ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ನಿವೇಶನಗಳ ಹರಾಜು 3ನೇ ಹಂತ; 402 ಸೈಟುಗಳಿವೆ

Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರತಿಷ್ಠಿತ ಬಡಾವಣೆಗಳಲ್ಲಿರುವ ಮೂಲೆ ನಿವೇಶನಗಳನ್ನು ಹರಾಜು ಹಾಕಲು 3ನೇ ಹಂತದ ಅಧಿಸೂಚನೆಯನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 9ರಿಂದ ಅರ್ಕಾವತಿ, ಹೆಚ್‌. ಎಸ್. ಆರ್. ಬಡಾವಣೆ, ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆ, ಜೆ. ಪಿ. ನಗರ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳ ಒಟ್ಟು 402 ನಿವೇಶನ ಹರಾಜು ಹಾಕಲಾಗುತ್ತಿದೆ.

ಬುಧವಾರದಿಂದ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಿದೆ. ಜನರು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಆನ್‌ಲೈನ್‌ನಲ್ಲಿ ಬಿಡ್ ಮಾಡಿ ನಿವೇಶನಗಳನ್ನು ಖರೀದಿ ಮಾಡಬಹುದು.

BDA 402 Site E Auction From September 9

ಇ-ಹರಾಜು ಪ್ರಕ್ರಿಯೆ ಒಟ್ಟು ಆರು ಹಂತಗಳಲ್ಲಿ ನಡೆಯಲಿದೆ. ಪ್ರತಿ ಹಂತದಲ್ಲಿ 70 ನಿವೇಶನಗಳ ಬಿಡ್ಡಿಂಗ್ ಮುಕ್ತಾಯವಾಗಲಿದೆ. 3/10/2020ರಂದು ಅಂತಿ ಬಿಡ್ಡಿಂಗ್ ಮುಕ್ತಾಯವಾಗಲಿದೆ.

ಹರಾಜಿಗೆ ಇರುವ ಎಲ್ಲಾ ನಿವೇಶನಗಳಿಗೂ ಜಿಯೋ ಮ್ಯಾಪಿಂಗ್ ಅಳವಡಿಸಿ ಪ್ರಾಧಿಕಾರದ ವೆಬ್ ಸೈಟ್‌ ಪ್ರಕಟಿಸಲಾಗಿದೆ. ಬಿಡ್‌ದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದು.

ಮೊದಲ ಹಂತದಲ್ಲಿ 1 ರಿಂದ 70 ಅನ್ನು 9/9/2020 ರಿಂದ 25/9/2020 ತನಕ ಬಿಡ್ ಮಾಡಬಹುದಾಗಿದೆ. 71 ರಿಂದ 140ರ ತನಕ 10/9/2020 ರಿಂದ 28/9/2020ರ ತನಕ ಬಿಡ್ ಮಾಡಬಹುದಾಗಿದೆ ಎಂದು ಬಿಡಿಎ ತಿಳಿಸಿದೆ.

141 ರಿಂದ 210ರ ತನಕ 11/9/2020 ರಿಂದ 29/9/2020ರ ತನಕ ಬಿಡ್ ಮಾಡಬೇಕು. 4ನೇ ಹಂತದಲ್ಲಿ 211 ರಿಂದ 280 ಅನ್ನು 12/9/2020 ರಿಂದ 30/9/2020ರ ತನಕ ಬಿಡ್ ಮಾಡಬಹುದು.

5ನೇ ಹಂತದಲ್ಲಿ 281 ರಿಂದ 350 ಅನ್ನು 14/9/2020 ರಿಂದ 1/10/2020ರ ತನಕ ಬಿಡ್ ಮಾಡಬೇಕು. 6ನೇ ಹಂತದಲ್ಲಿ 351 ರಿಂದ 402ರ ಸಂಖ್ಯೆಯನ್ನು 15/9/2020 ರಿಂದ 3/10/2020ರ ತನಕ ಬಿಡ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X