ಬಿಬಿಎಂಪಿ ವಾರ್ಡ್‌ ಪುನರ್‌ವಿಂಗಡಣೆ: ಇನ್ನೆರಡು ದಿನದಲ್ಲಿ ಸರ್ಕಾರಕ್ಕೆ ವರದಿ

ಬೆಂಗಳೂರು, ಜೂನ್ 07: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಸಮೀಪಿಸುವ ಮುನ್ಸೂಚನೆಗಳು ಸಿಗುತ್ತಿವೆ. ಡಿಲಿಮಿಟೇಷನ್ ವರದಿಯನ್ನು ಬಿಬಿಎಂಪಿ ಇನ್ನೆರಡು ದಿಗಳಲ್ಲಿ ಸಲ್ಲಿಕೆಯನ್ನು ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಡಿಲಿಮಿಟೇಷನ್ ವರದಿ ಸಲ್ಲಿಕೆಯಾಗುತ್ತಿದ್ದ ಸರ್ಕಾರ ವರದಿಯನ್ನು ಪರಿಶೀಲನೆಯನ್ನು ಮಾಡಲಿದೆ.

ಡಿಲಿಮಿಟೇಷನ್ ವರದಿಯನ್ನು ಬಿಬಿಎಂಪಿ ಇನ್ನೆರಡು ದಿನದಲ್ಲಿ ಕೊಡುವುದಾಗಿ ತಿಳಿಸಿದೆ. ಬಿಬಿಎಂಪಿ ಎರಡು ದಿನದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ ಮೇಲೆ ಸರ್ಕಾರ ಮೀಸಲಾತಿಯನ್ನು ನಿಗದಿ ಪಡಿಸಬೇಕಿದೆ. ಬಿಬಿಎಂಪಿಯ ಚುನಾವಣೆ ನಡೆಸಲು 12 ವಾರಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಸರ್ಕಾರವೂ ಚುನಾವಣೆಯನ್ನು ನಡೆಸಲು ಉತ್ಸುಕವಾಗಿರುವ ಹಿನ್ನೆಲೆಯಲ್ಲಿ ಡಿಲಿಮಿಟೇಷನ್ ವರದಿ ಬಹುಮುಖ್ಯವಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಇದ್ದ ಸಂದರ್ಭದಲ್ಲಿ 110 ಹಳ್ಳಿಗಳನ್ನೊಳಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆಯನ್ನು ನಿರ್ಮಿಸಲಾಯ್ತು. ಆಗ 198 ವಾರ್ಡ್ ಗಳನ್ನು ರಚನೆಯನ್ನು ಮಾಡಲಾಗಿತ್ತು. ಇದೀಗ 2011ರ ಜನಸಂಖ್ಯಾ ಆಧಾರದಲ್ಲಿ 243 ವಾರ್ಡ್‌ಗಳನ್ನು ಡೀ ಲಿಮಿಟೇಷನ್ ಮಾಡಲಾಗುತ್ತಿದೆ.

BBMP ward Delimitation: bbmp officers submits report within two days

2011ರ ಜನಗಣತಿ ಆಧಾರಿಸಿ ವಾರ್ಡ್ ಮರುವಿಂಗಣೆ

2011ರ ಜನಗಣತಿ ಆಧರಿಸಿದಂತೆ ಬೆಂಗಳೂರಿನಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು ಅದನ್ನು 243 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ ಬರಲಿದೆ. ನಗರದ ಕೇಂದ್ರ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಜನಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ, ಬಿಬಿಎಂಪಿ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಿದಿಲ್ಲ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಿದ್ದು 243 ವಾರ್ಡ್ ಗಳು ಡಿಲಿಮಿಟೇಷನ್ ಸೃಷ್ಟಿಯಾಗಲಿವೆ.

ಚುನಾವಣೆ ಮುಂದೂಡಲಿ ಅಂತ ಅಧಿಕಾರಿಗಳೇ ತಡ ಮಾಡುತ್ತಿದ್ದಾರಾ?

ಸುಪ್ರೀಂ ಕೋರ್ಟ್ ಬಿಬಿಂಪಿ ಚುನಾವಣೆಯನ್ನು ನಡೆಸಲು 12 ವಾರಗಳ ಕಾಲಾವಕಾಶವನ್ನು ನೀಡಿದೆ. ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಅಧಿಕಾರಿಗಳೇ ತಡ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಬಿಬಿಎಂಪಿ ಅಧಿಕಾರಿಗಳು ಉತ್ತರಿಸಿದ್ದಾರೆ. ಸುಪ್ರೀಂ ಆದೇಶದ ನಂತರ ಮೂರು ವಾರಗಳಷ್ಟೇ ಕಳೆದಿದೆ. ಇನ್ನು ಸಮಯಾವಕಾಶವಿದೆ, ಕಂದಾಯ ವಿಶೇಷ ಆಯಕ್ತರು ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

BBMP ward Delimitation: bbmp officers submits report within two days

ಬಿಬಿಎಂಪಿಯ ವಾರ್ಡ್ ವಿಂಗಡಣೆಯಲ್ಲಿ ಗೊಂದಲಗಳಾಗಿರೋದು ಸತ್ಯವಾಗಿದ್ದರು ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೇ ಅನೇಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಬಿಬಿಎಂಪಿ ಸದಸ್ಯರ ಅಧಿಕಾರ ಮುಗಿದು ಎರಡು ವರ್ಷಗಳು ಆಗುತ್ತಾ ಬಂದಿದ್ದರು ಸರ್ಕಾರ ಮಾತ್ರ ಚುನಾವಣೆಯನ್ನು ನಡೆಸಲು ಮೀನಾಮೇಷ ಎಣಿಸುತ್ತಿದೆ. ಜನಪ್ರತಿನಿಧಿಗಳಿಲ್ಲದೇ ಜನಸಾಮನ್ಯರು ಅನೇಕ ಸಂಕಷ್ಟ ಎದುರಿಸುವಂತಾಗಿದೆ ಸರ್ಕಾರ ಆದಷ್ಟು ಬೇಗ ಚುನಾವಣೆಯನ್ನು ನಡೆಸಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+