ಬ್ಯೂಟಿ ಪಾರ್ಲರ್ ಮಹಿಳೆಯರಿಗೂ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ
ಬೆಂಗಳೂರು, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ ಪರಿಣಾಮ ಹಲವರು ಸಂಕಷ್ಟಕ್ಕೆ ಸಿಲುಕಿದರು. ದಿನಗೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗ ಲಾಕ್ ಡೌನ್ ನಿಂದ ಅಕ್ಷರಶಃ ನಲುಗಿತು.
ಇದರ ಜೊತೆಗೆ ಬ್ಯೂಟಿ ಪಾರ್ಲರ್ ಉದ್ಯಮಕ್ಕೂ ಭಾರಿ ಪೆಟ್ಟು ಬಿದ್ದಿದೆ. 40 ಕ್ಕೂ ಹೆಚ್ಚು ದಿನಗಳಿಂದ ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳಿಗೆ ಬೀಗ ಜಡಿಯಲಾಗಿದೆ. ಇದರಿಂದ ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರು ಕಷ್ಟದಿಂದ ಒದ್ದಾಡುವಂತಾಗಿದೆ.
ಕೊರೊನಾ ಭೀತಿಯ ನಡುವೆ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಗಳ ಆಕ್ರೋಶ!
ಹೀಗಾಗಿ, ''ಬ್ಯೂಟಿ ಪಾರ್ಲರ್ ನಡೆಸುವ ಮಹಿಳೆಯರಿಗೆ ಸರ್ಕಾರ ಸಹಾಯ ಹಸ್ತ ಚಾಚಬೇಕು. ಬ್ಯೂಟೀಷಿಯನ್ಸ್ ಗೆ ಸರ್ಕಾರ ಅನುದಾನ ನೀಡಬೇಕು'' ಎಂದು ಬ್ಯೂಟಿ ಎಕ್ಸ್ ಪರ್ಟ್ ಸುಧಾ ಮೂರ್ತಿ ಒತ್ತಾಯಿಸಿದ್ದಾರೆ.
ಬ್ಯೂಟಿ ಪಾರ್ಲರ್ ಗಳನ್ನು ತೆರೆಯುವಂತೆ ಸರ್ಕಾರ ಅನುಮತಿ ನೀಡಬೇಕು ಎಂತಲೂ ಬ್ಯೂಟೀಷಿಯನ್ಸ್ ಮನವಿ ಮಾಡಿದ್ದಾರೆ. ಬ್ಯೂಟೀಷಿಯನ್ಸ್ ಮನವಿ ಮೇರೆಗೆ ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳನ್ನು ಓಪನ್ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕು.