Namma Metro: ಹಸಿರು ಮಾರ್ಗದಲ್ಲಿ ಬಿಬಿಎಂಪಿಯಿಂದ ₹60 ಕೋಟಿ ಯೋಜನೆ, ಮಾಹಿತಿ
ಬೆಂಗಳೂರು, ಫೆಬ್ರವರಿ 09: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ. ಆದರೆ ದಟ್ಟಣೆ ಇರುವ ರಸ್ತೆಗಳ ಮೂಲಕ ಮೆಟ್ರೋ ನಿಲ್ದಾಣಕ್ಕೆ ಬರುವಾಗ ಪ್ರಯಾಣಿಕರು, ಪಾದಾಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇದರ ನಿವಾರಣೆಗೆ ಬಿಬಿಎಂಪಿ ₹60 ಕೋಟಿ ಯೋಜನೆಗೆ ಕೈ ಹಾಕಿದೆ.
ಹೌದು, ಆರಂಭಿಕ ಹಂತದಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಬಿಬಿಎಂಪಿ ಮೆಟ್ರೋ ನಿಲ್ದಾಣಗಳ ಬಳಿ ಇರುವ ಫುಟ್‌ಪಾತ್‌ಗಳ ಕಳಪೆ ಸ್ಥಿತಿಯನ್ನು ಸರಿಪಡಿಸಲು ನಿರ್ಧರಿಸಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗದ ಉದ್ದಕ್ಕೂ 'ಲೈಟ್ ಟೆಂಡರ್‌ಶೂರ್' ಮಾದರಿಯನ್ನು ಬಳಸಿಕೊಂಡು ಫುಟ್‌ಪಾತ್‌ಗಳನ್ನು ಪುನರಾಭಿವೃದ್ಧಿ ಮಾಡಲು ಬಿಬಿಎಂಪಿ ಯೋಜಿಸಿದೆ.

ಈ ಯೋಜನೆಯಲ್ಲಿ ಪ್ರಾಥಮಿಕವಾಗಿ ಸಂಪಿಗೆ ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರ ಸಂಪರ್ಕಿಸುವ ಹಸಿರು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲಾಗುವು. ಹೀಗಾಗಿ ಪಾದಾಚಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ಹೇಳಿದೆ.
ಹಾಳಾಗಿರುವ ಪಾದಾಚಾರಿಗಳು
ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ಮತ್ತು ದಕ್ಷಿಣ ವಿಭಾಗದ ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪಾದಾಚಾರಿಗಳ ಅಭಿವೃದ್ಧಿಗೆ ಪಾಲಿಕೆಯು ₹60 ಕೋಟಿ ಹಂಚಿಕೆ ಮಾಡಿದೆ. ಸದ್ಯ ಅನೇಕ ಕಡೆಗಳಲ್ಲಿ ಮೆಟ್ರೊ ನಿಲ್ದಾಣಗಳಿಗೆ ಹೋಗುವ ಪಾದಾಚಾರಿ ಮಾರ್ಗಗಳು ಸುವ್ಯವಸ್ಥಿತವಾಗಿಲ್ಲ.

ಆದ್ದರಿಂದ, ಸಾಮಾನ್ಯ ಟೆಂಡರ್‌ಶೂರ್ ಮೂಲಕ ಈ ಪಾದಾಚಾರಿ ಮಾರ್ಗಗಳನ್ನು ಪುನರಾಭಿವೃದ್ಧಿಯನ್ನು ಕೈಗೊಳ್ಳಲುತ್ತಿದ್ದೇವೆ. ಇದಲ್ಲಿ ಸಾಮಾನ್ಯ ಟೆಂಡರ್‌ಶೂರ್ ಮಾದರಿಯು ಪಾದಾಚಾರಿ ಮಾರ್ಗ ವಿಸ್ತರಣೆ ಹಾಗೂ ಡ್ರೈನ್‌ಗಳನ್ನು ಮರು ರೂಪಿಸುವುದು ಸಹ ಒಳಗೊಂಡಿದೆ ಎಂದು ಯೋಜನಾ ವಿಭಾಗದ ಅಧಿಕಾರಿಗಳು ವಿವರಿಸಿದರು.
ಯೋಜನೆ ವ್ಯಾಪ್ತಿಗೆ ಬಾರದ ಭೂಗತ ಕೇಬಲ್ ವ್ಯವಸ್ಥೆ
ಈ ಪುಟ್‌ಪಾತ್ ಅಭಿವೃದ್ಧಿ ಯೋಜನೆಯಲ್ಲಿ ಸಾಮಾನ್ಯ ಟೆಂಡರ್‌ಶ್ಯೂರ್ ಮಾದರಿ ಆಗಿರುವುದರಿಂದ ಭೂಗತ ಕೇಬಲ್‌ಗಳ ಅಳವಡಿಕೆ ಇದರ ವ್ಯಪ್ತಿಗೆ ಬರುವುದಿಲ್ಲ. ಹೀಗಾಗಿ ಪಾದಾಚರಿ ಅಭಿವೃದ್ಧಿ ಯೋಜನೆಯು ಯಾವುದೇ ತಡೆ ಇಲ್ಲದೇ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬಿಬಿಎಂಪಿ ಯೋಜನೆ ಬಳಿಕ ಮೆಟ್ರೋ ಹಸಿರು ಮಾರ್ಗದಲ್ಲಿ ರಸ್ತೆಯಿಂದ ಮೆಟ್ರೋ ನಿಲ್ದಾಣ ಸಂಪರ್ಕಿಸುವ ಪಾದಾಚಾರಿ ಮಾರ್ಗಗಳು ವಿಶಾಲವಾಗಲಿವೆ. ಕ್ರಿಯಾತ್ಮಕವಾಗಿರುವ ಜತೆಗೆ ಸುವ್ಯವಸ್ಥಿತವಾಗಿ ತಲೆ ಎತ್ತಲಿವೆ. ಇದು ಮೆಟ್ರೋ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಕಳೆದ ವರ್ಷ ಬಿಬಿಎಂಪಿ ಬಜೆಟ್‌ನಲ್ಲಿ 350 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಸಾಮಾನ್ಯ ಟೆಂಡರ್ ಶ್ಯೂರ್ ಮಾದರಿಯಲ್ಲಿ ಯೋಜನೆ ಕೈಗೊಳ್ಳಲಾಗಿತ್ತು. ಅದಕ್ಕಾಗಿ ₹450 ಕೋಟಿ ಮೀಸಲಿಡಲಾಗಿತ್ತು ಎಂದು ಬಿಬಿಎಂಪಿ ಹೇಳಿದೆ.












Click it and Unblock the Notifications