ಬಿಇಎಂಎಲ್‌ನಿಂದ 400 ಕೋಟಿ ವೆಚ್ಚದಲ್ಲಿ 42 ಮೆಟ್ರೋ ಬೋಗಿಗಳ ಪೂರೈಕೆ

ಬೆಂಗಳೂರು, ಮಾರ್ಚ್ 01: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಬಿಇಎಂಎಲ್ 400 ಕೋಟಿ ರೂ ವೆಚ್ಚದಲ್ಲಿ ಒಟ್ಟು 42 ಬೋಗಿಗಳ ಪೂರೈಕೆ ಮಾಡಲಿದೆ.

ನಮ್ಮ ಮೆಟ್ರೋ 1 ನೇ ಹಂತದಲ್ಲಿ 150 ಬೋಗಿಗಳನ್ನು ಪೂರೈಸುತ್ತಿರುವ ಬಿಇಎಂಎಲ್ ಎರಡನೇ ಹಂತದ ಯೋಜನೆಗೆ 42 ಬೋಗಿಗಳನ್ನು ಪೂರೈಸುವ ಭರವಸೆ ನೀಡಿದೆ.

ಎರಡನೇ ಹಂತದಲ್ಲಿ ಮೈಸೂರು ರಸ್ತೆ-ಕೆಂಗೇರಿ ಹಾಗೂ ಕನಕಪುರ ರಸ್ತೆಯ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್ ಮಾರ್ಗಗಳು ಮೊದಲು ಸಂಚಾರಕ್ಕೆ ಮುಕ್ತವಾಗಲಿದೆ.

BEML to supply 42 metro coaches to Bangalore Metro Corporation Limited for Rs 400 crore

ಮೈಸೂರು ರಸ್ತೆಯ ಮೆಟ್ರೋ ಕಾಮಗಾರಿ ಶೇ.81ರಷ್ಟು ಮುಗಿದಿದೆ. ಕನಕಪುರ ರಸ್ತೆಯ ಮೆಟ್ರೋ ಕಾಮಗಾರಿ ಶೇ.75 ರಷ್ಟು ಪೂರ್ಣಗೊಂಡಿದೆ.

2020-21ರಲ್ಲಿ ಈ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಒಟ್ಟು 42 ಬೋಗಿಗಳನ್ನು ಖರೀದಿಸಲಾಗುತ್ತಿದೆ. ಇದಕ್ಕೆ 400 ಕೋಟಿ ರೂ ಖರ್ಚಾಗಲಿದೆ. ಎರಡನೇ ಹಂತದ ಯೋಜನೆಯಲ್ಲೂ ಬಿಇಎಂಎಲ್‌ಗೆ ಗುತ್ತಿಗೆಯ ಅವಕಾಶ ಲಭ್ಯವಾಗಿದೆ.

1 ನೇ ಹಂತದಲ್ಲಿ 1421 ಕೋಟಿ ರೂ ವೆಚ್ಚದಲ್ಲಿ ಬೋಗಿಗಳ ಖರೀದಿಯಾಗುತ್ತಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನೇರಳೆ ಮಾರ್ಗಕ್ಕೆ 12 ಹಾಗೂ ಯಲಚೇನಹಳ್ಳಿ-ನಾಗಸಂದ್ರ ಹಸಿರು ಮಾರ್ಗಕ್ಕೆ 3 ಬೋಗಿ ಹಸ್ತಾಂತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+