ಬಿಸಿಲ ತೀವ್ರತೆಗೆ ಬೆಂಗಳೂರಲ್ಲಿ ಹೆಚ್ಚಿದೆ ಕಣ್ಣುಬೇನೆ, ಜಾಗ್ರತೆ
ಬೆಂಗಳೂರು, ಏ.10: ನಗರದಲ್ಲಿ ಬಿಸಿಲ ಝಳ ಏರುತ್ತಿದ್ದಂತೆ ಕಣ್ಣು ಬೇನೆ ರೋಗ ಕೂಡ ಹೆಚ್ಚಾಗುತ್ತಿದೆ.
ವಾಹನಗಳಿಂದ ಹೊರಹೊಮ್ಮುವ ವಿಷಕಾರಕ ಹೊಗೆ ಜೊತೆಗೆ ಬಿಸಿಲಿನಿಂದ ಈ ರೋಗ ಬರುತ್ತದೆ. ನಾರಾಯಣ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇನೆ ಕಾಣಿಸಿಕೊಂಡು ಒಂದು ವಾರದಿಂದ ಸುಮಾರು 10 ದಿನಗಳವರೆಗೆ ಇರುತ್ತದೆ. ಅಂತಹ ಸಮಯದಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸಬಾರದು.

ಕಣ್ಣಿನಲ್ಲಿ ನವೆ ಆಗುವುದು, ಚುಚ್ಚಿದ ಅನುಭವ, ನೀರು ಸುರಿಯುವುದು, ಕಣ್ಣು ಕೆಂಪಗಾಗುವುದು. ಕಣ್ಣಿನಲ್ಲಿ ನೀರಿನ ಅಂಶವಿರದೆ ಆರಿದಂತಾಗುವುದು.
ಹಾಗಾದರೆ ಮುನ್ನೆಚ್ಚರಿಕೆ ಕ್ರಮಗಳೇನು ಎಂದು ನೋಡೋಣ.. ಕಣ್ಣುಗಳನ್ನು ತೊಳೆಯಲು ಶುದ್ಧ ನೀರನ್ನೇ ಬಳಸಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಸೋಂಕಿತರು ಅಥವಾ ಅಲರ್ಜಿ ಸಮಸ್ಯೆ ಇರುವವರು ಈಜುಕೊಳಕ್ಕೆ ಇಳಿಯಬಾರದು. ಸೋಂಕಿತರು ಗುಣಹೋಗುವವರೆಗೂ ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಕು. ಹಾಗೂ ಹೆಚ್ಚು ಜನದಟ್ಟಣೆ ಇರುವ ಕಡೆ ಪ್ರಯಾಣಿಸಬಾರದು.












Click it and Unblock the Notifications