Bengaluru: ಸಂಚಾರ ಉಲ್ಲಂಘನೆಯ ದಂಡದ ಮೇಲೆ ಶೇ 50 ರಿಯಾಯಿತಿ- ಎಲ್ಲಿ ಪರಿಶೀಲಿಸುವುದು? ಹೇಗೆ ರಿಯಾಯಿತಿ ಪಡೆಯುವುದು? ವಿವರ

ಬೆಂಗಳೂರು, ಜುಲೈ 6: ಬಾಕಿ ಉಳಿದಿರುವ ಸಂಚಾರ ದಂಡದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ಕರ್ನಾಟಕ ಸರ್ಕಾರ ಬುಧವಾರ ಘೋಷಿಸಿದೆ. ಇದಕ್ಕಾಗಿ ಜುಲೈ 06 ರಿಂದ ಸೆಪ್ಟೆಂಬರ್ 9 ರ ಗಡುವನ್ನು ನಿಗದಿಪಡಿಸಿದೆ.

ತಾತ್ಕಾಲಿಕ ರಿಯಾಯಿತಿಯನ್ನು ಮೊದಲ ಬಾರಿ ಫೆಬ್ರವರಿ 11, 2023 ರಂದು ನೀಡಲಾಗಿತ್ತು. ಈಗ ಮತ್ತೆ ಸೆಪ್ಟೆಂಬರ್ 9 ರ ಗಡುವನ್ನು ನಿಗದಿಪಡಿಸಿ, ಮತ್ತೆ ರಿಯಾಯತಿಯನ್ನು ನೀಡಲಾಗಿದೆ.

Bengaluru: 50% Discount On Traffic Violation Fines: How to Pay and Get Refunds

ನೀವು ದಂಡವನ್ನು ಹೇಗೆ ಪಾವತಿಸಬೇಕು? ರಿಯಾಯಿತಿಯನ್ನು ಹೇಗೆ ಪಡೆಯಬೇಕು? ಎಂಬುದರ ವಿವರ ತಿಳಿಯಿರಿ

* ಅಧಿಕೃತ ಕರ್ನಾಟಕ ರಾಜ್ಯ ಪೊಲೀಸ್ (KSP) ಮೊಬೈಲ್ ಅಪ್ಲಿಕೇಶನ್ ಮೂಲಕ ದಂಡವನ್ನು ಪಾವತಿಬೇಕು.

* ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕು.

* ಅದರಲ್ಲಿ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ನಮೂದಿಸಬೇಕು.

* ಬಾಕಿ ಪಾವತಿಯನ್ನು ಅದೇ ವೆಬ್‌ಸೈಟ್‌ ಮೂಲಕ ಮಾಡಬಹುದು

* ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು.

* ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಪಡೆದು ನಂತರ ದಂಡವನ್ನು ಪಾವತಿಸಬಹುದು.

Bengaluru: 50% Discount On Traffic Violation Fines: How to Pay and Get Refunds

ಸವಾರರು ಜುಲೈ 6 ಮತ್ತು ಸೆಪ್ಟೆಂಬರ್ 9 ರ ನಡುವೆ ಬಾಕಿಯನ್ನು ಪಾವತಿಸಬಹುದು ಎಂದು ಬಿಟಿಪಿ ಹೇಳಿದೆ.

ಯಾವುದೇ ಸ್ಪಷ್ಟೀಕರಣಕ್ಕಾಗಿ ದಯವಿಟ್ಟು 080-22942883 ಅಥವಾ 080-22943381 ಅನ್ನು ಸಂಪರ್ಕಿಸಬೇಕು. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಲು ಮತ್ತು ಸೆಪ್ಟೆಂಬರ್ 9 ರ ಮೊದಲು ಯಾವುದೇ ಬಾಕಿ ಇರುವ ದಂಡವನ್ನು ತೆರವುಗೊಳಿಸಲು ವಿನಂತಿಸಲಾಗಿದೆ ಎಂದು ಬಿಟಿಪಿ ತಿಳಿಸಿದೆ.

ಕರ್ನಾಟಕ ಸರ್ಕಾರವು ಕಾನೂನು ಉಲ್ಲಂಘಿಸುವವರಿಗೆ ಇದು ಮೂರನೇ ಬಾರಿ ರಿಯಾಯಿತಿಯನ್ನು ನೀಡುತ್ತಿದೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಇದೇ ರೀತಿಯ ರಿಯಾಯಿತಿಯನ್ನು ನೀಡಲಾಯಿತು. ಆ ನಂತರ ಬೆಂಗಳೂರು ಟ್ರಾಫಿಕ್ ಪೊಲೀಸರು 120 ಕೋಟಿ ರೂಪಾಯಿಗಳನ್ನು ಬಾಕಿಯಿರುವ ದಂಡದಲ್ಲಿ ಸಂಗ್ರಹಿಸಿದ್ದರು. ರಿಯಾಯತಿ ದಂಡ ಪಾವತಿಸುವ ಪ್ರಕ್ರಿಯೆಯನ್ನು ಮಾರ್ಚ್‌ನಲ್ಲಿ 15 ದಿನಗಳವರೆಗೆ ವಿಸ್ತರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+