• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

KIAL-ಮಧ್ಯ ಏಷ್ಯಾದಲ್ಲೇ ಶ್ರೇಷ್ಠ ವಿಮಾನ ನಿಲ್ದಾಣ

|

ಬೆಂಗಳೂರು, ಮೇ 11: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಶ್ರೇಷ್ಠ ವಿಮಾನ ನಿಲ್ದಾಣ ಎಂದು ಪ್ರಯಾಣಿಕರು ಮತ ಹಾಕಿ ಆಯ್ಕೆ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ದಕ್ಷಿಣ ಏಷ್ಯಾ ಹಾಗೂ ಭಾರತದ ಶ್ರೇಷ್ಠ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

11 ವರ್ಷ ಹಳೆಯದಾದ ಬೆಂಗಳೂರಿನ ಈ ವಿಮಾನ ನಿಲ್ದಾಣಕ್ಕೆ ಇದು ಬಹುದೊಡ್ಡ ಸಾಧನೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಸಿಇಒ ಹರಿ ಕೆ ಮರಾರ್ ಪ್ರತಿಕ್ರಿಯಿಸಿದ್ದಾರೆ.

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

ವಿಶ್ವದರ್ಜೆಯ ಅನುಭವವನ್ನು ನಮ್ಮ ಪ್ರಯಾಣಿಕರಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನೀಡಲು ಬೇಕಾದ ಸೂಕ್ತ ತಂತ್ರಜ್ಞಾನವನ್ನು ಹೊಂದಿದ್ದೇವೆ ಎಂದು ಸಿಇಒ ಹರಿ ಹೇಳಿದರು.

ಕಳೆದ 6 ತಿಂಗಳಲ್ಲಿ ವಿಶ್ವ ವಿಮಾನ ನಿಲ್ದಾಣ ಸಮೀಕ್ಷೆ ಪ್ರಶ್ನಾವಳಿಗಳನ್ನು ನೂರಾರು ದೇಶದ ಪ್ರಯಾಣಿಕರ ಮುಂದಿಟ್ಟು ಬಂದಿರುವ ಉತ್ತರಗಳನ್ನು ಸಂಗ್ರಹಿಸಿ ವರದಿ ತಯಾರಿಸಲಾಗಿದೆ.

ಬೆಂಗಳೂರಿನ ಏರ್ ಪೋರ್ಟ್ ನಿಂದ 3 ಕೋಟಿ ಪ್ರಯಾಣಿಕರ ಪ್ರಯಾಣ

ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಆಗಮನ, ನಿರ್ಗಮನ, ಶಾಪಿಂಗ್, ಭದ್ರತೆ, ರಾಯಭಾರ ಕಚೇರಿ ಜೊತೆ ಸಂಪರ್ಕ ಹೀಗೆ ವಿವಿಧ ಆಯಾಮಗಳಲ್ಲಿ ಪ್ರಯಾಣಿಕರ ಅನುಭವಗಳನ್ನು ಆಧಾರಿಸಿ ವರದಿ ನೀಡಲಾಗಿದೆ.

2019ರ ಸಾಲಿನಲ್ಲಿ 3.36 ಕೋಟಿ ಜನರು ಪ್ರಯಾಣಿಸಿರುವ ಬಗ್ಗೆ ದಾಖಲಾಗಿದ್ದು, ಕಳೆದ 2018ರಲ್ಲಿ 3 ಕೋಟಿ 23 ಲಕ್ಷ 30 ಸಾವಿರ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ

English summary
Bengaluru's Kempegowda International Airport said on Monday it was voted by customers as the best regional airport in India & Central Asia for t
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X