Bengaluru Rent: 2 ಬಿಎಚ್‌ಕೆ ಮನೆಗೆ ₹43,000 ಬಾಡಿಗೆ, 2.5 ಲಕ್ಷ ಬಾಡಿಗೆ!
ಬೆಂಗಳೂರು ಮಹಾನಗರದಲ್ಲಿ ಜೀವನ ಬಲು ದುಬಾರಿ, ಇಲ್ಲಿ ದುಡಿಮೆ ಕೂಡ ಉತ್ತಮವಾಗಿದೆ ಅದಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗೇ ಇರುತ್ತದೆ. 2 ಬಿಎಚ್‌ಕೆ ಮನೆಗೆ ಕೆಲವು ಕಡೆಗಳಲ್ಲಿ 15 ಸಾವಿರ ಬಾಡಿಗೆ ಇದ್ದರೆ, ಇನ್ನೂ ಹಲವು ಕಡೆ 30 ರಿಂದ 40 ಸಾವಿರ ರೂಪಾಯಿಗಳಷ್ಟಿದೆ. ಇಲ್ಲೊಬ್ಬರು ಮಹಿಳೆ 2 ಬಿಎಚ್‌ಕೆ ಮನೆ ಬಾಡಿಗೆಗೆ ಇದೆ ಎಂದು ಹೇಳಿದ್ದು ಅದಕ್ಕೆ ಹೇಳಿರುವ ಅಡ್ವಾನ್ಸ್ ಮತ್ತು ಬಾಡಿಗೆ ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ.
ಐಟಿ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಾಗಿರುವುದು, ನಗರದ ಪ್ರಮುಖ ಏರಿಯಾಗಳಲ್ಲಿ ಬಾಡಿಗೆ ಹೆಚ್ಚಾಗಲು ಕಾರಣವಾಗಿದೆ. ಅದಕ್ಕೆ ಉದಾಹರಣೆ ಎಕ್ಸ್‌ನಲ್ಲಿ ಮಹಿಳೆಯೊಬ್ಬರು ಮಾಡಿರುವ ಪೋಸ್ಟ್.

ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಇದೆ ಎಂದು ಹೇಳಿರುವ ಮಹಿಳೆ ₹2.5 ಲಕ್ಷ ಠೇವಣಿ ಮತ್ತು ₹43,000 ಬಾಡಿಗೆ ಎಂದು ಹೇಳಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.
We are moving out of our current 2BHK in Koramangala and looking for someone who’d be interested in taking it up! Want someone who will be willing to take it as it is (with all the furnishings). Rent 43k, deposit 2.5L, all furniture additional costs. DM for details! pic.twitter.com/aUr5lwnMWF
— Leesha Agarwal (@Theleeshesh) August 1, 2024
ಮಹಿಳೆ ಹೇಳಿದ್ದೇನು?
ಲೀಶಾ ಅಗರ್ವಾಲ್ ಎನ್ನುವ ಬೆಂಗಳೂರು "ನಮ್ಮ ಕೋರಮಂಗಲದಲ್ಲಿರುವ 2 ಬಿಎಚ್‌ಕೆ ಮನೆಯಿಂದ ಹೊರಬರುತ್ತಿದ್ದೇವೆ. ಅದನ್ನು ತೆಗೆದುಕೊಳ್ಳಲು ಯಾರಿಗಾದರೂ ಆಸಕ್ತಿ ಇದ್ದರೆ ಎಲ್ಲಾ ಪೀಠೋಪಕರಣಗಳನ್ನು ಸಿದ್ದವಾಗಿರಬೇಕು ಎಂದು ಕೇಳಿದ್ದಾರೆ. ಮನೆ ಬಾಡಿಗೆ 43,000 ರೂಪಾಯಿ ಬಾಡಿಗೆ ಮತ್ತು 2.5 ಲಕ್ಷ ರೂಪಾಯಿ ಅಡ್ವಾನ್ಸ್. ಮತ್ತು ಪೀಠೋಪಕರಣಗಳಿಗೆ ಹೆಚ್ಚುವರಿ ಪಾವತಿ ಮಾಡಬೇಕು, ಹೆಚ್ಚಿನ ವಿವರಗಳಿಗಾಗಿ ಡಿಎಂ ಮಾಡಿ" ಎಂದು ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದಾರೆ.
ಮನೆಯ ಚಿತ್ರಗಳನ್ನು ಕೂಡ ಹಂಚಿಕೊಂಡಿರುವ ಅವರು, ಆಸಕ್ತಿ ಇರುವವರು ಸಂಪರ್ಕಿಸುವಂತೆ ಕೇಳಿದ್ದಾರೆ. ಸದ್ಯ ಎಕ್ಸ್‌ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. 2 ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಣೆ ಮಾಡಿದ್ದು 700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇನ್ನೂ ಕೆಲವು ಜನ ತರೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.
ಹಲವರು ಬಾಡಿಗೆ ಮತ್ತು ಅಡ್ವಾನ್ಸ್ ಮೊತ್ತವನ್ನು ನೋಡಿ ಶಾಕ್ ಆಗಿದ್ದು. ಇಷ್ಟೊಂದು ಠೇವಣಿಯಾ ಎಂದು ಕೇಳಿದ್ದಾರೆ. "ಮನೆ ಏನೋ ಚನ್ನಾಗಿದೆ. ಆದರೆ ಕೋರಮಂಗಲದಲ್ಲಿ 2.5 ಲಕ್ಷ ರೂಪಾತಿ ಠೇವಣಿ? ಇದನ್ನು ಕೊಡಲು ನಾನು ಅಂಗಾಂಗಳನ್ನು ಮಾರಾಟ ಮಾಡಬೇಕು" ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
2.5 ಲಕ್ಷ ರೂಪಾಯಿ ಅಡ್ವಾನ್ಸ್ ಎಂದರೆ ಏನು ತಮಾಷೆಯಾ, 2 ಬಿಎಚ್‌ಕೆ ಮನೆಗೆ 43,000 ರೂಪಾಯಿ ಬಾಡಿಗೆ ಕೊಡುವುದು ಹುಚ್ಚುತನ ಎಂದಿದ್ದಾರೆ.
ಆಗಾಗ್ಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆ, ಟ್ರಾಫಿಕ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಎಷ್ಟೇ ದುಬಾರಿಯಾದರೂ, ಬೆಂಗಳೂರಿನ ಮೇಲಿನ ಮೋಹ ಮಾತ್ರ ಕಡಿಮೆಯಾಗಿಲ್ಲ, ಇಲ್ಲಿಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.












Click it and Unblock the Notifications