ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾ ಬಳಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 05 : ಬೆಳ್ಳಂದೂರು ಕೆರೆಯ ಮೇಲೆ ಕಣ್ಗಾವಲಿಡಲು ಡ್ರೋನ್‌ ಕ್ಯಾಮೆರಾಗಳನ್ನು ಬಳಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಬೆಳ್ಳಂದೂರು ಕೆರೆ ಅವನತಿಯತ್ತ ಸಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಕೆರೆಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಜಲಮೂಲದ ಸುತ್ತಲೂ ಬಿಗಿ ಭದ್ರತೆ

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ:ಆತಂಕದಲ್ಲಿ ದಿನ ಕಳೆದ ನಾಗರಿಕರುಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ:ಆತಂಕದಲ್ಲಿ ದಿನ ಕಳೆದ ನಾಗರಿಕರು

ಒದಗಿಸಲು ಉದ್ದೇಶಿಸಲಾಗಿದೆ. ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ಮುಂದಿನ ವಾರ ನೇಮಕ ಮಾಡಲಾಗುತ್ತದೆ. ಪ್ರಹರಿ ಪಡೆ ನಿಯೋಜನೆ ಹಾಗೂ ಡ್ರೋನ್‌ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಇವು ಪ್ರತಿದಿನ ಎರಡು ಬಾರಿ ಕೆರೆ ಪರಿಸರದಲ್ಲಿ ಸುತ್ತಾಟ ನಡೆಸಲಿವೆ. ನಿಯಂತ್ರಣ ಕೊಠಡಿಯ ಮೂಲಕ ಇವುಗಳನ್ನು ನಿಯಂತ್ರಿಸಲಾಗುತ್ತದೆ.

BBMP will use Drone camera for Bellandur lake surveillance

ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿದಿರುವುದು ಕಂಡುಬಂದರೆ ಮಾರ್ಷಲ್‌ಗಳು ಹಾಗೂ ಪ್ರಹರಿ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಕೆರೆಯ ಭದ್ರತೆ ಕುರಿತು ಮಾರ್ಷಲ್‌ಗಳು ಪ್ರತಿದಿನ ವರದಿ ನೀಡಬೇಕು. ಅದನ್ನು ಬಿಡಿಎ, ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಾರಕ್ಕೊಮ್ಮೆ ಪರಿಶೀಲಿಸಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಯ ಸುತ್ತಲೂ ಪ್ರಖರ ಬೆಳಕಿನ ದೀಪಗಳನ್ನು ಹಾಗೂ ಇನ್ನಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಕೆರೆಯ 8 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

English summary
BBMP will use Drone camera Surveillance for Bellandur lake to protect dumping of wastes. Along with this BBMP will give marshal and prahari team security too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X