Bengaluru Carpooling: ಕಾರ್‌ಪೂಲಿಂಗ್ ಆ್ಯಪ್‌ಗಳಿಗೆ ನಿಷೇಧವಿಲ್ಲ- ಯು ಟರ್ನ್‌ ಹೊಡೆದ ಸರ್ಕಾರ, ಏನಿದು ಬೆಳವಣಿಗೆ

ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ ಆ್ಯಪ್‌ಗಳಿಗೆ ನಿಷೇಧ ಹೇರಲು ಕರ್ನಾಟಕದ ಸರ್ಕಾರ ನಿರ್ಧರಿಸಿದೆ ಎಂದು ಭಾನುವಾರ ವರದಿಯಾಗಿದೆ. ಇದಕ್ಕೆ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕಾರ್‌ಪೂಲಿಂಗ್ ಆ್ಯಪ್‌ಗಳಿಗೆ ನಿಷೇಧವಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್‌ಪೂಲಿಂಗ್‌ಗೆ ಯಾವುದೇ ನಿಷೇಧವಿಲ್ಲ. ಆದರೆ ಈ ಅಪ್ಲಿಕೇಶನ್‌ಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಅನುಮತಿಗಳನ್ನು ಪಡೆದುಕೊಳ್ಳಬೇಕು' ಎಂದು ಅವರು ಒತ್ತಿ ಹೇಳಿದರು.

bengaluru-carpooling-apps

ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್‌ಪೂಲಿಂಗ್ ಅಪ್ಲಿಕೇಶನ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಟ್ಯಾಕ್ಸಿ ಮತ್ತು ಆಟೋ ಅಸೋಸಿಯೇಷನ್‌ಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರ್‌ಪೂಲಿಂಗ್‌ ಅನ್ನು ನಿಷೇಧಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ರಾಮಲಿಂಗಾ ರೆಡ್ಡಿ ಅವರು ನಾಳೆ ಬೆಳಿಗ್ಗೆ 10 ಗಂಟೆಗೆ ಕಾರ್‌ಪೂಲ್ ಆ್ಯಪ್ ಅಗ್ರಿಗೇಟರ್‌ಗಳೊಂದಿಗೆ ಸಭೆಯನ್ನು ನಡೆಸಲಿದ್ದಾರೆ.

bengaluru-carpooling-apps

ಕಾರ್‌ಪೂಲಿಂಗ್ ಮಹತ್ವದ ಹೆಜ್ಜೆ?

ಪೀಕ್ ಅವರ್‌ಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸುವಲ್ಲಿ ಕಾರ್‌ಪೂಲಿಂಗ್ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದು ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಹಲವಾರು ಐಟಿ ಉದ್ಯೋಗಿಗಳು ತಮ್ಮ ನಿವಾಸಗಳಿಂದ ಕಚೇರಿಗೆ ತೆರಳಲು ಈ ಸೇವೆಗಳನ್ನು ಅವಲಂಬಿಸಿದ್ದಾರೆ.

ಟ್ಯಾಕ್ಸಿ ಅಸೋಸಿಯೇಷನ್‌ಗಳು ಕಾರ್‌ಪೂಲಿಂಗ್ ಸೇವೆಗಳು ತಮ್ಮ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿವೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರಕ್ಕೆ ವಿನಂತಿಸಿವೆ.

bengaluru-carpooling-apps

ಟ್ಯಾಕ್ಸಿ ಅಸೋಸಿಯೇಷನ್‌ಗಳು, ಆಟೋರಿಕ್ಷಾ ಚಾಲಕರ ಒಕ್ಕೂಟಗಳು ಬೆಂಗಳೂರು ಬಂದ್‌ಗೂ ಮುಂಚೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ತಮ್ಮ ಬೇಡಿಕೆಗಳನ್ನು ಮಂಡಿಸಿವೆ. ಆಟೋರಿಕ್ಷಾ ಚಾಲಕರು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ ಬೈಕ್ ಟ್ಯಾಕ್ಸಿಗಳ ನಿಷೇಧವೂ ಒಂದು.

ಸರ್ಕಾರಕ್ಕೆ ತೇಜಸ್ವಿ ಸೂರ್ಯ ಪತ್ರ

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಕಾರ್‌ಪೂಲಿಂಗ್ ಸಹಾಯ ಮಾಡುತ್ತದೆ. ಇದನ್ನು ಮುಂದುವರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ಸಾರ್ವಜನಿಕ ಸಾರಿಗೆ ಜನರಿಗೆ ಸೇವೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಸೂರ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರ್‌ಪೂಲಿಂಗ್ ಪರಿಹಾರವಾಗಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+