ಬೆಂಗಳೂರಿನ 8 ವಲಯಗಳಿಂದ ಸಂಗ್ರಹವಾದ ಆಸ್ತಿ ತೆರಿಗೆ ಎಷ್ಟು?
ಬೆಂಗಳೂರು, ಜೂನ್ 3: ಬಿಬಿಎಂಪಿಯು ನಗರದ 8 ವಲಯಗಳಿಂದ 1440.14 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೇ 31ರವರೆಗೆ ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವ, ಮಹದೇವಪುರ, ಆರ್‌ಆರ್ ನಗರ, ದಕ್ಷಿಣ, ಪಶ್ಚಿಮ, ಯಲಹಂಕ ವಲಯಗಳಿಂದ ತೆರಿಗೆ ಸಂಗ್ರಹವಾಗಿದೆ.
ಜನರು ಆನ್‌ಲೈನ್ ಮೂಲಕ ಹಾಗೂ ಬ್ಯಾಂಕ್‌ಗೆ ನೇರವಾಗಿ ತೆರಳಿ ತೆರಿಗೆ ಕಟ್ಟಿದ್ದಾರೆ. ಮೇ 31ರವರೆಗೆ ಶೇ.5ರಷ್ಟು ತೆರಿಗೆ ರಿಯಾಯಿತಿಯನ್ನು ಬಿಬಿಎಂಪಿ ನೀಡಿತ್ತು.

ಬೊಮ್ಮನಹಳ್ಳಿಯಿಂದ ಆನ್‌ಲೈನ್‌ನಲ್ಲಿ 97.54 ಕೋಟಿ ರೂ. ಚಲನ್ ಮೂಲಕ 45.06 ಕೋಟಿ ರೂ. ಒಟ್ಟು 142.60 ಕೋಟಿ ರೂ., ದಾಸರಹಳ್ಳಿಯಲ್ಲಿ ಆನ್‌ಲೈನ್ ಮೂಲಕ 23.91 ಕೋಟಿ ರೂ., ಚಲನ್ ಮೂಲಕ 14.64 ಕೋಟಿ ರೂ. ಒಟ್ಟು 38.55 ಕೋಟಿ ರೂ ಸಂಗ್ರಹವಾಗಿದೆ.
ಬೆಂಗಳೂರು ಪೂರ್ವದಲ್ಲಿ ಆನ್‌ಲೈನ್ ಮೂಲಕ 158.16 ಕೋಟಿ ರೂ., ಚಲನ್ ಮೂಲಕ 122.65 ಕೋಟಿ ರೂ. ಒಟ್ಟು 280.81 ಕೋಟಿ ರೂ., ಮಹದೇವಪುರದಲ್ಲಿ ಅನ್‌ಲೈನ್ ಮೂಲಕ 153 ಕೋಟಿ ರೂ, ಚಲನ್ ಮೂಲಕ 197.06 ಕೋಟಿ ರೂ., ಒಟ್ಟು 350.06 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ.

ಆರ್‌ಆರ್‌ನಗರದಲ್ಲಿ ಆನ್‌ಲೈನ್ ಮೂಲಕ 60.21 ಕೋಟಿ ರೂ.,ಚಲನ್ ಮೂಲಕ 39.34 ಕೋಟಿ ರೂ. ಒಟ್ಟು 99.55 ಕೋಟಿ ರೂ., ದಕ್ಷಿಣದಲ್ಲಿಆನ್‌ಲೈನ್ ಮೂಲಕ 149.75 ಕೋಟಿ ರೂ., ಚಲನ್ ಮೂಲಕ 102.59 ಕೋಟಿ ರೂ., ಒಟ್ಟು 252.34 ಕೋಟಿ ರೂ ತೆರಿಗೆ ಸಂಹ್ರಿಸಲಾಗಿದೆ.
ಪಶ್ಚಿಮದಲ್ಲಿ ಆನ್‌ಲೈನ್‌ನಲ್ಲಿ 90.44 ಕೋಟಿ ರೂ, ಚಲನ್ ಮೂಲಕ 73.18 ಕೋಟಿ ರೂ., ಒಟ್ಟು 163.62 ಕೋಟಿ ರೂ. ಸಂಗ್ರಹವಾಗಿದೆ. ಯಲಹಂಕದಲ್ಲಿ 49.51 ಕೋಟಿ ರೂ, ಚಲನ್ ಮೂಲಕ 63.10 ಕೋಟಿ ರೂ ಒಟ್ಟು 112.61 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು ಒಟ್ಟಾರೆ ಎಂಟು ವಲಯಗಳಿಂದ 1440.14 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ.












Click it and Unblock the Notifications