ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲೆಯ ಚೆಲುವಿಗೆ ಕಾವ್ಯದ ಸೊಗಸು, ಮಣ್ಣಿನ ಮೇಲೆ ಎಂಥ ಮೋಡಿ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮಾರ್ಚ್ 7: ಕಲೆಗೆ ಯಾವ ಮಿತಿಯೂ ಇಲ್ಲ ಎಂಬುದು ತುಂಬ ಹಳೆಯ ಹಾಗೂ ತೆಗೆದುಹಾಕಲು ಸಾಧ್ಯವೇ ಇಲ್ಲದ ಮಾತು. ಬೆಂಗಳೂರು ಮೂಲದ ಕಲಾವಿದೆ ಶಿಲ್ಪಿ ಗುಪ್ತಾಗೂ ಈ ಮಾತು ಹೂಬೇಹೂಬು ಅನ್ವಯಿಸುತ್ತದೆ. ಆಕೆಯ ಕೈ ಬೆರಳುಗಳಿಗೆ ಜಾದೂ ಮಾಡುವ ಶಕ್ತಿಯಿದೆಯೇನೋ ಎನಿಸುವಂತೆ ಸೊಗಸಾದ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ.

ಅದಷ್ಟೇ ಆಗಿದ್ದರೆ ವಿಷಯ ಇಷ್ಟು ಆಸಕ್ತಿಕರವಾಗುತ್ತಿರಲಿಲ್ಲವೇನೋ! ಜೇಡಿಮಣ್ಣಿನ ಮೇಲೆ ಆಕೆ ಸೃಷ್ಟಿಸಿದ ಕಲೆಯಲ್ಲಿ ಕಾವ್ಯ ಮಿಳಿತವಾಗಿದೆ. ಕಲೆಗಾರಿಕೆಯಲ್ಲಿ-ಕಾವ್ಯದ ಜೀವ ಹೊಯ್ದು ಆಸಕ್ತರ ಸೆಳೆಯುವ ಶಿಲ್ಪಿ ಗುಪ್ತಾರ ಚಿತ್ರಕಲೆಯ ಮೊದಲ ಏಕವ್ಯಕ್ತಿ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದೆ.

Bengaluru artist's Poetry in Pottery

ಶಿಲ್ಪಿ ಗುಪ್ತಾರ ಹೊಸ ಸಂಗ್ರಹವು ರೂಮಿ ಹಾಗೂ ಬುದ್ಧನಿಂದ ಸ್ಫೂರ್ತಿಗೊಂಡು ರೂಪಿಸಿರುವಂಥದ್ದು. ಕುಂಬಾರಿಕೆ ಮತ್ತು ಕಾವ್ಯ ಎಂಬ ವಿಚಾರಧಾರೆಯು ಜೇಡಿಮಣ್ಣಿನಿಂದ ತಯಾರಾದ ವಸ್ತು ಎಂಬ ಮಿತಿಯನ್ನು ಮೀರಿ ಆಚೆಗೆ ಸಾಗಲು ಬಳಸಿಕೊಳ್ಳಲಾಗುತ್ತಿದೆ. ತುಣುಕುಗಳನ್ನು ಸೃಷ್ಟಿಸುವುದೇ ಸವಾಲಾದ ಸಂಗತಿ. ಅದರಲ್ಲೂ ವಿಶಿಷ್ಟ ಎನಿಸುವಂತೆ ಸಣ್ಣ ಸಣ್ಣ ಸಂದೇಶ ಅಥವಾ ಕಾವ್ಯದ ಸಾಲುಗಳನ್ನು ಹೊಂದಿಸಿ, ಅದರ ಹಿಂದಿನ ತತ್ವವನ್ನು ವಿವರಿಸುವುದು ಬಹಳ ಸೊಗಸು.

Bengaluru artist's Poetry in Pottery

ಶಿಲ್ಪಿ ಗುಪ್ತಾ ಅವರಿಗೆ ಈ ಕಲೆಯಲ್ಲಿ ಹದಿನೈದು ವರ್ಷದ ಅನುಭವ. ಜೇಡಿ ಮಣ್ಣಿನಲ್ಲಿ ಆಕೆ ಬೆರಳುಗಳು ಎಂಥ ಅದ್ಭುತವನ್ನು ಸೃಷ್ಟಿಸಬಲ್ಲವೋ ಅಂಥದ್ದೇ ಅದ್ಭುತವನ್ನು ರೂಮಿ ಹಾಗೂ ಬುದ್ಧ ಜೀವನದಲ್ಲಿ ಸೃಷ್ಟಿಸಬಲ್ಲರು. ಬರೀ ಪದಗಳಿಂದ ಅಲ್ಲದೆ ತೀವ್ರ ಅಲೋಚನೆಯಿಂದ ಹೊರಬಂದು ಸೂಚಿಸಿರುವಂತೆ ಬಣ್ಣಗಳ ಬಳಕೆ ಮಾಡಲಾಗಿದೆ.

Bengaluru artist's Poetry in Pottery

ಶಿಲ್ಪಿ ಅವರಿಗೆ ಈ ಕಲೆ ಬಗ್ಗೆ ಉತ್ಕಟವಾದ ಪ್ರೀತಿ ಇದೆ. ಆಕೆ ಈ ಕಲೆ ಕಲಿತದ್ದು ಅಮೆರಿಕದಲ್ಲಿ. ಆದರೆ ಅದನ್ನೇ ವೃತ್ತಿಯಾಗಿ ಸ್ವೀಕರಿಸಬೇಕು ಎಂದು ನಿರ್ಧರಿಸಿದ ಮೇಲೆ ಭಾರತಕ್ಕೆ ವಾಪಸ್ ಬಂದಿದ್ದಾರೆ.

Bengaluru artist's Poetry in Pottery

ಮೊದಲಿಗೆ ಶಿಲ್ಪಿ ಅವರು ತಮಗೆ ಬೇಕಾದ ಮಣ್ಣಿನ ಆಕಾರ ಸೃಷ್ಟಿಸುತ್ತಾರೆ. ಆ ನಂತರ ಕೆಲ ದಿನ ಗಾಳಿಯಲ್ಲಿ ಆರಲು ಬಿಡುತ್ತಾರೆ. ಇದಾದ ಮೇಲೆ ತುಂಬ ಸೂಕ್ಷ್ಮವಾಗಿ ಕುಂಚದ ಕೆಲಸ ಮಾಡುತ್ತಾರೆ. ಆ ಹಂತದಲ್ಲಿ ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಕೆತ್ತನೆ ಕೂಡ ಮಾಡುತ್ತಾರೆ.

Bengaluru artist's Poetry in Pottery

ಆರಂಭದಲ್ಲಿ ಬಣ್ಣಗಳು ಪೇಲವವಾಗಿ ಕಾಣಿಸಿಕೊಂಡು ಅಳಿಸಿಹೋಗುತ್ತವೆ. ಮೊದಲು ಅದನ್ನು ಬಿಸಿಗೆ ಒಡ್ಡುವ ಪರೀಕ್ಷೆ ನಡೆಯುತ್ತದೆ. ಆಗ 1200 ಡಿಗ್ರಿ ಬಿಸಿಯಿರುತ್ತದೆ. ಬಿರುಕು ಕಾಣಿಸಿಕೊಳ್ಳುವ, ಬಣ್ಣ ಸಿಪ್ಪೆ ಎದ್ದೇಳುವ ಸಾಧ್ಯತೆಯಿರುತ್ತದೆ. ಮಣ್ಣಿನ ತುಂಡುಗಳನ್ನು ಆರು ಗಂಟೆಗಳ ಕಾಲ ತಂಪು ಮಾಡಲಾಗುತ್ತದೆ. ಅನಂತರ ಕಲಾವಿದರು ಆ ತುಂಡುಗಳ ಮೇಲೆ ಕೆಲಸ ಆರಂಭಿಸುತ್ತಾರೆ. ಈ ತಂತ್ರಗಾರಿಕೆ ಅನುಸರಿಸುವುದಕ್ಕೆ ತುಂಬ ಕ್ರಿಯಾಶೀಲರಾಗಿರಬೇಕು ಮತ್ತು ದೂರದೃಷ್ಟಿ ಇರಬೇಕು. ಎರಡನೇ ಸುತ್ತಿನಲ್ಲಿ ಬೆಂಕಿಗೆ ಒಡ್ಡುವಾಗ ಮತ್ತು ಅಂತಿಮವಾಗಿ ಬಣ್ಣಗಳು ಅಂದುಕೊಂಡಿದ್ದಕ್ಕಿಂತ ತುಂಬ ಚೆನ್ನಾಗಿ ಮೂಡಿಬರುತ್ತವೆ.

Bengaluru artist's Poetry in Pottery

ರೂಮಿ ಕಾವ್ಯ ಹಾಗೂ ಶಿಲ್ಪಿ ಗುಪ್ತಾರ ಕಲೆ ಎರಡೂ ಒಟ್ಟು ಸೇರಿದರೆ ಮಾಡಬಹುದಾದ ಮೋಡಿಗೆ ವಿಪರೀತ ಅಭಿಮಾನಿಗಳಿದ್ದಾರೆ. ಆದರೆ ಒಂದೇ ಥರದ ಕಲೆಯನ್ನು ಮೂರಕ್ಕಿಂತ ಹೆಚ್ಚು ಆಕೆ ಸೃಷ್ಟಿಸುವುದಿಲ್ಲ. ಅದು ಹೊಸದು ಅಂತ ಅನ್ನಿಸುವುದಿಲ್ಲ ಎಂಬ ಕಾಳಜಿ ಅವರದು.

English summary
Art knows no bounds and this artist from Bengaluru only knows this too well. Shilpy Gupta, a potter and artist, blends the magic of poetry into pottery when she creates masterpieces on clay for her brainchild Ceramic Trail. Inspired by the world of poetry, the artist has taken pottery to an all new exciting level and is all set to hold her first ever solo exhibition in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X