ಬಿಬಿಎಂಪಿಯ ಮೂರು ವಾರ್ಡ್ ನಲ್ಲಿ 'ಅಮ್ಮ'ನ ಅಭ್ಯರ್ಥಿಗಳು
ಬೆಂಗಳೂರು, ಆಗಸ್ಟ್. 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರುತ್ತಿದ್ದು ಎಐಎಡಿಎಂಕೆ ಅಭ್ಯರ್ಥಿಗಳು ಸ್ಪರ್ಧೆ ಒಡ್ಡುವುದು ನಿಶ್ಚಿತವಾಗಿದೆ.
ತಮಿಳು ಭಾಷಿಕರು ಅಧಿಕವಾಗಿರುವ ವಾರ್ಡ್ ಗಳಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಓಕಳಿಪುರದಲ್ಲಿ ಕರ್ನಾಟಕ ರಾಜ್ಯ ಜಯಲಲಿತಾ ಪೆರಾಯ್ ಕಾರ್ಯದರ್ಶಿ ಪಿ ಸುಬ್ರಮಣಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಟನ್ ಪೇಟೆಯಿಂದ ಕೆ. ಸುಂದರಮೂರ್ತಿ ಅದೃಷ್ಟ ನೋಡಲು ಮುಂದಾಗಿದ್ದಾರೆ. ಸುಭಾಷ್ ನಗರದಿಂದ ಕೆ ಕುಮಾರ್ ಸ್ಪರ್ಧಿಸಿದ್ದಾರೆ.[ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪಟ್ಟಿಯಲ್ಲಿ ವಯಸ್ಸು, ಜಾತಿ ಲೆಕ್ಕಾಚಾರ]

ಪಕ್ಷದ ಜನರಲ್ ಸಕ್ರೆಟರಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರವೇ ಬಿಡುಗಡೆ ಮಾಡಿದ್ದರು. ಒಟ್ಟು 198 ವಾರ್ಡ್ ಗಳಿಗೆ ಆಗಸ್ಟ್ 22 ರಂದು ಚುನಾವಣೆ ನಡೆಯಲಿದೆ.[ಬಿಬಿಎಂಪಿ ಚುನಾವಣೆ 2015, ಪಕ್ಷಗಳ ಬಲಾಬಲ]
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ಪಕ್ಷಗಳಾಗಿ ಕಣಕ್ಕೆ ಇಳಿದಿವೆ. ಈ ಮೊದಲು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದ ಆಮ್ ಆದ್ಮಿ ಪಾರ್ಟಿ ಸಹ ಅಂತಿಮ ಕ್ಷಣದಲ್ಲಿ ಹಿಂದೆ ಸರಿದಿತ್ತು.












Click it and Unblock the Notifications