ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರವೇ 2ನೇ ರನ್‌ ವೇ ಆರಂಭ

ಬೆಂಗಳೂರು, ಜನವರಿ 11 : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ 2ನೇ ರನ್‌ ವೇ ಆರಂಭವಾಗಲಿದೆ. ದಕ್ಷಿಣ ಭಾರತದಲ್ಲಿಯೇ ಎರಡು ರನ್‌ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಕೀರ್ತಿ ಬೆಂಗಳೂರಿನ ಮುಡಿಗೇರಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2ನೇ ರನ್‌ ವೇ ನಿರ್ಮಾಣ ಕಾರ್ಯ ಸೆಪ್ಟೆಂಬರ್ 2019ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 1ರಿಂದ ನೂತನ ರನ್‌ ವೇನಲ್ಲಿ ವಿಮಾನಗಳ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

ಹೊಸ ರನ್‌ ವೇ ನಿರ್ಮಾಣಗೊಂಡ ಬಳಿಕ ಮಂಜಿನ ಕಾರಣದಿಂದಾಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳ್ಳುವುದಿಲ್ಲ. ಅಂತಹ ಅತ್ಯಾಧುನಿಕ ವ್ಯವಸ್ಥೆಯನ್ನು ರನ್‌ ವೇನಲ್ಲಿ ಮಾಡಲಾಗಿದೆ.

Bengaluru airport to get 2nd runway; flights to land on Oct 1

ಎರಡು ಹಂತದಲ್ಲಿ 2ನೇ ರನ್‌ ವೇಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 25 ಮಿಲಿಯನ್ ಪ್ಯಾಸೇಂಜರ್ ಕೆಪಾಸಿಟಿ ಹೊಂದಿರುತ್ತದೆ, 2ನೇ ಹಂತದ ಮಾರ್ಗ 4 ಕಿ.ಮೀ. ರನ್‌ ವೇ ನಿರ್ಮಾಣ ಮಾಡಲಾಗುತ್ತದೆ.

ನೂತನ ರನ್‌ ವೇ ಪರಿಸರ ಸ್ನೇಹಿಯಾಗಿದೆ. 'ಸಿಟಿ ಆಫ್ ಗಾರ್ಡನ್‌' ಎಂಬ ಪರಿಕಲ್ಪನೆಯಲ್ಲಿ ರನ್‌ ವೇಯನ್ನು ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಕಟ್ಟಡ ಹಸಿರು ಹೊದಿಕೆಯನ್ನು ಒಳಗೊಂಡಿದೆ.

ನೂತನ ರನ್‌ ವೇಯನ್ನು 13,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿಯೇ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ 2ನೇ ಸ್ಥಾನದಲ್ಲಿದೆ. 2020ರ ವೇಳೆಗೆ ದೇಶದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+