ಬೆಂಗಳೂರಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಸಿಕ್ತು ಅನುಮತಿ, ಎಲ್ಲೆಲ್ಲಿ ನಿರ್ಮಾಣ?
ಬೆಂಗಳೂರು ,ಮಾರ್ಚ್ 15: ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ನಿರ್ಮಾಣ ಮಾಡಲು ಅನುಮತಿ ದೊರೆತಿದೆ.
ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ.
ಈ ಯೋಜನೆ ಪ್ರಕಾರ ಪಾರ್ಕಿಂಗ್ ಶುಲ್ಕ ವಸೂಲಿ ಮತ್ತು ಟಿಕೆಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಯಾವುದೇ ವಾಹನ ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್ ಮೀಟರ್ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು.
ನಂತರ ಅಲ್ಲಿಂದ ಹೊರಡುವಾಗ ಪಾರ್ಕಿಂಗ್ ಮೀಟರ್‌ನಲ್ಲಿ ಟಿಕೆಟ್ ನಲ್ಲಿನ ಬಾರ್ ಕೋಡ್ ತೋರಿಸಿದರೆ ಎಷ್ಟು ಶುಲ್ಕವಾಗಿದೆ ಎಂಬುದನ್ನು ಅದು ತಿಳಿಸುತ್ತದೆ.
ಅದರಂತೆ ಪಾರ್ಕಿಂಗ್ ಮೀಟರ್ ನಲ್ಲಿ ಕ್ರೆಡಿಟ್ , ಡೆಬಿಟ್ ಅಥವಾ ನಿತ್ಯ ನಿಲುಗಡೆ ಮಾಡುವ ವಾಹನಗಳ ಚಾಲಕರಿಗಾಗಿ ನೀಡಲಾಗುವ ಸ್ಮಾರ್ಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಬೆಂಗಳೂರಿನ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ನಿರ್ಮಾಣ
ಅಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ವಾಹನ ನಿಲುಗಡೆ ಶುಲ್ಕವನ್ನು ನಗದಿನ ಬದಲಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಶುಲ್ಕ ವಸೂಲಿ ಮತ್ತು ವಾಹನಗಳನ್ನು ನಿಲುಗಡೆ ಜಾಗದ ಒಳಗೆ ಮತ್ತು ಹೊರಗೆ ಬಿಡಲು ಯಾಂತ್ರಿಕ ವ್ಯವಸ್ಥೆ ಅಳವಡಿಸಲಾಗುತ್ತದೆ.

ಮೂರು ವಿಧದ ರಸ್ತೆಗಳು, ಎಲ್ಲೆಲ್ಲಿ, ಹೇಗೆ
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ದಟ್ಟಣೆ ಮತ್ತು ರಸ್ತೆ ಗುಣಮಟ್ಟವನ್ನಾಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ಎ(ಪ್ರೀಮಿಯಂ) , ಬಿ(ವಾಣಿಜ್ಯ), ಸಿ (ಸಾಮಾನ್ಯ) ಎಂದು ಮೂರು ವಿಭಾಗ ಮಾಡಲಾಗಿದೆ. ಎ ವರ್ಗದಲ್ಲಿ14, ಬಿ ವರ್ಗದಲ್ಲಿ 46 ಹಾಗೂ ಸಿ ವಿಭಾಗದಲ್ಲಿ25 ರಸ್ತೆಗಳು ಬರಲಿವೆ.

ಸ್ಮಾರ್ಟ್ ಪಾರ್ಕಿಂಗ್ ನಿಂದ31.56 ಕೋಟಿ ರೂ ಆದಾಯ ನಿರೀಕ್ಷೆ
ಯೋಜನೆ ಅನುಷ್ಠಾನ ಮತ್ತು10 ವರ್ಷದ ನಿರ್ವಹಣೆಯನ್ನು ಬಿಲ್ಡಿಂಗ್ ಕಂಟ್ರೋಲ್ ಸಲೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ. ಸಂಸ್ಥೆಯು 10 ವರ್ಷ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದು , ಪಾರ್ಕಿಂಗ್ ಶುಕಲ್ಕ ವಸೂಲಿ ಮಾಡಲಿದೆ. ಅದಕ್ಕೆ ಬದಲಾಗಿ ಬಿಬಿಎಂಪಿಗೆ ವಾರ್ಷಿಕ 31.56 ಕೋಟಿ ರೂಗಳಂತೆ 10 ವರ್ಷಗಳಿಗೆ 315.60 ಕೋಟಿ ರೂ.ಗಳನ್ನು ನೀಡಲಿದೆ.

13,600 ವಾಹನ ನಿಲುಗಡೆಗೆ ಅವಕಾಶ
ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ಸ್ ಸಂಸ್ಥೆಗೆ ಇನ್ನೊಂದು ತಿಂಗಳಲ್ಲಿ ಕಾರ್ಯಾದೇಶ ನೀಡಲಾಗುತ್ತಿದ್ದು, ಅದಾದ ಮೂರು ತಿಂಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಯೋಜನೆಯಂತೆ ಎಲ್ಲಾ 85 ರಸ್ತೆಗಳಲ್ಲಿ 3600 ಕಾರು ಹಾಗೂ10 ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಬಿಬಿಎಂಪಿ ರೂಪಿಸಿರುವ ಯೋಜನೆ ಪ್ರಕಾರ ಸುಲ್ಕ ವಸೂಲಿ ಮತ್ತು ಟಿಕೇಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ಸ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಯಾವ ವಾಹನವು ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್ ಮೀಟರ್ಸ್ ಮೂಲಕ ಟಿಕೇಟ್ ಪಡೆದುಕೊಳ್ಳಬಹುದು.












Click it and Unblock the Notifications