಕುವ ಮೂಲಕ ಕೆಲಸ ಕೊಡುತ್ತಲೇ ಇರುತ್ತಾರೆ. ನಾವು ನಮ್ಮ ಪರಿಸರವನ್ನ ಎಂದು ಶುಚಿಯಾಗಿ ಇಟ್ಟುಕೊಳ್ಳಲು ಕಲಿಯುತ್ತೇವೆಯೋ?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಯುವಕ, "ನಾನು ಸದ್ಯ ನಿರುದ್ಯೋಗಿ. ಆದರೆ ನನಗೆ ಕೆಲಸ ಸಿಕ್ಕಿ ಮೊದಲನೇ ತಿಂಗಳ ಸಂಬಳ ಬಂದ ತಕ್ಷಣ, ಅದರ ಒಂದು ಪಾಲನ್ನ ಈ ಸ್ವಚ್ಛತಾ ಕಾರ್ಯಕ್ಕೆ ನೀಡುತ್ತೇನೆ" ಎಂದಿದ್ದಾರೆ.

ಇನ್ನೂ ಕೆಲವರು ಬಿಟ್ಟು ತಬಾಹಿ ಅವರನ್ನ ಭಾರತದ ಓಷನ್ ಕ್ಲೀನ್-ಅಪ್ ಗೈ ಎಂದು ಕರೆದಿದ್ದಾರೆ. ಈ ಅಭಿಯಾನ ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೆ, ದಾನಿಗಳ ನೆರವಿನೊಂದಿಗೆ ನೊಯ್ಡಾ ಸೇರಿದಂತೆ ಭಾರತದ ವಿವಿಧ ನಗರಗಳು ಮತ್ತು ಜಲಮೂಲಗಳಿಗೂ ವಿಸ್ತರಣೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಿನಲ್ಲಿ, ಒಬ್ಬ ಸಾಮಾನ್ಯ ಯುವಕನ ಪ್ರಾಮಾಣಿಕ ಪ್ರಯತ್ನಕ್ಕೆ ಐಟಿ ಕ್ಷೇತ್ರದ ನಾಯಕರು ಕೈಜೋಡಿಸಿದರೆ ಎಂತಹ ಅದ್ಭುತ ಬದಲಾವಣೆ ತರಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+