ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಾರ್ವಜನಿಕ ಕಣ್ಣು' ಅಂದ್ರೇನು ಗೊತ್ತಾ ನಿಮಗೆ?

By Ashwath
|
Google Oneindia Kannada News

ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುತ್ತಿದ್ದಿರಿ. ನಿಮ್ಮ ಕಣ್ಣ ಮುಂದೆಯೇ ಯಾರೋ ಒಬ್ಬರು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ. ದುರದೃಷ್ಟಕ್ಕೆ ಅಲ್ಲಿ ಯಾರೂ ಟ್ರಾಫಿಕ್ ಪೊಲೀಸ್ ಇಲ್ಲವೆಂದು ನೀವು ಸುಮ್ಮನಾಗಬೇಕಿಲ್ಲ. ನೀವೇ ಸವಾರರ ವಿರುದ್ಧ ಕಾರ್ಯಾಚರಣೆ ನಡೆಸಬಹುದು.

ಹೌದು. ಎಲ್ಲಾದರೂ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದ್ದು, ಕಂಡು ಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್, ಕ್ಯಾಮರಾಗಳಲ್ಲಿ ಅದರ ದೃಶ್ಯ ಗಳನ್ನು ಸೆರೆ ಹಿಡಿದು ಬೆಂಗಳೂರು ನಗರ ಸಂಚಾರ ಪೊಲೀಸರ ವೆಬ್‌ಸೈಟ್‌ಗೆ ರವಾನಿಸಿದರೆ ಸಾಕು, ಪೊಲೀಸರು ಅದರ ಆಧಾರ ಮೇಲೆ ವಾಹನ ಸವಾರರಿಗೆ ನೋಟಿಸ್ ಕಳುಹಿಸುವ ಮೂಲಕ ದಂಡ ವಸೂಲಿ ಮಾಡುತ್ತಿದ್ದಾರೆ.

ಬೆಂಗಳೂರಿನ ಸಂಚಾರ‌ ಪೊಲೀಸರು ಎರಡು ವರ್ಷ‌ಗಳ ಹಿಂದೆ ಆರಂಭಿಸಿರುವ ಸಾರ್ವ‌ಜನಿಕ ಕಣ್ಣು(ಪಬ್ಲಿಕ್‌ ಐ) ಯಶಸ್ವಿಯಾಗಿದ್ದು ಇದೀಗ ಮೈಸೂರಿನಲ್ಲೂ ಆರಂಭಗೊಂಡಿದೆ.

Traffic Police

ದೂರು ದಾಖಲಿಸುವುದು ಹೇಗೆ?
ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆಯುವಾಗ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಕ್ಲಿಕ್‌ ಮಾಡಬೇಕು. ಬಳಿಕ ಸಂಚಾರ ಪೊಲೀಸರ ವೆಬ್‌ಸೈಟ್‌‌ಗೆ ತೆರಳಿ ಪಬ್ಲಿಕ್‌ ಐ ವಿಭಾಗಕ್ಕೆ ಹೋಗಿ ನಿಯಮ ಉಲ್ಲಂಘಿಸಿದ ವಾಹನ ಸಂಖ್ಯೆ, ಸಂಚಾರ ಉಲ್ಲಂಘನೆಯ ಮಾದರಿ, ದಿನಾಂಕ, ಸಮಯ, ಸ್ಥಳವನ್ನು ನಮೂದಿಸಿ ತೆಗೆದ ಫೋಟೋವನ್ನು ಅಪ್‌ಲೋಡ್‌ ಮಾಡಿದರೆ ಆಯಿತು. ಸಂಚಾರ ಪೊಲೀಸರು ಈ ಮಾಹಿತಿಯ ಆಧಾರ ಮೇಲೆ ಸವಾರರ ಮೇಲೆ ದಂಡ ವಿಧಿಸುತ್ತಾರೆ. ಬೆಂಗಳೂರು ಸಂಚಾರ ಪೊಲೀಸರ ಆಂಡ್ರಾಯ್ಡ್‌ ಆಪ್‌ ಡೌನ್‌‌ಲೋಡ್‌ ಮಾಡುವ ಮೂಲಕವು ಸಾರ್ವ‌ಜನಿಕರು ದೂರು ದಾಖಲಿಸಬಹುದು.

ಪಬ್ಲಿಕ್‌ ಐ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ:www.bangaloretrafficpolice.gov.in

ಆಂಡ್ರಾಯ್ಡ್‌ ಆಪ್‌ ಡೌನ್‌‌‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ: play.google.com/store/

English summary
Bangalore Traffic Police have launched a new web portal where in users can report traffic violators and raise violations against them. This initiative was started after good response from their Facebook page where a lot of images of bike and car users breaking rules were posted and violations were raised against such offending vehicles. In this link, one can upload the image of the offending vehicle and provide details, which after verification is declared as an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X