ಶಾಸಕ ಬೆಂಬಲಿಗರ ದೌರ್ಜನ್ಯ, ಮಹಿಳಾ ಕಾರ್ಪೋರೇಟರ್ಸ್ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಮೇ 29 : ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಮುನಿರತ್ನ ಬೆಂಬಲಿಗರ ದೌರ್ಜನ್ಯ ಖಂಡಿಸಿ ಮೂವರು ಮಹಿಳಾ ಕಾರ್ಪೊರೇಟರ್ಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸೋಮವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಬಿಬಿಎಂಪಿ ಸದಸ್ಯರಾದ ಆಶಾ, ಮಮತಾ ಹಾಗೂ ಮಂಜುಳಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೌನ್ಸಿಲ್ ಸಭೆ ಆರಂಭ ಆಗುತ್ತಿದ್ದಂತೆ ಮುನಿರತ್ನ ಬೆಂಬಲಿಗರ ದೌರ್ಜನ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮೂವರು ಮಹಿಳಾ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿ ಮುನಿರತ್ನ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದರು.
ಕಪ್ಪುಪಟ್ಟಿ ಸೀರೆ ಧರಿಸಿ ಕೌನ್ಸಿಲರ್ ಸಭೆಗೆ ಹಾಜರಾದ ಮಂಜುಳಾ ನಾರಾಯಣಸ್ವಾಮಿ ಪರ ಕಾಂಗ್ರೆಸ್ ಸದಸ್ಯೆ ಆಶಾ, ಬಿಜೆಪಿ ಸದಸ್ಯೆ ಮಮತಾ ಪರ ಧ್ವನಿ ಎತ್ತಿದರು.












Click it and Unblock the Notifications