Bengaluru 2nd Airport: ಕರ್ನಾಟಕ - ತಮಿಳುನಾಡಿನ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕ!
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿನ ಪ್ರಮುಖ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬೆಲೆ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಎರಡೂ ರಾಜ್ಯಗಳಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ವಿಮಾನ ನಿಲ್ದಾಣಗಳು. ಕರ್ನಾಟಕದ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಹಾಗೂ ತಮಿಳುನಾಡಿನ ಹೊಸೂರಿನ ವಿಮಾನ ನಿಲ್ದಾಣದಿಂದ ನಿರ್ಮಾಣವಾಗುತ್ತಿರುವುದರಿಂದ ದಕ್ಷಿಣ ಭಾರತದ ಈ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದ್ದು.
ಭೂಮಿ ಬೆಲೆ ಜಾಸ್ತಿ ಆಗ್ತಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ನಾಲ್ಕರಿಂದ ಐದು ಜಾಗಗಳನ್ನು ಗುರುತಿಸಲಾಗಿದೆ. ಇನ್ನಷ್ಟೇ ಎರಡನೇ ವಿಮಾನ ನಿಲ್ದಾಣದ ಜಾಗ ಫೈನಲ್ ಆಗಬೇಕಾಗಿದೆ. ಇನ್ನು ಹೊಸೂರು ವಿಮಾನ ನಿಲ್ದಾಣಕ್ಕೆ 2 ಜಾಗಗಳನ್ನು ಫೈನಲ್ ಮಾಡಲಾಗಿದೆ. ಹೀಗಾಗಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಿವೆ.

ಎರಡೂ ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ ಶುರುವಾಗಿದೆ. ಎರಡೂ ರಾಜ್ಯಗಳ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಾಗೂ ಈ ನಿಲ್ದಾಣಗಳಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವ ಜಾಗಗಳಲ್ಲಿ ಜಮೀನು, ಭೂಮಿ ಹಾಗೂ ಆಸ್ತಿಗೆ ಬಂಪರ್ ಬೆಲೆ ಕೇಳಿ ಬರುತ್ತಿದೆ.
ಅಲ್ಲದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇನ್ನು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತಿರುವಾಗಲೇ ಆ ಜಾಗದ ಆಸ್ತಿದಾರರು ಅಲರ್ಟ್ ಆಗಿದ್ದಾರೆ. ಜಾಗ ಮಾರಾಟ ಮಾಡುವವರು ಸಹ ಅವರ ಪ್ಲಾನ್‌ಗಳನ್ನು ಮುಂದೂಡುತ್ತಿದ್ದಾರೆ.

ತಮಿಳುನಾಡು ಸರ್ಕಾರವು ಹೊಸೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಣ ಮಾಡುವುದಕ್ಕೆ ಎರಡು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ. ಹೊಸೂರು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ತನೇಜಾ ಏರೋಸ್ಪೇಸ್ ಹಾಗೂ ಏವಿಯೇಷನ್ ಎನ್ನುವಮಾಲೀಕತ್ವದ ಖಾಸಗಿ ವಿಮಾನ ನಿಲ್ದಾಣದಿಂದ ಅಂದಾಜು 10 ಕಿ.ಮೀ ದೂರದಲ್ಲಿ ಒಂದು ಜಾಗವನ್ನು ತಮಿಳುನಾಡು ಸರ್ಕಾರ ಶಾರ್ಟ್‌ಲಿಸ್ಟ್ ಮಾಡಿದೆ. ಈ ಪ್ರದೇಶವು ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಬೆಂಗಳೂರು ಹಾಗೂ ಚೆನ್ನೈಗೆ ಸಮೀಪದಲ್ಲಿ ಇದೆ. ಈ ವಿಮಾನ ನಿಲ್ದಾಣದಿಂದ ಬೆಂಗಳೂರಿನ ದಕ್ಷಿಣ ಭಾಗದ ರಿಯಲ್ ಎಸ್ಟೇಟ್‌ಗೆ ಹಾಗೂ ಹೊಸೂರಿನ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದೆ.
ಬೆಂಗಳೂರು ಹಾಗೂ ಸುತ್ತಮುತ್ತಿನ ಜಾಗದಲ್ಲಿ ಭೂಮಿಗೆ ಬಂಪರ್
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಲಾಭವಾಗುವ ನಿರೀಕ್ಷೆ ಇದೆ. ಇದರಲ್ಲಿ ದಾಬಸ್‌ಪೇಟೆ, ನೆಲಮಂಗಲ, ತುಮಕೂರು, ಬಿಡದಿ ಮತ್ತು ಹಾರೋಹಳ್ಳಿ ಸ್ಥಳದಲ್ಲಿ ಎಲ್ಲಿಯಾದರೂ ಒಂದು ಜಾಗದಲ್ಲಿ ಎರಡನೇ ವಿಮಾನ ನಿಲ್ದಣ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ, ಈ ಭಾಗದಲ್ಲಿ ಭೂಮಿ ಬೆಲೆ ಏರಿಕೆ ಆಗುತ್ತಲ್ಲೇ ಇದೆ. ಇನ್ನು ವಿಮಾನ ನಿಲ್ದಾಣ ನಿರ್ಮಾಣದ ಜಾಗದ ಬಗ್ಗೆ ಹೆಸರು ಕೇಳಿ ಬರುತ್ತಿರುವ ಜಾಗದಲ್ಲಿ ಜನ ಜಾಗ ಹಾಗೂ ಆಸ್ತಿ ಮಾರಾಟ ಮಾಡುವ ಪ್ಲಾನ್‌ಗಳನ್ನು ಸಹ ಮುಂದೂಡುತ್ತಿದ್ದಾರೆ.












Click it and Unblock the Notifications