BLR Airport: ಹೊಸ 'ಎವಿಡಿ' ವ್ಯವಸ್ಥೆ ಆರಂಭಿಸಿದ KIAL: ಏನಿದು?
ಬೆಂಗಳೂರು, ಫೆಬ್ರವರಿ 13: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) ಕಾರ್ಯದಕ್ಷತೆ ವಿಚಾರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ವಾಯುನೆಲೆ ಕಾರ್ಯಾಚರಣೆಗಳ ವರ್ಧನೆಗೆ ಸಂಬಂಧಿಸಿದಂತೆ ಹೊಸ AVD ವ್ಯವಸ್ಥೆಯೊಂದನ್ನು ಪರಿಚಯಿಸಿದೆ. ಇದರಿಂದ ಹತ್ತು ಹಲವು ಪ್ರಯೋಜನಗಳು ಇವೆ ಎಂದು ಸ್ವತಃ ಕೆಐಎಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣವು ವೈಮಾನಿಕ ವೀಕ್ಷಣೆ ಪ್ರದರ್ಶನ (AVD) ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ವಾಯುನೆಲೆ ಕಾರ್ಯಾಚರಣೆಗಳ, ನಿರ್ವಹಣೆಗಳ ಬಲವರ್ಧನೆಗೆ ಸಹಾಯಕವಾಗಿದೆ. ಈ ಹೊಸ AVD ವ್ಯವಸ್ಥೆಯು ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರದಲ್ಲಿ (AOCC) ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಮೂಲಕ ಎಲ್ಲಾ ವಾಯುನೆಲೆ ಚಟುವಟಿಕೆಗಳ ನೈಜ-ಸಮಯದ, ಏಕೀಕೃತ ಗೋಚರತೆ ಒದಗಿಸುತ್ತದೆ.

ಈ ವ್ಯವಸ್ಥೆಯು ವಿಮಾನ ಚಲನೆಗಳು, ಟ್ಯಾಕ್ಸಿಯಿಂಗ್ ಮತ್ತು ನೆಲದ ವಾಹನ ಸಮನ್ವಯ ಸೇರಿದಂತೆ ವಾಯುನೆಲೆ ಕಾರ್ಯಾಚರಣೆಗಳ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಇದು ತಡೆರಹಿತ ನಿಯಂತ್ರಣ ಮತ್ತು ಸುಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
ಒಂದೇ ವೇದಿಕೆಯಲ್ಲಿ ವಾಯುನೆಲೆ ಸಂಬಂಧ ಕಾರ್ಯಾಚರಣೆಗಳನ್ನು ಏರ್‌ಪೋರ್ಟ್ ನಿರ್ವಾಹಕರು ಹಾಗೂ ಪಾಲುದಾರರು ವೀಕ್ಷಿಸಬಹುದಾಗಿದೆ. ಹೀಗೆ ಹತ್ತು ಹಲವು ಪ್ರಯೋಜವ ಈ AVD ವ್ಯವಸ್ಥೆ ನೀಡುತ್ತದೆ. ಸಮಯಕ್ಕೆ ತಕ್ಕದಾಗಿ ಸಮನ್ವಯ ಮತ್ತು ತ್ವರಿತ, ಮಾಹಿತಿ ಆಧಾರಿತ ನಿರ್ಧಾರಗಳನ್ನು ಆಕ್ಟಿವ್ ಮಾಡುತ್ತದೆ.

ವಿಶೇಷವೇನೆಂದರೆ ಹೊಸ ವ್ಯವಸ್ಥೆಯಿಂದ ವಿಮಾನ ಟ್ಯಾಕ್ಸಿಯಿಂಗ್ ವೇಗ ಮತ್ತು ರನ್‌ವೇ ಆಕ್ಯುಪೆನ್ಸಿ ಸಮಯ (ROT) ನಂತಹ ನಿರ್ಣಾಯಕ ನಿಯತಾಂಕಗಳ ಟ್ರ್ಯಾಕ್ ಮಾಡಬಹುದಾಗಿದೆ. ಗಾಳಿ ಹರಿವು ಕುರಿತು ಅತ್ತುತ್ತಮ ಮಾಹಿತಿ ನೀಡುತ್ತದೆ. ಒಟ್ಟಾರೆ ಈ ವ್ಯವಸ್ಥೆಯ ಮೇಲ್ವಿಚಾರಣೆ, ಸುರಕ್ಷತೆ ಮತ್ತು ಕಾರ್ಯಾಚರಣೆ ಮೇಲೆ ಪರಿಣಾಮಕಾರಿ ಪ್ರಭಾವ ಉಂಟು ಮಾಡುತ್ತದೆ ಎಂದು ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.
ಸುರಕ್ಷತಾ ತಂತ್ರಜ್ಞಾನ ಅಳವಡಿಕೆ ಸಹಾಯ
ಹೊಸ ವ್ಯವಸ್ಥೆ ಕುರಿತು BIAL ಮುಖ್ಯ ಕಾರ್ಯಾಚರಣಾ ಅಧಿಕಾರಿ ಸತ್ಯಕಿ ರಘುನಾಥ್ ಪ್ರತಿಕ್ರಿಯಿಸಿರು, ಬೆಂಗಳೂರು ಏರ್‌ಪೋರ್ಟ್ ದಕ್ಷತೆ, ಸುರಕ್ಷತೆ ಹಾಗೂ ಸುಸ್ಥಿರತೆಗೆ ಹೆಚ್ಚಿನ ತಂತ್ರಜ್ಞಾನ ಅಳವಡಿಕೆಗೆ ಅನುಕೂಲ ಒದಗಿಸುತ್ತದೆ. ಈ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ನೈಜ-ಸಮಯದ ಮೇಲ್ವಿಚಾರಣೆ ಸಕ್ರಿಯಗೊಳಿಸುತ್ತದೆ ಎಂದರು.
ವಾಯುನೆಲೆ ಕಾರ್ಯಾಚರಣೆಗಳ ವರ್ಧನೆ ಜೊತೆಗೆ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಕ್ಷಮತೆಯನ್ನು ಸುಧಾರಣೆಗೆ ಸಹಕಾರಿಯಾಗಿದೆ. ಪ್ರಯಾಣಿಕರಿಗೂ ಉತ್ತಮ ಪ್ರಯಾಣದ ಅನುಭವ ಒದಗಿಸಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು ಏರ್‌ಪೋರ್ಟ್ ಹೊಸ ಆವಿಷ್ಕಾರಗಳನ್ನು ಅವಳಡಿಸಿಕೊಳ್ಳುವಲ್ಲಿ, ಸೂಕ್ತ ನಿರ್ವಹಣೆ, ಬದ್ಧತೆಗೆ ಸದಾ ಮುಂಚೂಣಿಯಲ್ಲಿರುತ್ತದೆ. ಇಂತಹ ಕಾರ್ಯಗಳಿಂದಲೇ ಬೆಂಗಳೂರು ಏರ್‌ಪೋರ್ಟ್ ಸ್ಥಾನಮಾನ ಗಟ್ಟಿಯಾಗಿದೆ. ಇಂದಿನ AVD ವ್ಯವಸ್ಥೆಯು ಏರ್‌ಪೋರ್ಟ್ ಕಾರ್ಯಾಚರಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.












Click it and Unblock the Notifications