ಹೊಸ ಯೋಜನೆ: 60 ಹಳ್ಳಿಗಳಿಗೆ ಬಂಪರ್‌, ಭೂಮಿಗೆ ಬಂತು ಬಂಗಾರದ ಬೆಲೆ!

New Peripheral Ring Road Project: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪೆರಿಫೆರಲ್ ರಿಂಗ್‌ ರೋಡ್‌ / ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಯೋಜನೆ ಭಾರೀ ವೇಗ ಪಡೆದುಕೊಂಡಿದ್ದು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶಗಳಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಹಲವು ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರವು ಪರಿಚಯಿಸುತ್ತಿದೆ. ಆ ಯೋಜನೆಗಳಲ್ಲಿ ಪೆರಿಫೆರಲ್ ರಿಂಗ್‌ ರೋಡ್‌ ಯೋಜನೆಯೂ ಒಂದು ಪ್ರಮುಖವಾಗಿದೆ. ಇನ್ನೂ ರಾಜ್ಯದಲ್ಲಿ ಪೆರಿಫೆರಲ್ ರಿಂಗ್‌ ರೋಡ್‌ ನಿಂದಾಗಿ ಬರೋಬ್ಬರಿ 60 ಹಳ್ಳಿಗಳ ಮೇಲೆ ಪ್ರಭಾವ ಬೀರುತ್ತಿದೆ. ಹಲವು ಭಾಗದಲ್ಲಿ ಭೂಮಿಗೆ ಭರ್ಜರಿ ಬಂಗಾರದ ಬೆಲೆ ಬಂದಿದೆ. ಯಾವೆಲ್ಲಾ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ಅಲ್ಲದೇ ಈ ಯೋಜನೆಯಿಂದ ರಿಯಲ್‌ ಎಸ್ಟೇಟ್‌ಗೆ ಯಾವ ರೀತಿಯಲ್ಲಿ ಲಾಭವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಯೋಜನೆಗಳಲ್ಲಿ ಪೆರಿಫೆರಲ್ ರಿಂಗ್‌ ರೋಡ್‌ ಒಂದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪಿಆರ್‌ಆರ್-1 (ಪೆರಿಫೆರಲ್ ರಿಂಗ್ ರಸ್ತೆ)ಯ ಭಾಗವಾಗಿ ಹಾಗೂ ಅದರೊಂದಿಗೆ ಲೇಔಟ್‌ಗಳ ಅಭಿವೃದ್ಧಿಗೂ ಮುಂದಾಗಿದೆ. ಇದರ ಭಾಗವಾಗಿ 01 ರಿಂದ 05 ಕ್ಕೆ 60 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬಿಡಿಎ ನಡೆಸುತ್ತಿರುವ ಮೂರನೇ ಭೂ ಸ್ವಾಧೀನ ಪ್ರಕ್ರಿಯೆ ಇದಾಗಿದೆ.

BDA new peripheral ring road project Property boom in 60 villages amp amp golden price for land

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂಸ್ವಾಧೀನಕ್ಕೆ ಮುಂದಾಗಿದ್ದು. ಇದರಿಂದ ಭೂಮಿಗೆ ಬಂಪರ್‌ ಬೆಲೆ ಬಂದಿದೆ.

ಈಗಾಗಲೇ ಹೇಳಿದಂತೆ ಈ ಯೋಜನೆಯನ್ನು ಅನುಷ್ಠಾನ ಮಾಡುವುದರಿಂದಾಗಿ 60 ಹಳ್ಳಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಭೂಮಿಯ ಬೆಲೆ ಹೆಚ್ಚಳವಾಗಿದೆ. ಆದರೆ ಇದರೊಂದಿಗೆ ಕೆಲವೊಂದು ಭಾಗದಲ್ಲಿ ರೈತರು ಭೂಮಿಯನ್ನು ಕಳೆದುಕೊಳ್ಳುವ ಆತಂಲವೂ ಎದುರಾಗಿದೆ. ಈ 60 ಹಳ್ಳಿಗಳ ಭಾಗದಲ್ಲಿ ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಆತಂಕವೂ ಎದುರಾಗಿದೆ. ಯಾವ ಪ್ರದೇಶ ಪ್ರಮುಖವಾಗಿದೆ ಎನ್ನುವ ವಿವರಗಳು ಮುಂದಿವೆ.

ಬಿಡಿಎ ಪ್ರಾಥಮಿಕ ಅಧಿಸೂಚನೆ (ಮೇ 2025) ಪ್ರಕಾರ, ಲೇಔಟ್-01 ರಿಂದ ಲೇಔಟ್-05 ರವರೆಗಿನ 60 ಕ್ಕೂ ಹೆಚ್ಚು ಹಳ್ಳಿಗಳು ಪರಿಣಾಮ ಬೀರಲಿವೆ. ಯೋಜನೆ ವ್ಯಾಪ್ತಿಗೆ ಒಳಪಡುವ ಪ್ರಮುಖ ಪ್ರದೇಶಗಳು * ಯಲಹಂಕ * ಕೃಷ್ಣರಾಜಪುರ * ಬಿದರಹಳ್ಳಿ

* ಹೊಸಕೋಟೆ ಪ್ರಮುಖ ಪ್ರದೇಶಗಳಾಗಿದ್ದಾರೆ. * ಚೊಕ್ಕನಹಳ್ಳಿ * ಕಾಡುಗೋಡಿ * ಮಂಡೂರು * ಕಣ್ಣೂರು * ಭೈರತಿ * ದೊಡ್ಡಗುಬ್ಬಿ ಹಾಗೂ ಮಾವಳ್ಳಿಪುರ ಪ್ರಮುಖವಾಗಿವೆ.

ಸಂಪೂರ್ಣ ವಿವರ ಇಲ್ಲಿದೆ: ಇನ್ನು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ರೂಪಾಯಿ ರಾಜಾ ಎನ್ನುವ ಖಾತಾಯಿಂದ ಕೆಲವೊಂದು ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಲಾಗಿದ್ದು. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜನ ಹಾಗೂ ಆಸ್ತಿದಾರರು ಇಲ್ಲಿ ಹೊಸ ಯೋಜನೆಗಳು ಬರುವ ಬಗ್ಗೆ ಖುಷಿಯಾಗಿದ್ದರೆ, ರೈತರು ತಮ್ಮ ಭೂಮಿ ಹೋಗಲಿದೆಯೇ ಅಥವಾ ಕಳೆದುಕೊಳ್ಳಲಿದ್ದೇವೆಯೇ ಎನ್ನುವ ಆತಂಕದಲ್ಲಿ ಇದ್ದಾರೆ.

ರೈತರಿಗೆ ಆತಂಕ: ಇನ್ನು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಗೆ ಭರ್ಜರಿ ಸಿದ್ಧತೆ ನಡೆದಿದ್ದು ಇದರಿಂದ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೆ ಇದೇ ಸಂದರ್ಭದಲ್ಲಿ ರೈತರಿಗೂ ಆತಂಕ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+