Gold Price: ನಟಿ ರನ್ಯಾ ರಾವ್ ಬೆನ್ನಲ್ಲೆ, ಚಿನ್ನ ಸಾಗಾಣೆ ವ್ಯಕ್ತಿ ಬಂಧನ: Bengaluru Airport
ಬೆಂಗಳೂರು, ಮಾರ್ಚ್ 09: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಚಿನ್ನ ಸಾಗಾಣೆ ಪ್ರಕರಣಗಳು ಸರಣಿಯಾಗಿ ವರದಿ ಆಗಿವೆ. ಚಿನ್ನ ಸಾಗಾಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಅನೇಕ ಪ್ರಕರಣ ನೋಡಿದ್ದೇವೆ. ಇದೀಗ ನಟಿ ರನ್ಯಾ ರಾವ್ ಬಂಧನ ಪ್ರಕರಣ ಮರು ದಿನವೇ ಮತ್ತೊಬ್ಬ ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೆಐಎ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ನಟಿ ರನ್ಯಾ ರಾವ್ ಮಾರ್ಚ್ 3ರಂದು ಬಂಧಿಸಲಾಗಿತ್ತು. ಬಂಧಿತೆ ನಟಿ 14 ಕೆ.ಜಿ. ಚಿನ್ನ ಸಾಗಾಣೆ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾಳೆ. ಇದರ ಮಾರನೇ ದಿನವೇ ಮಾರ್ಚ್ 04 ರಂದು ದುಬೈನಿಂದ 3.44 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ದೃಷ್ಟಿಹೀನ ವ್ಯಕ್ತಿಯೊಬ್ಬನನ್ನು ಬೆಂಗಳೂರು ಏರ್‌ಪೋರ್ಟ್ ಅಧಿಕಾರಿಗಳು ಬಂಧಿಸಿ ಚಿನ್ನ ಜಪ್ತಿ ಮಾಡಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಬಂಧಿತ ವ್ಯಕ್ತಿಯ ಗುರುತು, ಎಲ್ಲಿಯವನೆಂದು ಬಹಿರಂಪಡಿಸಿಲ್ಲ. ಆದರೆ ಮಾರ್ಚ್ 4 ರಂದು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿನ್ನದ ಕಳ್ಳಸಾಗಣೆ ಪ್ರಕರಣಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಕನ್ನಡ ನಟಿ ರನ್ಯಾ ರಾವ್ ಬಂಧಿಸಿ 12.56 ಕೋಟಿ ರೂ. ಮೌಲ್ಯದ ಒಟ್ಟು 14.2 ಕೆಜಿ ಚಿನ್ನ ಜಪ್ತಿ ಮಾಡಲಾಗಿತ್ತು.
ದುಬೈನಿಂದ ವ್ಯಕ್ತಿಯೊಬ್ಬ ಚಿನ್ನ ಸಾಗಾಣೆ ಮಾಹಿತಿಯನ್ನು ಗುಪ್ತಚರ ಮೂಲಗಳಿಂದ ಪಡೆದ ಕಸ್ಟಮ್ಸ್ ಅಧಿಕಾರಿಗಳು ಆತ ಬೆಂಗಳೂರಿಗೆ ಬರುತ್ತಿದ್ದಂತೆ ಸೆರೆ ಹಿಡಿದರು. ದೃಷ್ಟಿಹೀನನಿಂದ ಒಟ್ಟು 3.44 ಕೋಟಿ ಚಿನ್ನ ಜಪ್ತಿ ಮಾಡಿದ್ದಾರೆ..

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಬಂಧಿತ ವ್ಯಕ್ತಿಯನ್ನು ನಿಯಮಗಳ ಪ್ರಕಾರ, ಅಧಿಕಾರಿಗಳು ಮತ್ತು ಸಿಬ್ಬಂಧಿ ತಪಾಸಣೆ ನಡೆಸಿದ್ದಾರೆ. ಶರ್ಟ್ ಅಡಿಯಲ್ಲಿ 3,44,38,796 ರೂಪಾಯಿ ಮೌಲ್ಯದ 3,995.22 ಗ್ರಾಂ ಚಿನ್ನ ಪತ್ತೆ ಆಗಿದೆ. ಆಧಾರವೇ ಇಲ್ಲದ ಚಿನ್ನ ಇದೆಂದು ತಿಳಿದು ಬಂದಿದೆ. ಕೂಡಲೇ ಚಿನ್ನ ಕಳ್ಳಸಾಗಣೆ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ...












Click it and Unblock the Notifications