• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮಾರ್ಟ್ ಆಗಿ ದುಡ್ಡು ಮಾಡಲು ಹೋಗಿ ಸಿಕ್ಕಿ ಬಿದ್ದ ಚೋರ್ ದಂಪತಿ

|

ಬೆಂಗಳೂರು, ಫೆಬ್ರವರಿ, 10: ದುಡ್ಡು ಮಾಡೋಕೆ ಸ್ಮಾರ್ಟ್ ಹಾದಿ ಕಂಡು ಕೊಂಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಣ ಮಾಡಲಿಕ್ಕೆ ಅವರು ಮಾಡಿದ್ದ ಐಡಿಯಾ, ಇದೊಂದು ತಪ್ಪು ಹಾದಿ ಎಂದು ಯಾರೂ ಕೂಡ ನಿರ್ಧರಿಸಲು ಸಾಧ್ಯವಿಲ್ಲ. ಅಂತಹ ಸ್ಮಾರ್ಟ್ ಐಡಿಯಾ ಮೂಲಕ ಮಾರ್ವಡಿಗಳಿಗೆ ಮೋಸ ಮಾಡಲು ರೂಪಿಸಿದ್ದ ಮೊತ್ತವೇ 7 ಕೋಟಿ ರೂ ! ಅಂದಹಾಗೆ ದಂಪತಿ ಜತೆಗೆ ಇವರಿಗೆ ಸಾತ್ ನೀಡಿದ್ದ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಇಂದ್ರಜಿತ್ ನಾಯಕ್, ಮಂಜುಳಾ, ಮುನಿರಾಜು ಹಾಗೂ ನಂದಾ ಬಂಧಿತರು. ಡಿಪ್ಲೋಮಾ ಪದವೀಧರನಾಗಿದ್ದ ಇಂದ್ರಜಿತ್ ಕಂಪ್ಯೂಟರ್ ಕಲ್ಲಿ ಪರಿಣಿತಿ ಹೊಂದಿದ್ದ. ದುಡ್ಡು ಮಾಡಿ ಶ್ರೀಮಂತರಾಗೋಕೆ ಸ್ಮಾರ್ಟ್ ಐಡಿಯಾ ರೂಪಿಸಿದ್ದರು. ಅದರಂತೆ ಮಂಜುಳಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಪಾವತಿಸಿ ಡಿಮ್ಯಾಂಡ್ ಡ್ರಾಪ್ಟ್ ತರುತ್ತಿದ್ದರು. ಅದನ್ನು ಪತಿ ಇಂದ್ರಜಿತ್ ಕಂಪ್ಯೂಟರ್ ನಲ್ಲಿ ನಕಲಿ ಮಾಡಿ ಥೇಟ್ ಹೊಸ ನಕಲಿ ಡಿಡಿ ತಯಾರಿಸುತ್ತಿದ್ದ. ಹೀಗೆ ತಯಾರಿಸಿದ ಅಸಲಿ ಹೋಲುವ ನಕಲಿ ಡಿಡಿಗಳನ್ನು ಮಾರ್ವಡಿಗಳಿಗೆ ಹೋಗಿ ನೀಡುತ್ತಿದ್ದರು. ನಮಗೆ ತುರ್ತು ಸಾಲ ಬೇಕಿದೆ. ಒಂದು ಲಕ್ಷ ರೂಪಾಯಿ ಮೌಲ್ಯದ ಈ ಡಿಡಿ ನೀವೇ ಇಟ್ಟುಕೊಳ್ಳಿ, ಆದರೆ ನಮಗೆ ತುರ್ತು 60 ಸಾವಿರ ರೂಪಯಿ ಬೇಕಿದೆ ಎಂದು ನಂಬಿಸುತ್ತಿದ್ದರು.

ಬಡ್ಡಿ ಆಸೆಗೆ ಬೀಳುತ್ತಿದ್ದ ಮಾರ್ವಡಿಗಳು ಒಂದು ಲಕ್ಷ ರೂಪಾಯಿ ಮೊತ್ತದ ಡಿಡಿಗಳನ್ನು ಅರ್ಧ ಬೆಲೆಗೆ ಪಡೆಯುತ್ತಿದ್ದರು. ಮಾರ್ವಡಿಗಳ ಬಡ್ಡಿ ಆಸೆಯನ್ನು ಹಾದಿ ಮಾಡಿಕೊಂಡು ನಕಲಿ ಡಿಡಿಗಳನ್ನು ಕೊಟ್ಟು ಹಣ ಪಡೆದು ದಂಪತಿ ಎಸ್ಕೇಫ್ ಆಗುತ್ತಿದ್ದರು. ನಕಲಿ ಡಿಡಿ ತಯಾರಿಸಲು ನಕಲಿ ಸೀಲು ಮತ್ತು ಸಹಿಯನ್ನು ಬಳಸಿ ಬ್ಯಾಂಕ್ ಗಳ ಹೆಸರಿನಲ್ಲಿ ನಕಲಿ ಡಿಡಿ ತಯಾರಿಸುತ್ತಿದ್ದರು. ಯಾರೂ ಸಹ ಇದು ನಕಲಿ ಡಿಡಿ ಎಂದು ಭಾವಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ನೂರಾರು ಜನರಿಗೆ ಡಿಡಿ ಟೋಪಿ ಹಾಕಿ ಲಕ್ಷ ಲಕ್ಷ ಹಣ ಸಂಗ್ರಹಿಸಿದ್ದಾರೆ. ಬಂದ ಹಣದಲ್ಲಿ ಐಶರಾಮಿ ಜೀವನ ನಡೆಸುತ್ತಿದ್ದರು.

   ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada

   ಹಣ ಕಳೆದುಕೊಂಡಿದ್ದ ಮಾರ್ವಡಿಯೊಬ್ಬರು ಇತ್ತೀಚೆಗೆ ಬೇಗೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಇಂದ್ರಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಕಲಿ ಡಿಡಿ ಅಡವಿಟ್ಟು ದುಡ್ಡು ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದಕ್ಕೆ ಸಹಕರಿಸಿದ ಪತ್ನಿ ಮಂಜುಳಾ, ಮುನಿರಾಜು ಹಾಗೂ ನಂದಾ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ದಂಪತಿ ಮನೆಯಲ್ಲಿ ಏಳುಕೋಟಿ ರೂಪಾಯಿ ಮೌಲ್ಯದ ನಕಲಿ ಡಿಡಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ಮಂದಿ ಮಾರ್ವಡಿಗಳು ಇದೀಗ ಸಾಲು ಸಾಲು ದೂರು ನೀಡಲು ಮುಂದಾಗಿದ್ದಾರೆ.

   English summary
   Bengaluru : Police arrests couple and 2 others for printing fake DD. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X