ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಮಿತ್ರ ಮತ್ತು ಮಾರ್ಕೆಟಿಂಗ್ ಏಜೆಂಟರಿಂದಲೇ ಬೆಡ್ ಬ್ಲಾಕಿಂಗ್ ದಂಧೆ

|
Google Oneindia Kannada News

ಬೆಂಗಳೂರು, ಜೂ. 12 : ಸರ್ಕಾರಿ ಕೋಟಾದಡಿ ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿದ್ದ ಬೆಡ್ ಗಳನ್ನು ಬ್ಲಾಕ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಅಕ್ರಮ ಕುರಿತ ಸಿಸಿಬಿ ಪೊಲೀಸರ ತನಿಖೆ ಬಿರುಸುಗೊಂಡಿದೆ. ಬಹುತೇಕ ಖಾಸಗಿ ಆಸ್ಪತ್ರೆಗಳ ಮಾರ್ಕೆಟಿಂಗ್ ಏಜೆಂಟರು ಮತ್ತು ಆರೋಗ್ಯ ಮಿತ್ರ ಅಧಿಕಾರಿಗಳು ಶಾಮೀಲಾಗಿ ಬೆಡ್ ಬ್ಲಾಕಿಂಗ್ ದಂಧೆ ನಡೆಸಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸಪ್ತಗಿರಿ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಆಂಥೋನಿ ಎಂಬಾತನನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಹತ್ತಕ್ಕೇರಿದೆ.

ಸಪ್ತಗಿರಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆಂಥೋನಿ, ಸರ್ಕಾರಿ ಕೋಟಾದ ಕೊರೊನಾ ಸೋಂಕಿತರ ಬೆಡ್‌ಗಳನ್ನು ಆರೋಗ್ಯ ಮಿತ್ರ ದಲ್ಲಿ ಕೆಲಸ ಮಾಡುವರ ನೆರವಿನಿಂದ ಬ್ಲಾಕ್ ಮಾಡಿಸುತ್ತಿದ್ದ. ಖಾಸಗಿಯಾಗಿ ಚಿಕಿತ್ಸೆಗೆ ಬರುವವರಿಂದ ಕಮೀಷನ್ ಪಡೆದು ಬೆಡ್‌ನ್ನು ನೀಡುತ್ತಿದ್ದರು. ಸಪ್ತಗಿರಿ ಆಸ್ಪತ್ರೆಯ ಆರೋಗ್ಯ ಮಿತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಎರಡು ದಿನದ ಹಿಂದಷ್ಟೇ ಬಸವೇಶ್ವರನಗರದಲ್ಲಿರುವ ಪುಣ್ಯ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆಯ ಸಿಬ್ಬಂದಿಯನ್ನು ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಂಧಿಸಿದ್ದರು. ಸಂಸದ ತೇಜಸ್ವಿ ಸೂರ್ಯ ಈ ಅಕ್ರಮದ ಬಗ್ಗೆ ವಿಷಯ ಪ್ರಸ್ತಾಪಿಸಿದ ಬಳಿಕ ಈವರೆಗೂ ಹತ್ತು ಮಂದಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಸಾಕಷ್ಟು ಮಂದಿ ಮುಂದೆ ಬಂಧನವಾಗಲಿದ್ದಾರೆ.

Bed Blocking scam: CCB police arrested 10 accused so far

ಏನಿದು ದಂಧೆ : ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದಂತೆ ಕೊರೊನಾ ಸೋಂಕಿತರಿಗೆ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್‌ಗಳನ್ನು ಸರ್ಕಾರಿ ಕೋಟಾದಡಿ ಮೀಸಲಿಡಬೇಕು ಎಂದು ಸರ್ಕಾರ ಆದೇಶಿಸಿತ್ತು. ಸರ್ಕಾರ ಆದೇಶ ಮಾಡಿದ್ದು ಸರಿ. ಆದರೆ, ಅದನ್ನು ನಿರ್ವಹಣೆ ಮಾಡಲು ಖಡಕ್ ಅಧಿಕಾರಿಗಳ ತಂಡವನ್ನು ಮಾಡದೇ ಬಿಬಿಎಂಪಿಗೆ ವಹಿಸಿತು. ಕೆಲಸಕ್ಕೆ ಬಾರದ ತಂತ್ರಜ್ಞಾನ ಸ್ಕೀಮ್ ಮಾಡಿಕೊಂಡು, ಬೆಡ್ ಅಲಾಟ್ ಮಾಡಬೇಕಾದರೆ ಬಿಯು ನಂಬರ್ ಬೇಕು, ಎಸ್ಆರ್‌ಎಫ್ ನಂಬರ್ ಕಡ್ಡಾಯ ಮಾಡಿತ್ತು. ತುರ್ತು ಆರೋಗ್ಯ ಪರಿಸ್ಥಿತಿಯ ಸಂಕಷ್ಟ ಕಾಲದಲ್ಲಿ ಅನಾವಶ್ಯಕವಾಗಿ ವಿಧಿಸಿದ್ದ ನಿರ್ಬಂಧಗಳನ್ನು ಜನರು ತಿಳಿದುಕೊಂಡು ಬೆಡ್ ಪಡೆಯುವ ವೇಳೆಗೆ ಸರ್ಕಾರಿ ಕೋಟದ ಬೆಡ್ ಗಳು ಬಿಕರಿಯಾಗುತ್ತಿದ್ದವು.

ಕರೆ ಮಾಡಿದ ಪಾಸಿಟಿವ್ ರೋಗಿ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡಿ, ಖಾಸಗಿ ರೋಗಿಗಳಿಗೆ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಿವೆ. ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೊನಾ ಸೊಂಕಿತರ ನಿರ್ವಹಣೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಅಧಿಕಾರಿಗಳನ್ನು ನೇಮಿಸಿದ್ದಾರೆ. ಮೊದಲೇ ಮಾರ್ಕೆಟಿಂಗ್ ಏಜೆಂಟರನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದ ಆಸ್ಪತ್ರೆಗಳಿಗೆ ಜೇನು ಗೂಡಿನ ಮೂಲ ಗೊತ್ತಾಗಿತ್ತು. ಮಾರ್ಕೆಟಿಂಗ್ ಏಜೆಂಟರು ಮತ್ತು ಆರೋಗ್ಯ ಮಿತ್ರ ಅಧಿಕಾರಿಗಳು ಶಾಮೀಲಾಗಿ, ಸರ್ಕಾರಿ ಕೋಟಾದಡಿಯ ಬೆಡ್‌ಗಳ ಬಗ್ಗೆ ಸುಳ್ಳು ಮಾಹಿತಿ ಬಿಬಿಎಂಪಿ ವಾರ್ ರೂಮ್‌ಗಳಿಗೆ ನೀಡಿ ಕೊರೊನಾ ಪೀಡಿತರಿಂದ ಸುಲಿಗೆ ಮಾಡಿದ್ದಾರೆ.

Recommended Video

ಚೀನಾವನ್ನು ಸದ್ಯದರಲ್ಲೇ ಸೈಡ್ ಹೊಡೆಯಲಿದೆ ಭಾರತ | Oneindia Kannada

ಎಂಟು ಕೋವಿಡ್ ವಾರ್ ರೂಮ್ ಡಾಟಾ ಸಂಗ್ರಹಿಸಿರುವ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಸಣ್ಣ ಇಲಿಗಳು ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೇ ಈ ಜಾಲದಲ್ಲಿ ಸಿಲುಕುವ ಸಾಧ್ಯತೆಯಿದೆ.

English summary
Bengaluru Bed blocking scam: The CCB police have been arrested 10 accused including two were covid positive know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X