ಜನರಿಗೆ ಯಾವಾಗ ಈ ಹೈಟ್ ಗೇಜ್ ಇನ್ನೊಂದು ಬದಿ ಬೀಳುತ್ತೋ ಅನ್ನೋ ಭಯ

ಬೆಂಗಳೂರು, ಸೆ 6: ಸಿಲಿಕಾನ್ ಸಿಟಿಯಲ್ಲಿ ಪಾಲಿಕೆ ಅಧಿಕಾರಿಗಳು ಮಾಡುವ ಕೆಲಸ ಅಧಿಕಾರಿಗಳಿಗೇ ಹಿತ ಅನಿಸಬೇಕು. ಕೆಲಸದಿಂದ ಜನರಿಗೆ ಉಪಯೋಗ ಆಗಲಿ ಅಂತ ಮಾಡುತ್ತಾರೋ ಅಥವಾ ಸುಮ್ಮನೆ ನಾಮ್ ಕೇ ವಾಸ್ತೆಗೆ ಕೆಲಸ ಮಾಡಿದ್ದೀವಿ ಅಂತ ಹೇಳಿ ಕೊಳ್ಳೋಕೆ ಕೆಲಸ ಮಾಡುತ್ತಾರಾ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ ಅಂತಾರೆ ಬೆಂಗಳೂರಿನ ಜನ. ಅಷ್ಟಕ್ಕೂ ಜನ ಹೀಗೆ ಹೇಳೋದಕ್ಕೆ ಕಾರಣ ನೆಲಕ್ಕುರುಳಿ ಬಿದ್ದಿರುವ ಹೈಟ್ ಗೇಜ್..

ಮುಖ್ಯ ಚುನಾವಣಾಧಿಕಾರಿ ಕಛೇರಿ ಮುಂಬಾಗದ ರಸ್ತೆಯ ಮಧ್ಯದಲ್ಲಿ ತುಂಡಾಗಿ ಬಿದ್ದಿರೋ ಹೈಟ್ ಗೇಜ್ ಕತೆಯಿದು. ಉರುಳಿ ಬಿದ್ದಿರುವ ಹೈಟ್ ಗೇಜ್ ಇಂದ ಜನ ಸಾಕಷ್ಟು ಪರದಾಟ ಅನುಭವಿಸುವ ಹಾಗಾಗಿದೆ. ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯದ ಅಂಡರ್ ಪಾಸ್ ಬಳಿ ಹೈಟ್ ಗೇಜ್ ತುಂಡಾಗಿ ಬಿದ್ದಿದ್ದು ಒಂದು ಭಾಗದಲ್ಲಿ ನೇತಾಡುತ್ತಾ ಇತ್ತು.

bengalurians-fears-of-height-guage

ಈ ಭಾಗದಲ್ಲಿ ಒಂದು ರಸ್ತೆ ಶೇಷಾದ್ರಿ ರಸ್ತೆ ಆದರೆ ಇನ್ನೊಂದು ಪ್ಯಾಲೇಸ್ ರಸ್ತೆ ಸಂಪರ್ಕ ಮಾಡುತ್ತದೆ. ಶೇಷಾದ್ರಿ ರಸ್ತೆಯ ಬಳಿ ಹೈಟ್ ಗೇಜ್ ಪರಿಕಲ್ಪನೆಯೇ ಇಲ್ಲ ಇತ್ತ ಪ್ಯಾಲೇಸ್ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಹೈಟ್ ಗೇಜ್ ಇದ್ದಿದ್ದು ಸದ್ಯ ಒಂದು ಕಡೆ ಬಿದ್ದು ತುಂಡು ತುಂಡಾಗಿ ಹೋಗಿದೆ. ಈ ಹೈಟ್ ಗೇಜ್ ಗೆ ಭಾರಿ ಗಾತ್ರದ ವಾಹನ ಡಿಕ್ಕಿ ಹೊಡೆದು ತುಂಡಾಗಿರೋ ಶಂಕೆ ವ್ಯಕ್ತ ಆಗಿದೆ.

ಹೈಟ್ ಗೇಜ್ ತುಂಡಾಗಿ ಬಿದ್ದಿದ್ದು ಭಯದಿಂದ ವಾಹನ ಸವಾರರು ವಾಹನ ಚಲಾಯಿಸುತ್ತಾ ಇರುವ ದೃಶ್ಯ ಕಂಡು ಬರುತ್ತಿದೆ. ಇನ್ನೂ ಸ್ಥಳೀಯರು ಹೇಳುವ ಹಾಗೇ ಈ ಅಂಡರ್ ಪಾಸ್ ಅಲ್ಲಿ 15 ದಿನಗಳಿಗೊಮ್ಮೆ ಹೈಟ್ ಗೇಜ್ ಉರುಳಿ ಬೀಳುತ್ತಂತೆ. ಯಾವುದೇ ಅಪಾಯ ಆಗಬಾರದು ಅಂತ ಸಾಮಾನ್ಯವಾಗಿ ಹೈಟ್ ಗೇಜ್ ಅಳವಡಿಕೆ ಮಾಡುತ್ತಾರೆ.

ಮಹಾರಾಣಿ ಕಾಲೇಜು ಬಳಿ ಇರುವ ಅಂಡರ್ ಪಾಸ್

ಆದರೆ ಮಹಾರಾಣಿ ಕಾಲೇಜು ಬಳಿ ಇರುವ ಅಂಡರ್ ಪಾಸ್ ನೋಡಿದರೆ ಅಪಾಯಗಳು ಸಂಭವಿಸಲು ಹೈಟ್ ಗೇಜ್ ಹಾಕಿದ್ದಾರಾ ಅಂತ ವಾಹನ ಸವಾರರು ಪ್ರಶ್ನೆ ಮಾಡ್ತಾ ಇದ್ದರೆ. ದೊಡ್ದ ದೊಡ್ದ ವಾಹನ ಅಂಡರ್ ಪಾಸ್ ಅಲ್ಲಿ ಹೋಗಬಾರದು , ಒಂದೊಮ್ಮೆ ಹೋದರೆ ಅಂಡರ್ ಪಾಸ್ ಅಲ್ಲಿ ಸಿಲುಕಿ ಕೊಳ್ಳುವ ಚಾನ್ಸಸ್ ಇರುತ್ತೆ. ಇದರಿಂದ ರಸ್ತೆ ಉದ್ದಕ್ಕೂ ಜಾಮ್ ಆಗುವ ಸಾಧ್ಯತೆ ಇರುತ್ತದೆ.

ವಾಹನ ಸವಾರರು ಹೇಳುವ ಪ್ರಕಾರ

ವಾಹನ ಸವಾರರು ಹೇಳುವ ಪ್ರಕಾರ ಈ ತರಹ ಹಲವು ಬಾರಿ ಇಂತಹ ಪ್ರಸಂಗ ನಡೆದು ಹೋಗಿದೆ. ಬಿಬಿಎಂಪಿ ಅಧಿಕಾರಿಗಳು ಖಾಲಿ ಹೈಟ್ ಗೇಜ್ ಅಳವಡಿಕೆ ಮಾಡಿದ್ದಾರಷ್ಟೆ. ಆದರೆ ಇದರ ನಿರ್ವಹಣೆ ಮಾಡುವಲ್ಲಿ ಪಾಲಿಕೆ ಕಂಪ್ಲೀಟ್ ವಿಫಲ ಆಗಿದೆ. ಅಳವಡಿಕೆ ಮಾಡುವಾಗಲೂ ದ್ವಿಮುಖ ಅಂಡರ್ ಪಾಸ್ ಅಲ್ಲಿ ಕೇವಲ ಒಂದು ಕಡೆ ಮಾತ್ರ ಹೈಟ್ ಗೇಜ್ ಅಳವಡಿಕೆ ಮಾಡಲಾಗಿದೆ. ಹೈಟ್ ಗೇಜ್ ಕೆಳಗೆ ಬಿದ್ದ ಎಫೆಕ್ಟ್ ಸಾಕಷ್ಟು ಅಪಘಾತ, ಟ್ರಾಫಿಕ್ ಜಾಮ್ ಉಂಟಾಗಲು ಕಾರಣ ಆಗಿದೆ.

ಈ ಹೈಟ್ ಗೇಜ್ ಇನ್ನೊಂದು ಬದಿ ಬೀಳುತ್ತೋ ಅನ್ನೋ ಭಯ

ಯಾವಾಗ ಈ ಹೈಟ್ ಗೇಜ್ ಇನ್ನೊಂದು ಬದಿ ಬೀಳುತ್ತೋ ಅನ್ನೋ ಭಯದಲ್ಲಿ ಸದ್ಯ ಜನ ಓಡಾಟ ಮಾಡುತ್ತಿದ್ದು ಹೈಟ್ ಗೇಜ್ ಸರಿಯಾಗಿ ನಿರ್ವಹಣೆ ಮಾಡಿ ಅಂತ ವಾಹನ ಸವಾರರು ಬಿಬಿಎಂಪಿ ಬಳಿ ಮನವಿ ಮಾಡಿ ಕೊಂಡಿದ್ದಾರೆ. ಕೊನೆ ಪಕ್ಷ ಈಗ ಬಿದ್ದಿರೋ ಹೈಟ್ ಗೇಜ್ ಕ್ಲಿಯರ್ ಮಾಡಿದ ಮೇಲೆ ಉತ್ತಮ ಕ್ವಾಲಿಟಿ ಉಳ್ಳ ಹೈಟ್ ಗೇಜ್ ಅಳವಡಿಕೆ ಮಾಡಿ ಅಂತ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+