Property: ಬೆಂಗಳೂರಲ್ಲಿ ಮನೆ ಬಾಡಿಗೆ ಡಬಲ್, ಭೂಮಿಗೂ ಬಂಗಾರದ ಬೆಲೆ ಕಾರಣವೇನು ?
Property: ದೇಶದಲ್ಲಿ ಏಕಾಏಕಿ ಭೂಮಿಯ ಬೆಲೆ ಹಾಗೂ ಮನೆಗಳ ಬಾಡಿಗೆ ಬೆಲೆ ಹೆಚ್ಚಳವಾಗಿದೆ. ಇದರಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿನ ಬಾಡಿಗೆ ಮನೆಗಳ ಬೆಲೆಯೂ ಸಹ ಭರ್ಜರಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆಯು ಕೋವಿಡ್‌ನ ನಂತರ ಬಾರಿ ಹೆಚ್ಚಳವಾಗಿದೆ. ಇದೀಗ ಮುಂದಿನ ದಿನಗಳಲ್ಲಿ ಬಾಡಿಗೆ ಮನೆಗಳ ಬಾಡಿಗೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ರಾಯಿಟರ್ಸ್ ಸಮೀಕ್ಷೆ ವರದಿ ಮಾಡಿದೆ.
ಬೆಂಗಳೂರು ಸೇರಿದಂತೆ ದೇಶದಾದ್ಯಂತ ಮನೆಗಳ ಬಾಡಿಗೆ ಬೆಲೆ ದಿಢೀರ್ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಹಣವಂತ ಖರೀದಿದಾರರಿಂದ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಭಾರತದಲ್ಲಿ ಮನೆ ಬೆಲೆಗಳು ನಿರೀಕ್ಷೆಗಿಂತ ವೇಗವಾಗಿ ಏರಿಕೆಯಾಗಲಿವೆ. ಆದರೆ ಕೈಗೆಟುಕುವ ವಸತಿ ಸೌಲಭ್ಯ ಇಲ್ಲದೆ ಇರುವುದರಿಂದಾಗಿ ಅಥವಾ ಪೂರೈಕೆಯ ಕೊರತೆಯಿಂದಾಗಿ ಅನೇಕರು ಮುಂದಿನ ದಿನಗಳಲ್ಲಿ ದುಬಾರಿ ಬಾಡಿಗೆ ದರದ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ. ದೇಶದಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಭೂಮಿ ಹಾಗೂ ವಸತಿ ಸೌಕರ್ಯಗಳ ಮೇಲೆ ಜನ ಹೂಡಿಕೆ ಮಾಡುವ ಪ್ರಮಾಣ ಹೆಚ್ಚಳವಾಗಿದೆ. ಜನ ಹೂಡಿಕೆಯ ವಿಚಾರದಲ್ಲಿ ಭೂಮಿ ಮತ್ತು ಬಂಗಾರಕ್ಕೆ ಆದ್ಯತೆ ನೀಡುತ್ತಿದ್ದಾರೆ.

ದೇಶದ ಕೆಲವೇ ನಗರಗಳಲ್ಲಿ ಉತ್ತಮ ಸಂಬಳ ನೀಡುವ ಉದ್ಯೋಗಗಳು ಇವೆ. ಅಲ್ಲದೇ ದೇಶದ ಬಹುತೇಕ ರಾಜ್ಯಗಳಲ್ಲಿ ಒಳ್ಳೆಯ ಸಂಬಳದ ಕೆಲಸ ಬೇಕಾದರೆ, ನಗರ ಪ್ರದೇಶಗಳಿಗೆ ಬರಬೇಕಾದ ಅನಿವಾರ್ಯತೆ ಇದೆ. ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಲಕ್ಷಾಂತರ ಜನರಿಗೆ ಮನೆ ಮಾಲೀಕತ್ವ ಅಥವಾ ಮನೆ ಖರೀದಿ ಮಾಡುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಶ್ರೀಮಂತರು ಅಥವಾ ಹಣ ಇರುವವರು ಮನೆ, ಭೂಮಿ ಖರೀದಿ ಮಾಡುತ್ತಿದ್ದಾರೆ. ಮಧ್ಯಮ ವರ್ಗದವರು ಇಂದಿಗೂ ಬಾಡಿಗೆ ಮನೆಗಳನ್ನೇ ಅವಲಂಬಿಸುವಂತೆ ಆಗಿದೆ.
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವು ಕಳೆದ ತ್ರೈಮಾಸಿಕದಲ್ಲಿ 7.8% ರಷ್ಟು ಬೆಳೆದಿದೆ. ಜಿಡಿಪಿ ಅಭಿವೃದ್ಧಿ ಆಗುತ್ತಿದೆ ಎನ್ನಲಾಗುತ್ತಿದ್ದರೂ 1.4 ಶತಕೋಟಿ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಾಭ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಭಾರತ ಆರ್ಥಿಕ ಅಭಿವೃದ್ಧಿ ಆಗುತ್ತಿದ್ದರೂ ಅದರ ಸಮಾನ ಹಂಚಿಕೆ ಆಗುತ್ತಿಲ್ಲ. ಭಾರತವು ಈಗ ಸುಮಾರು 10 ಮಿಲಿಯನ್ ಕೈಗೆಟುಕುವ ಮನೆಗಳ ಕೊರತೆಯನ್ನು ಎದುರಿಸುತ್ತಿದೆ. 2030 ರ ವೇಳೆಗೆ ಈ ಅಂತರವನ್ನು ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಮನೆಗಳ ಬೆಲೆಯು ಬರೋಬ್ಬರಿ ಎರಡುಪಟ್ಟು ಹೆಚ್ಚಳವಾಗಿದೆ. ಈ ವರ್ಷ 6.3% ಹಾಗೂ 2026 ರಲ್ಲಿ 7.0% ರಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ. ಇನ್ನು 2024ರಲ್ಲಿ ಸುಮಾರು 4.0% ರಷ್ಟು ಏರಿಕೆಯಾದ ನಂತರ, 20ಆಸ್ತಿ ವಿಶ್ಲೇಷಕರ ರಾಯಿಟರ್ಸ್ ಸಮೀಕ್ಷೆ ಹೇಳಿದೆ.












Click it and Unblock the Notifications