ಈ ಎರಡು ಕೆಜಿ ಚಿನ್ನದಲ್ಲಿ ನಿಮ್ಮ ಸರವೂ ಇದೆಯಾ ನೋಡಿ?
ಬೆಂಗಳೂರು, ಸೆಪ್ಟೆಂಬರ್. 21: ಬೆಂಗಳೂರಿಗರಲ್ಲಿ ಭಯ ಮತ್ತು ಆತಂಕ ಸೃಷ್ಟಿ ಮಾಡಿದ್ದ ಸರಗಳ್ಳರಲ್ಲಿ ಮೂವರು ಬಲೆಗೆ ಬಿದ್ದಿದ್ದಾರೆ. ಸಿಸಿಬಿ, ಸಂಘಟಿತ ಅಪರಾಧ ದಳ ಮತ್ತು ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳನ್ನು ಬಂಧಿಸಿ 45 ಅಧಿಕ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಧಾರವಾಡದ ಜನ್ನತ್ ನಗರ ಇರಾನಿ ಕಾಲೋನಿಯ ಅಬುಜರ್ ಅಲಿ(26), ಅಬ್ದುರಲ್ ಹಸನ್(23), ಹಾಸನ ಜಿಲ್ಲೆ ಹೊಳೆನರಸಿಪುರದ ಗಿರೀಶ್ (38) ಬಂಧಿತ ಆರೋಪಿಗಳು. ಅಬುಜರ್ ಅಲಿ ಮತ್ತು ಹಸನ್ ಸರಗಳ್ಳತನ ಮಾಡಿ ಅದನ್ನು ಗಿರೀಶ್ ಗೆ ನೀಡುತ್ತಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ.[ಪಲ್ಸರ್ ಬೈಕ್ ನ ವಿಶೇಷತೆ ತಿಳಿದುಕೊಳ್ಳಿ]

ಬಂಧಿತರಿಂದ 6೦ ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನಾಭರಣ, ಮೈಸೂರು ನೋಂದಣಿಯ(ಕೆಎ09 ಇಬಿ 6400) ಕಪ್ಪು ಬಣ್ಣದ ಪಲ್ಸರ್ ನ್ನು ವಶಪಡಿಸಿಕೊಳ್ಳಲಾಗಿದೆ. ಅಬುಜರ್ ಅಲಿ ಈ ಹಿಂದೆ ಸಹ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಪೊಲೀಸರ ಬಳಿ ದಾಖಲೆಗಳಿವೆ. [ಬೆಂಗಳೂರು: ಸರಗಳ್ಳರಿಗೆ ಭಾನುವಾರವೂ ರಜೆ ಇಲ್ಲ!]
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ 2013ರಿಂದ 2015 ರ ವರೆಗಿನ ಪ್ರಕರಣಗಳು ಪತ್ತೆಯಾಗಿವೆ. ಜ್ಞಾನ ಭಾರತಿ, ವಿಜಯನಗರ, ಕಾಮಾಕ್ಷಿ ಪಾಳ್ಯ, ಚಂದ್ರ ಲೇಔಟ್, ಚನ್ನಮ್ಮನ ಕರೆ ಅಚ್ಚುಕಟ್ಟು, ಕೆಂಗೇರಿ, ಎಚ್ ಎಎಲ್, ಯಲಹಂಕ, ಸುಬ್ರಹ್ಮಣ್ಯ ನಗರ, ಸಂಜಯ್ ನಗರ, ಗಿರಿನಗರ, ವಿದ್ಯಾರಣ್ಯಪುರ, ಆರ್ ಆರ್ ನಗರ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications