Get Updates
Get notified of breaking news, exclusive insights, and must-see stories!

Bengaluru Cab Driver: ಟೋಲ್‌ ತಪ್ಪಿಸಿದ ಕಳ್ಳಾಟ ಪ್ರಶ್ನಿಸಿದ ಯುವತಿ ಮೇಲೆ ಕ್ಯಾಬ್‌ ಚಾಲಕನಿಂದ ಹಲ್ಲೆ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಲು ಟೋಲ್‌ ಗೇಟ್‌ ದಾಟಬೇಕು. ಆದರೆ ಕೆಲ ಕ್ಯಾಬ್‌ ಚಾಲಕರು ಟೋಲ್‌ನಿಂದ ತಪ್ಪಿಸಿಕೊಳ್ಳಲು ಕಳ್ಳಾಟ ಶುರು ಮಾಡಿರುವ ಆರೋಪ ಕೇಳಿಬಂದಿದೆ. ಕ್ಯಾಬ್‌ ಚಾಲಕನೊಬ್ಬ ಇದೇ ರೀತಿ ಟೋಲ್‌ ತಪ್ಪಿಸಲು ಮಾರ್ಗ ಬದಲಿಸಿದ್ದು, ಇದನ್ನು ಪ್ರಶ್ನಿಸಿದ ಯುವತಿ ಮೇಲೆ ಹಲ್ಲೆ ಯತ್ನ ನಡೆಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಕ್ಯಾಬ್‌ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 20ರಂದು ಈ ಘಟನೆ ನಡೆದಿದ್ದು, ಆರೋಪಿ ಕ್ಯಾಬ್‌ ಚಾಲಕ ಕೇರಳದ ತ್ರಿಶೂರ್ ಮೂಲದ ಅಜಾಸ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ಬಂಗಾಳ ಮೂಲಕ ಯುವತಿ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ವಿಮಾನ ನಿಲ್ದಾಣಕ್ಕೆ ಹೋಗಲು ಅವರು ಆನ್‌ಲೈನ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಆಕೆ ಟೋಲ್ ಶುಲ್ಕವನ್ನು ಪಾವತಿಸಿದ್ದರೂ ಚಾಲಕ ಟೋಲ್ ರಸ್ತೆಯನ್ನು ತಪ್ಪಿಸಿದ್ದಾನೆ ಎಂದು ಆರೋಪಿಸಿದ್ದಾರೆ.

Bengaluru Airport Cab Driver Assaults Woman After She Questions Toll Evasion

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೋಲ್ ಮಾರ್ಗವನ್ನು ತಪ್ಪಿಸಿದ ಬಗ್ಗೆ ಯುವತಿ ಪ್ರಶ್ನೆ ಮಾಡಿದ್ದಾರೆ. ಬಳಿಕ ಚಾಲಕ ಕೂಡ ವಾಗ್ದಾದ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಪ್ರಯಾಣದ ಸಮಯದಲ್ಲಿ ಟೋಲ್ ಶುಲ್ಕವನ್ನು ಪಾವತಿಸಿದ್ದರೂ ಟೋಲ್ ರಸ್ತೆಯನ್ನು ತಪ್ಪಿಸಿದ್ದಾನೆ. ಆಕೆ ಅವನನ್ನು ಪ್ರಶ್ನಿಸಿದಾಗ, ಅವನು ಸರಿಯಾದ ವಿವರಣೆ ನೀಡಲಿಲ್ಲ. ಇದರಿಂದಾಗಿ ಯುವತಿ ವಾಹನವನ್ನು ನಿಲ್ಲಿಸುವಂತೆ ಕೇಳಿಕೊಂಡಳು. ಇದೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಬಳಿ ಯುವತಿ ಕ್ಯಾಬ್‌ನಿಂದ ಕೆಳಗಿಳಿದು ಬೇರೆ ಕ್ಯಾಬ್ ಬುಕ್ ಮಾಡಿದರು. ಬೇರೆ ಕ್ಯಾಬ್ ಹತ್ತಲು ಮುಂದಾದಾಗ ಆರೋಪಿ ಚಾಲಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿ ಚಾಲಕ ಘಟನೆ ನಡೆದ ಎರಡು ದಿನಗಳ ಮೊದಲು ಕೇರಳದಿಂದ ಬೆಂಗಳೂರಿಗೆ ಬಂದಿದ್ದ. ಅಲ್ಲದೆ ಈ ಕ್ಯಾಬ್‌ ಬುಕಿಂಗ್‌ ಸ್ವೀಕರಿಸಿದಾಗ ಮದ್ಯದ ಅಮಲಿನಲ್ಲಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಯುವತಿಯ ಸಂಬಂಧಿ ನೀಡಿರುವ ದೂರಿನ ಮೇರೆಗೆ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಕ್ರಿಮಿನಲ್ ಬೆದರಿಕೆ ಮತ್ತು ತಪ್ಪು ಸಂಯಮ ಸೇರಿದಂತೆ ಇತರ ಸೆಕ್ಷನ್‌ ಅಡಿಯಲ್ಲಿ ಕೇಸ್‌ ದಾಖಲಿಸಿ ಆರೋಪಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಏರ್‌ಪೋರ್ಟ್‌ ಟೋಲ್‌ ತಪ್ಪಿಸಲು ಸದ್ಯ ಹಲವು ಅನ್ಯ ಮಾರ್ಗಗಳನ್ನು ಚಾಲಕರು ಕಂಡುಕೊಂಡಿದ್ದು, ಇದಕ್ಕೂ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+