ವಯಸ್ಸು 21, ವರ್ಷಕ್ಕೆ ₹20 ಲಕ್ಷ ಗಳಿಕೆ, ತಿರಸ್ಕರಿಸಿದ ಜಾಬ್ ಆಫರ್‌ಗಳು 13:ಬೆಂಗಳೂರು ಯುವತಿಯ ಬಗ್ಗೆ ತಿಳಿಯಬೇಕೆ? ಈ ವರದಿ ಓದಿ
ಬೆಂಗಳೂರು, ಆಗಸ್ಟ್ 15: 13 ಇಂಟರ್ನ್‌ಶಿಪ್ ಉದ್ಯೋಗಗಳನ್ನು ತಿರಸ್ಕರಿಸಿದ ಬಳಿಕ ಬೆಂಗಳೂರಿನ ಟೆಕ್ಕಿಯೊಬ್ಬರು ವಾಲ್‌ಮಾರ್ಟ್ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ. ಈಗ ಅವರು ವರ್ಷಕ್ಕೆ ₹20 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಈಕೆಯ ವಯಸ್ಸು ಕೇವಲ 21 ಎಂಬುದಾಗಿ ತಿಳಿದುಬಂದಿದೆ. 'ಮನಿ ಕಂಟ್ರೋಲ್' ಪ್ರಕಟಿಸಿರುವ ಈ ವರದಿ ಓದಿ.
ಬೆಂಗಳೂರಿನ ಟೆಕ್ಕಿಯೊಬ್ಬರು ಒಟ್ಟು 13 ಕಂಪನಿಗಳ ಇಂಟರ್ನ್‌ಶಿಪ್ ಉದ್ಯೋಗದ ಆಫರ್ ಅನ್ನು ತಿರಸ್ಕರಿಸಿದ್ದಾರೆ. 21 ವರ್ಷದ ರಿತಿ ಕುಮಾರಿ ಅವರು, ಟಿಸಿಎಸ್, ಇಂಪೋಸಿಸ್ ಮತ್ತು ವಿಪ್ರೋ ಸೇರಿದಂತೆ 13 ಕಂಪನಿಗಳಿಂದ ಉದ್ಯೋಗದ ಆಫರ್‌ಗಳನ್ನು ಪಡೆದಿದ್ದರು.

ಒಂದು ಕಂಪನಿಯು ವರ್ಷಕ್ಕೆ 17 ಲಕ್ಷ ರೂಪಾಯಿಗಳ ಸಂಬಳವನ್ನು ಆಫರ್ ಮಾಡಿತು. ಇದರಲ್ಲಿ ಇಂಟರ್ನ್‌ಶಿಪ್ ಉದ್ಯೋಗಕ್ಕಾಗಿ ಸೇರಿಕೊಂಡರು. ಈಗ ಉದ್ಯೋಗಕ್ಕೆ ಸೇರಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯ ಕಳೆದಿದೆ. ಈಗ ರಿತಿ ಕುಮಾರಿ ಅವರು ವರ್ಷಕ್ಕೆ 20 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ.
ಈ ಕುರಿತು ಮನಿ ಕಂಟ್ರೋಲ್‌ನೊಂದಿಗೆ ಮಾತನಾಡಿರುವ ಅವರು, 'ನನಗೆ ಹಲವು ಆಫರ್‌ಗಳು ಬಂದವು. ಕಡಿಮೆ ಕುಟುಂಬದವರ ಒತ್ತಾಯಕ್ಕೆ ಮಣಿದು ಒಂದು ಆಫರ್ ಅನ್ನು ಒಪ್ಪಿಕೊಂಡೆ. ಇದು ವಾಲ್‌ಮಾರ್ಟ್ ಕಂಪನಿಯ ಆಫರ್ ಆಗಿತ್ತು' ಎಂದು ಹೇಳಿದ್ದಾರೆ.
ಈ ಕಂಪನಿಯಲ್ಲಿ ಇಂಟರ್ನ್‌ಶಿಪ್ ಅವಧಿ ಆರು ತಿಂಗಳಾಗಿತ್ತು. ಈ ಸಮಯದಲ್ಲಿ ಪ್ರತಿ ತಿಂಗಳಿಗೆ 85,000 ರೂ. ಅನ್ನು ನೀಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

'ನಾನು ವಾಲ್‌ಮಾರ್ಟ್ ಇಂಟರ್ನ್‌ಶಿಪ್ ಆಫರ್ ಅನ್ನು ಸ್ವೀಕರಿಸಿದಾಗ ನನಗೆ ಸಂತೋಷವಾಯಿತು. ನಾನು ಅದಕ್ಕೆ ಸೇರಲು ದೃಢವಾಗಿದ್ದೆ' ಎಂದು ಅವರು ವಿವರಿಸಿದ್ದಾರೆ.
ವಾಲ್‌ಮಾರ್ಟ್‌ನಲ್ಲಿ ಕೆಲಸಕ್ಕೆ ಸೇರುವ ನನ್ನ ನಿರ್ಧಾರದಿಂದ ಪೋಷಕರು ಹೆಚ್ಚು ಸಂತೋಷವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕೇವಲ ಆರು ತಿಂಗಳಲ್ಲಿ ಇಂಟರ್ನಶಿಪ್ ಮುಗಿಯುತ್ತಿತ್ತು. ನನ್ನ ಕೆಲಸವನ್ನು ಮುಂದುವರಿಸುತ್ತಾರೋ, ಇಲ್ಲವೋ ಎಂಬ ದಾವಂತ ಪೋಷಕರಲ್ಲಿ ಇತ್ತು. ಆದರೆ, ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡೆ ಎಂದು ಅವರು ತಿಳಿಸಿದ್ದಾರೆ.

ಏನಿದು ವಾಲ್‌ಮಾರ್ಟ್?
ವಾಲ್‌ಮಾರ್ಟ್ ಎಂಬುದು ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇದು ಹೈಪರ್‌ಮಾರ್ಕೆಟ್‌ಗಳನ್ನು ಜಗತ್ತಿನಾದ್ಯಂತ ಹೊಂದಿದೆ. ಈ ಮಾರ್ಕೆಟ್‌ಗಳಿಗೆ ಸೂಪರ್‌ಸೆಂಟರ್‌ಗಳು ಎಂದೂ ಕರೆಯುತ್ತಾರೆ. ಇದು ಬೆಂಟನ್‌ವಿಲ್ಲೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಜಗತ್ತಿನಾದ್ಯಂತ ರಿಯಾಯಿತಿ ಡಿಪಾರ್ಟ್‌ಮೆಂಟ್ ಸ್ಟೋರ್‌ಗಳು ಮತ್ತು ಕಿರಾಣಿ ಅಂಗಡಿಗಳು ವಾಲ್‌ಮಾರ್ಟ್ ಮಾಲೀಕತ್ವದಲ್ಲಿವೆ.
ಈ ಕಂಪನಿಯು 1962 ರಲ್ಲಿ ಸಹೋದರರಾದ ಸ್ಯಾಮ್ ಮತ್ತು ಜೇಮ್ಸ್ ವಾಲ್ಟನ್‌ರಿಂದ ಸ್ಥಾಪಿಸಲ್ಪಟ್ಟಿತು. ಇದು ಸ್ಯಾಮ್ಸ್ ಕ್ಲಬ್ ಚಿಲ್ಲರೆ ಗೋದಾಮುಗಳನ್ನು ಸಹ ಹೊಂದಿದೆ.

ಅಕ್ಟೋಬರ್ 31, 2022ರ ಪ್ರಕಾರ, ವಾಲ್‌ಮಾರ್ಟ್ 24 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು 10,586 ಅಂಗಡಿಗಳು ಮತ್ತು ಕ್ಲಬ್‌ಗಳನ್ನು ಹೊಂದಿದೆ. 46 ವಿಭಿನ್ನ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ವಾಲ್‌ಮಾರ್ಟ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ. ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಲ್ಲಿ ವಾಲ್‌ಮಾರ್ಟ್ ಡಿ ಮೆಕ್ಸಿಕೊ ವೈ ಸೆಂಟ್ರೋಮೆರಿಕಾ ಮತ್ತು ಭಾರತದಲ್ಲಿ ಫ್ಲಿಪ್‌ಕಾರ್ಟ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಚಿಲಿ, ಕೆನಡಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಂಪೂರ್ಣ ಸ್ವಾಮ್ಯದ ಕಾರ್ಯಾಚರಣೆಯನ್ನು ಹೊಂದಿದೆ.












Click it and Unblock the Notifications