ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಟರ್ಮಿನಲ್-3 ಸ್ಥಾಪನೆ: ಯೋಜನೆಗೆ ಬಿಐಎಎಲ್ ಅನುಮೋದನೆ, ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು: ವಾರ್ಷಿಕ ಮಿಲಿಯನ್‌ಗಟ್ಟಲೇ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru International Airport) ಎರಡು ಟರ್ಮಿನಲ್ ಅನ್ನು ಹೊಂದಿದೆ. ಇದೀಗ 3ನೇ ಟರ್ಮಿನಲ್ (KIA T3) ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಜೊತೆಗೆ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಉದ್ದೇಶಿತ ಟರ್ಮಿನಲ್ ಪ್ಲಾನ್ ಅನ್ನು ಸಹ ರಿಲೀಸ್ ಮಾಡಿದೆ. ಟಿ3 ನಿರ್ಮಾಣ, ಅಂತಿಮ ಗಡುವು, ಯೋಜನೆ ಸಂಪೂರ್ಣ ವಿವರ ಇಲ್ಲಿದೆ.
2026ರ ಹೊತ್ತಿಗೆ ಬೆಂಗಳೂರು ಏರ್‌ಪೋರ್ಟ್ ವಾರ್ಷಿಕವಾಗಿ 43 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ಇದರಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ಈ ಹೊಸ ಟರ್ಮಿನಲ್ ನಿರ್ಮಾಣವಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾರ್ಷಿಕವಾಗಿ 114 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದುತ್ತದೆ ಎಂದು ಬೆಂಗಳೂರು 'ಏವಿಯೇಷನ್ ಆಲ್' ಮಾಹಿತಿ ನೀಡಿದೆ.

ಟರ್ಮಿನಲ್ 3 ಎಲ್ಲಿ ಸ್ಥಾಪನೆ
ಬಹುಕೋಟಿ ವೆಚ್ಚದ ಯೋಜನೆ ಇದಾಗಿದೆ. ಏರ್‌ಪೋರ್ಟ್‌ನಲ್ಲಿ ಎರಡು ಟರ್ಮಿನಲ್ ಇವೆ. ಎರಡನೇ ಟರ್ಮಿನಲ್ 2 ರ ಎದುರು ಹೊಚ್ಚಹೊಸ 'ಟರ್ಮಿನಲ್ 3' ಸ್ಥಾಪನೆ ಮಾಡಲು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಭವಿಷ್ಯದಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುವ ಆಲೋಚನೆ, ದೂರದೃಷ್ಟಿಯಿಂದಲೇ ಈ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಕಂಪನಿ ಮುಂದಾಗಿದೆ.
T3 ಯೋಜನೆ ಪೂರ್ಣಗೊಳ್ಳೋದು ಯಾವಾಗ?
ಉದ್ದೇಶಿತ ಈ ಟರ್ಮಿನಲ್ 3 ಯೋಜನೆಯು ಇನ್ನೂ ಆರಂಭವಾಗಿಲ್ಲ. ಸದ್ಯ ಆರಂಭಿಕ ಹಂತದಲ್ಲಿದೆ. ಯೋಜನೆ ಪ್ಲ್ಯಾನ್‌ಗೆ ಕಂಪನಿ ಅನುಮೋದನೆ ನೀಡಿದೆ. ಇದರ ಕಾಮಗಾರಿ ಆರಂಭವಾಗಬೇಕಿದೆ. ಟರ್ಮಿನಲ್ 3 ಸ್ಥಾಪನೆ ಮಾಡಿ ಮುಗಿಸಲು 2044ರ ಗಡುವು ನೀಡಲಾಗಿದೆ. ಒಟ್ಟು 28 ವರ್ಷಗಳಲ್ಲಿ ಈ ಟರ್ಮಿನಲ್ ತಲೆ ಎತ್ತಲಿದೆ ಎಂದು ತಿಳಿದು ಬಂದಿದೆ.
2026 ಜನವರಿಯಲ್ಲಿ 700,000 ಪ್ರಯಾಣಿಕರ ನಿರ್ವಹಣೆ?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR) ಹಿಂದಿನ ತಿಂಗಳು 2025 ಡಿಸೆಂಬರ್ ನಲ್ಲಿ 694,550 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ವಹಿಸಿದೆ. ಇದು ಈವರೆಗಿನ ಮಾಸಿಕ ಗರಿಷ್ಠ ದಾಖಲೆ ಆಗಿದೆ. ವರ್ಷಾಂತ್ಯದ ಸಂಚಾರದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 28.7ರಷ್ಟು ಪ್ರಗತಿ ಆಗಿದೆ.
Bengaluru Airport's Terminal 3 has been Approved! 🇮🇳
— AviationAll (@AviationAll_) January 11, 2026
The Brand-New Terminal 3 will come-up opposite to Terminal 2. Planned Deadline for Completion of T3 is 2044.
With 3 Terminals, Bengaluru International Airport Limited Aims to Fly 114 Million Passengers per annum! pic.twitter.com/nDUv2YT1ws
ಇನ್ನೂ 2026 ರ ಮೊದಲ ತಿಂಗಳು ಜನವರಿಯಲ್ಲಿ ವಿದೇಶ ದೀರ್ಘ-ಪ್ರಯಾಣದ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಒಂದು (ಜನವರಿ) ತಿಂಗಳಲ್ಲಿ 700,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರ ಗರಿಷ್ಠ ದಾಖಲೆ ತಲುಪುವ ಸಾಧ್ಯತೆಯಿದೆ. 2025 ರಲ್ಲಿ ಬೆಂಗಳೂರು ಏರ್‌ಪೋರ್ಟ್ ಒಟ್ಟು 43.82 ಮಿಲಿಯನ್ ಜನರನ್ನು ನಿರ್ವಹಣೆ ಮಾಡಿತ್ತು.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications