ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 3: ಇಷ್ಟು ದಿನ ಖುದ್ದು ರೈಲ್ವೆ ಅಧಿಕಾರಿಗಳು ಹೋಗಿ ರೈಲ್ವೆ ಹಳಿ ತಪಾಸಣೆ ಮಾಡಬೇಕಿತ್ತು, ಕೇವಲ ರೈಲ್ವೆ ಹಳಿ ಮಾತ್ರವಲ್ಲದೆ ರೈಲ್ವೆ ಹಳಿಗಳ ಮೇಲಿರುವ ವಿದ್ಯುತ್‌ ತಂತಿ, ಯಂತ್ರೋಪಕರಣಗಳು ತಪಾಸಣೆಗೆ ಈ ಯಂತ್ರವನ್ನು ಬಳಕೆ ಮಾಡಲಾಗುತ್ತದೆ.

ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಕಂಪನಿಯು ದೇಶೀಯವಾಗಿ ಸ್ವಯಂ ಚಾಲಿತ 8 ಚಕ್ರಗಳ ಡೀಸೆಲ್‌ ಎಲೆಕ್ಟ್ರಿಕ್‌ ತಪಾಸಣೆ ಮತ್ತು ನಿರ್ವಹಣೆಯ ನೂತನ ಹಳಿ ವಾಹನವನ್ನು ಬಿಡುಗಡೆ ಮಾಡಿದೆ.

ಬೆಂಗಳೂರು-ಹೊಸಪೇಟೆ ನಡುವೆ ಇಂಟರ್‌ಸಿಟಿ ರೈಲಿಗೆ ಒತ್ತಾಯಬೆಂಗಳೂರು-ಹೊಸಪೇಟೆ ನಡುವೆ ಇಂಟರ್‌ಸಿಟಿ ರೈಲಿಗೆ ಒತ್ತಾಯ

ಈ ವಾಹನಕ್ಕೆ ಭಾರತೀಯ ರೈಲ್ವೆ ಇಲಾಖೆಯಿಂದ ಭಾರಿ ಬೇಡಿಕೆ ಇದೆ, ರೈಲ್ವೆ ಹಳಿಗಳ ಮೇಲಿನ ವಿದ್ಯುತ್‌ ತಂತಿ ತಪಾಸಣೆ, ಯಂತ್ರೋಪಕರಣಗಳ ತಪಾಸಣೆಗಾಗಿ ರೈಲ್ವೆ ಇಲಾಖೆಗೆ ಈ ನೂತನ ವಾಹನ ಒದಗಿಸಲಾಗುತ್ತದೆ.

BEML launches automated railway track inspector vehicle

ಗರಿಷ್ಠ 110 ಕಿಮೀ ವೇಗದಲ್ಲಿ ವಾಹನ ಸಂಚರಿಸಬಲ್ಲದು. ಡ್ರೈವರ್‌ ಕ್ಯಾಬಿನ್‌ನಲ್ಲಿಕಂಟ್ರೋಲ್‌ ಸಿಸ್ಟಂ ಮತ್ತು ಡಿಜಿಟಲ್‌ ಡಿಸ್‌ಪ್ಲೇ ಇದೆ. ಕೆಲಸದಲ್ಲಿ ತೊಡಗುವ ಸಿಬ್ಬಂದಿ ಜತೆ ಮಾತನಾಡಲು ವೈರ್‌ಲೆಸ್‌ ಸಂವಹನ ವ್ಯವಸ್ಥೆ, ನಿರ್ವಹಣೆ ಕೆಸಲದ ವೀಕ್ಷಣೆಗೆ ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ ಎಂದು ಬಿಇಎಂಎಲ್‌ ತಿಳಿಸಿದೆ.

English summary
Bharat Earth Movers Limited has launched automated rail track inspection vehicle which will serve Indian railways and metro railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X