Bengaluru 2nd Airport: ಬೆಂಗಳೂರಿಗೆ ಎರಡಲ್ಲ ಮೂರು ವಿಮಾನ ನಿಲ್ದಾಣ, ಏನಿದು ಚರ್ಚೆ ?
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿಗೆ ಎರಡು ವಿಮಾನ ನಿಲ್ದಾಣವಲ್ಲ, ಮೂರು ವಿಮಾನ ನಿಲ್ದಾಣಗಳು ಬೇಕು ಎನ್ನುವ ಬಗ್ಗೆಯೂ ಜೋರು ಚರ್ಚೆಗಳು ನಡೆದಿವೆ. ಹೌದು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಳವಾಗುತ್ತಿದ್ದು. ಎರಡನೇ ವಿಮಾನ ನಿಲ್ದಾಣ ಬೇಕು ಎನ್ನುವ ಬೇಡಿಕೆ ಜೋರಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವೇಗ ಕೊಟ್ಟಿದೆ. ಆದರೆ ಈಗ ಇರುವ ವಿಮಾನ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣ ಮಾತ್ರವಲ್ಲ ಮತ್ತೊಂದು ವಿಮಾನ ನಿಲ್ದಾಣದ ಅವಶ್ಯಕತೆಯೂ ಇದೆ. ಒಟ್ಟಾರೆ ಮೂರು ವಿಮಾನ ನಿಲ್ದಾಣ ಬೆಂಗಳೂರಿಗೆ ಬೇಕಿದೆ ಎಂದು ಹೇಳಲಾಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು ಅಭಿವೃದ್ಧಿ ವೇಗವಾಗಿದೆ. ಇದೀಗ ದೇವನಹಳ್ಳಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಇದೆಯಾದರೂ ಈಗಾಗಲೇ ಲಕ್ಷಾಂತರ ಜನ ಈ ಸೇವೆಯನ್ನು ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಳವಾಗುವುದರಿಂದ ನೆಲಮಂಗಲ ಅಥವಾ ಕನಕಪುರ ರಸ್ತೆಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಈಗಾಗಲೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಡುವೆ ಸಣ್ಣ ವೈಮನಸ್ಸು ಮೂಡಿದೆ. ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನಲ್ಲೇ ಯಾಕೆ ಅಥವಾ ದಕ್ಷಿಣ ಕರ್ನಾಟಕದ ಭಾಗದಲ್ಲಿ ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಇದೀಗ ಮೂರು ವಿಮಾನ ನಿಲ್ದಾಣಗಳಿದ್ದರೂ ಕಡಿಮೆಯೇ ಎಂದು ಹೇಳಲಾಗುತ್ತಿದೆ.
ಮೂರು ವಿಮಾನ ನಿಲ್ದಾಣಗಳ ಬಗ್ಗೆ ಚರ್ಚೆ: ಇನ್ನು ಬೆಂಗಳೂರು ಅಭಿವೃದ್ಧಿಯಾಗುತ್ತಿದ್ದು. ಮುಂದಿನ ದಿನಗಳಲ್ಲಿ ಈ ನಗರದ ಮೇಲೆ ಅವಲಂಬನೆಯಾಗುವುದು ಇನ್ನಷ್ಟು ಹೆಚ್ಚಳವಾಗಲಿದೆ. ಅಲ್ಲದೆ ಅಭಿವೃದ್ಧಿ ಹೊಂದಿರುವ ನಗರಗಳಲ್ಲಿ ಎರಡು ಅಥವಾ ಮೂರು ವಿಮಾನ ನಿಲ್ದಾಣಗಳು ಇವೆ. ಇದೇ ಮಾದರಿಯನ್ನು ಬೆಂಗಳೂರಲ್ಲೂ ಮಾಡಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಆದರೆ, ಇದರಿಂದ ಇನ್ನೆರಡು ವಿಮಾನ ನಿಲ್ದಾಣಗಳು ಬೆಂಗಳೂರಲ್ಲಿ ನಿರ್ಮಾಣ ಆಗಲ್ಲ. ಒಂದು ವಿಮಾನ ನಿಲ್ದಾಣ ನಿರ್ಮಾಣವಾದರೆ, ಇನ್ನೊಂದು ವಿಮಾನ ನಿಲ್ದಾಣ ಅಭಿವೃದ್ಧಿಯಾಗಲಿದೆ.
ಈ ಸಂಬಂಧ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮೂರು ವಿಮಾನ ನಿಲ್ದಾಣಗಳು ಇದ್ದರೆ ಬೆಂಗಳೂರಿಗೆ ನಿಜವಾಗಿಯೂ ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ. ಈಗಾಗಲೇ ನ್ಯೂಯಾರ್ಕ್, ಪ್ಯಾರಿಸ್ ಹಾಗೂ ಲಂಡನ್‌ನಂತಹ ಜಾಗತಿಕ ನಗರಗಳಲ್ಲಿ ಬಹು ವಿಮಾನ ನಿಲ್ದಾಣ ವ್ಯವಸ್ಥೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ವಿಮಾನ ನಿಲ್ದಾಣವಾಗಿ ಎಚ್‌ಎಎಲ್ ಅಭಿವೃದ್ಧಿ: ಬೆಂಗಳೂರಿನ ಮೂರನೇ ವಿಮಾನ ನಿಲ್ದಾಣವಾಗಿ ಎಚ್‌ಎಎಲ್ ಅಭಿವೃದ್ಧಿ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಈ ವಿಮಾನ ನಿಲ್ದಾಣ ಅಭಿವೃದ್ಧಿಯಾದರೂ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಇರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲವೂ ಇದೇ ವಾರದಲ್ಲಿ ಉತ್ತರ ಸಿಗಲಿದೆ.












Click it and Unblock the Notifications