ಮತ್ತೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿಯ ನರ್ತನ

ಬೆಂಗಳೂರು, ಮೇ 08 : ಬೆಳ್ಳಂದೂರು ಕೆರೆಯಲ್ಲಿ ಭಾನುವಾರ ಸಂಜೆ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಜನವರಿಯಲ್ಲಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ರೀತಿ ಪದೇ ಪದೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಯಾವ ವೇಳೆ ಏನಾಗುತ್ತೋ ಎನ್ನುವ ಜೀವ ಭಯದಲ್ಲಿದ್ದಾರೆ.[ಬೆಳ್ಳಂದೂರು ಕೆರೆ ಸುತ್ತಲಿನ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸಿ: ಕೆಎಸ್ ಪಿಸಿಬಿ]

Bengaluru's Bellandur Lake catches fire again

ಕೆರೆ ಮಾಲಿನ್ಯಕ್ಕೆ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೊರೆ ಹೋಗಿದ್ದವು.

ಒಂದು ತಿಂಗಳಲ್ಲಿ ಜಲಮೂಲದ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಎನ್‌ಜಿಟಿ ನಿರ್ದೇಶನ ನೀಡಿತ್ತು. ಕಳೆದ 10 ದಿನಗಳಿಂದ ಕೆರೆಯಲ್ಲಿ ಕಳೆ ತೆಗೆಯುವ ಕೆಲಸ ನಡೆದಿದೆ.[ಬೆಳ್ಳಂದೂರು ಕೆರೆ ಕೇಸ್: ಬಾಗಿಲು ಮುಚ್ಚಿದ ಬಾಷ್ ಕಂಪನಿ]

'ಕೆರೆಯ ಸುತ್ತಲಿನ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕಾರಿ ವಿಷಯ. ಇದನ್ನು ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು' ಎಂದು ಸ್ಥಳೀಯರು ಆಗ್ರಹಿಸಿದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್ ಖಾನ್‌, 'ಕೆರೆಯಲ್ಲಿನ ರಾಸಾಯನಿಕದಿಂದ ಬೆಂಕಿ ಕಾಣಿಸಿಕೊಂಡಿಲ್ಲ. ಕೆರೆಯ ದಡದಲ್ಲಿ ಭಾರಿ ಪ್ರಮಾಣದಲ್ಲಿ ಒಣ ಹುಲ್ಲು ಸಂಗ್ರಹವಾಗಿದ್ದು ಅದಕ್ಕೆ ಬೆಂಕಿ ತಗುಲಿದೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+