ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕರರ ಮುಷ್ಕರ, ಬಿಬಿಎಂಪಿಯಲ್ಲಿ ಇಂದು ಕೆಲಸ ಸ್ಥಗಿತ

|
Google Oneindia Kannada News

ಬೆಂಗಳೂರು, ಜುಲೈ 16 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕೆಲಸಗಳಿದ್ದರೆ ಅದನ್ನು ಒಂದು ದಿನ ಮುಂದಕ್ಕೆ ಹಾಕಿಕೊಳ್ಳಿ, ಪಾಲಿಕೆ ಸಿಬ್ಬಂದಿ ಮತ್ತು ನೌಕರರು ಗುರುವಾರ ಮುಷ್ಕರಕ್ಕೆ ಕರೆ ನೀಡಿದ್ದು, ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ.

ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅವರು, ನೌಕರರನ್ನು ವಿನಾಕಾರಣ ಅಮಾನತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದ ನೌಕರರ ಸಂಘ ಗುರುವಾರ ಕೆಲಸವನ್ನು ಬಹಿಷ್ಕರಿಸಿ ಮುಷ್ಕರ ನಡೆಸಲಿದೆ. [ಬಿಬಿಎಂಪಿ ಐದು ಭಾಗ, ಹೇಗೆ?]

bbmp

ಜುಲೈ 16ರ ಗುರುವಾರ ಪಾಲಿಕೆಯ ಎಲ್ಲ ಕಚೇರಿಗಳ ಸೇವೆಯನ್ನು ಬಹಿಷ್ಕರಿಸಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು. ತುರ್ತು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ನೌಕರರ ಸಂಘದ ಕಾರ್ಯದರ್ಶಿ ಮಾಯಣ್ಣ ಅವರು ತಿಳಿಸಿದ್ದಾರೆ. [ಬಿಬಿಎಂಪಿ ಹೊಸ ವೆಬ್ ಸೈಟ್ ನೋಡಿ]

12 ಮಂದಿ ಅಮಾನತು : ಟಿ.ಎಂ.ವಿಜಯ್ ಭಾಸ್ಕರ್ ಅವರು ಮುಖ್ಯ ಲೆಕ್ಕಾಧಿಕಾರಿ ವಿಭಾಗದ ಪ್ರಥಮ ದರ್ಜೆ ಗುಮಾಸ್ತ ವೆಂಕಟೇಶ್ ಹಾಗೂ ಬೊಮ್ಮನಹಳ್ಳಿ ವಲಯದ ಸಹಾಯಕ ಹಣಕಾಸು ನಿಯಂತ್ರಕ ಪ್ರಸನ್ನ ಕುಮಾರ್ ಸೇರಿದಂತೆ ಇದುವರೆಗೂ 12 ಜನರನ್ನು ಸೂಕ್ತ ಪರಿಶೀಲನೆ ನಡೆಸದೇ ಅಮಾನತು ಮಾಡಿದ್ದಾರೆ ಎಂಬುದು ಆರೋಪವಾಗಿದೆ.

ಬಿಬಿಎಂಪಿಯಲ್ಲಿ ಸುಮಾರು 9 ಸಾವಿರ ಹುದ್ದೆಗಳು ಖಾಲಿ ಇದ್ದು, ಹಾಲಿ ನೌಕರರ ಮೇಲೆ ಒತ್ತಡವಿದೆ. ಆದರೂ ಆಡಳಿತಾಧಿಕಾರಿಗಳು ನೌಕರರನ್ನು ಅಮಾನತು ಮಾಡುತ್ತಿರುವುದು ಖಂಡನೀಯ ಎಂದು ನೌಕರರು ದೂರಿದ್ದಾರೆ ಮತ್ತು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

English summary
Bruhat Bangalore Mahanagara Palike (BBMP) employees to go on strike on 16th July, Thursday 2015. BBMP service may hit for the day by the strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X