ಬೆಂಗಳೂರು: ಗಾಂಧಿನಗರ ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ವೆಚ್ಚ ಪರಿಶೀಲಿಸಿಕೊಳ್ಳಿ: ಬಿಬಿಎಂಪಿ
ಬೆಂಗಳೂರು, ಏಪ್ರಿಲ್ 24: ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹತ್ವ ಸೂಚನೆಯೊಂದನ್ನು ನೀಡಿದೆ. ಚುನಾವಣೆ ವೆಚ್ಚವನ್ನು ನಿಗದಿತ ಅಧಿಕಾರಿಗಳ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದೆ.
ಪ್ರಜಾ ಪ್ರತಿನಿಧಿ ಕಾಯಿದೆ 1951 ರ ಕಲಂ- 77ರ ಪ್ರಕಾರ, ಚುನಾವಣೆಯ ಸಂದರ್ಭದಲ್ಲಿ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯು ಖುದ್ದು ಭೇಟಿ ನೀಡಿ ಅಥವಾ ತನ್ನ ಚುನಾವಣಾ ಏಜೆಂಟ್ ಮೂಲಕ ಚುನಾವಣೆಗೆ ಸಂಬಂಧಿಸಿದ ಎಲ್ಲ ವೆಚ್ಚಗಳ ಪ್ರತ್ಯೇಕ ಮತ್ತು ಸರಿಯಾದ ಖಾತೆಯನ್ನು ಇಟ್ಟುಕೊಳ್ಳಬೇಕು.

ಅಭ್ಯರ್ಥಿಯು ಚುನಾವಣಾ ವೆಚ್ಚದ ರಿಜಿಸ್ಟರ್‌ಗಳನ್ನು ಪ್ರಚಾರದ ಅವಧಿಯಲ್ಲಿ ಕನಿಷ್ಠ ಮೂರು ಬಾರಿ ತಪಾಸಣೆಗೆ ಒಳಪಡಿಸಬೇಕಿರುತ್ತದೆ. ಅಭ್ಯರ್ಥಿಗಳು ವೆಚ್ಚ ವೀಕ್ಷಕ/ನಿಯೋಜಿತ ಅಧಿಕಾರಿಯ ಮುಂದೆ ಖುದ್ದಾಗಿ ಅಥವಾ ತನ್ನ ಚುನಾವಣಾ ಏಜೆಂಟ್ ಅಥವಾ ಅವನಿಂದ ಅಧಿಕೃತಗೊಳಿಸಿದ ಯಾವುದೇ ವ್ಯಕ್ತಿಯ ಮೂಲಕ ರಿಜಿಸ್ಟರ್‌ಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.
ಅಭ್ಯರ್ಥಿಗಳು ಈ ವಿಳಾಸ ತಿಳಿಯಿರಿ
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆ ಖರ್ಚು ವೆಚ್ಚದ ರಿಜಿಸ್ಟರ್‌ಗಳನ್ನು ಪರಿಶೀಲನೆ ಇಲ್ಲವೇ ಸಲ್ಲಿಕೆಗಾಗಿ ಈ ವಿಳಾಸವನ್ನು ಸಂಪರ್ಕಿಸಬೇಕಿದೆ. ಏಪ್ರಿಲ್ 26 ರಂದು ಬುಧವಾರ, ಮೇ 02 ಹಾಗೂ ಮೇ 07ರಂದು ಬೆಳಗ್ಗೆ 11.00 ಗಂಟೆಗೆ ಅಭ್ಯರ್ಥಿಗಳು ಚುನಾವಣಾಧಿಕಾರಿ ಕಛೇರಿ, ಗೋವಿಂದರಾಜ ನಗರ, ಬಿಬಿಎಂಪಿ ಪಾಲಿಕೆ ಸೌಧ, ಮೀಟಿಂಗ್ ಹಾಲ್, 1ನೇ ಮುಖ್ಯ ರಸ್ತೆ, 14ನೇ ಕ್ರಾಸ್, ಚಂದ್ರ ಲೇಔಟ್, ಬೆಂಗಳೂರು ಇಲ್ಲಿ ತಪ್ಪದೆ ಹಾಜರುಪಡಿಸಲು ಬಿಬಿಎಂಪಿ ನಿರ್ದೇಶನ ನೀಡಿದೆ.
ಚುನಾವಣೆ ದೃಷ್ಟಿಯಿಂದ ಮಾಡಿದ ಖರ್ಚು ವೆಚ್ಚಗಳನ್ನು ಸಲ್ಲಿಸುವಲ್ಲಿ ಒಂದು ವೇಳೆ ಅಭ್ಯರ್ಥಿಗಳು ವಿಫಲವಾದರೆ ಅಂತವರ ವಿರುದ್ಧ ಐಪಿಸಿಯ ಐಪಿಸಿ 171-I ಜೊತೆಗೆ ಪ್ರಜಾ ಪ್ರತಿನಿಧಿ ಕಾಯಿದೆ 1951 ರ ಕಲಂ- 77ರ ಅಡಿಯಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಜರುಗಿಸಬೇಕಾಗುತ್ತದೆ. ಹೀಗೆಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಅಧಿಕಾರಿಯಾದ ಡಾ. ಅಶೋಕ್ ಡಿ.ಆರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಬಿಎಂಪಿಯಿಂದ ಮತದಾನ ಜಾಗೃತಿ
ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಜಯನಗರ 4ನೇ ಬ್ಲಾಕ್ ನಲ್ಲಿರುವ ವಿಜಯ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಮತದಾನ ಬಗ್ಗೆ ಬಿಬಿಎಂಪಿ ಜಾಗೃತಿ ಮೂಡಿಸಿತು.
ಈ ವೇಳೆ ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಮಾತಣಾಡಿ, ಪ್ರಜಾಪ್ರಭುತ್ವದ ಮತದಾನೋತ್ಸವ ದಿನವಾದ ಮೇ 10 ರಂದು ಎಲ್ಲಾ ಯುವ ಮತದಾರರು ತಪ್ಪದೆ ಮತದಾನ ಮಾಡಲು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು.
ಮೊದಲನೇ ಬಾರಿ ಮತ ಚಲಾಯಿಸುವವರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ಸಾಕಷ್ಟಿರಲಿದ್ದು, ತಾವು ಮತದಾನ ಮಾಡುವ ಜೊತೆಗೆ ಬೇರೆಯವರಿಂದಲೂ ಮತದಾನ ಮಾಡಿಸಬೇಕು. ಯಾರು ಯಾರು ಮೊದಲನೇ ಬಾರಿ ಮತದಾನ ಮಾಡುತ್ತಿದ್ದೀರಾ ಅವರೆಲ್ಲರೂ ರಾಯಭಾರಿಗಳಾಗಿ ತಮ್ಮ ಮನೆಯವರಿಗೆ ಮಾತ್ರವಲ್ಲದೆ ಅಕ್ಕ-ಪಕ್ಕದ ಮನೆಯವರಿಗೆ ತಪ್ಪದೆ ಮತದಾನದ ಹಕ್ಕು ಚಲಾವಣೆ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಬೆಂಗಳೂರು ನಗರದಲ್ಲಿ ಶೇ. 52 ರಷ್ಟು ಮಾತ್ರ ಮತದಾನವಾಗುತ್ತಿದೆ. ಈ ಬಾರಿ ಅದನ್ನು ಶೇ. 75ಕ್ಕೆ ಹೆಚ್ಚಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡಿ. ಒಂದು ಮತವನ್ನು ಕೂಡಾ ನಾವು ಕಡೆಗಣಿಸುವಂತಿಲ್ಲ ಎಂದು ಅವರು ಮತದಾನದ ಮಹತ್ವ ಹಾಗೂ ಯುವಕರ ಜವಾಬ್ದಾರಿ ಕುರಿತು ತಿಳಿಸಿದರು.












Click it and Unblock the Notifications