BBMP Survey: ಒಂದೇ ಬಡಾವಣೆಯಲ್ಲಿ 40 ಅಕ್ರಮ ಕಟ್ಟಡ ಪತ್ತೆ
ಬೆಂಗಳೂರು, ಅಕ್ಟೋಬರ್ 26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವೈಟ್‌ಫೀಲ್ಡ್‌ನಲ್ಲಿ ಕಾನೂನು ಬಾಹಿರ ಕಟ್ಟಡಗಳ ಸಮೀಕ್ಷೆಯ ನಡೆಸಿದೆ. ಈ ವೇಳೆ ಒಂದೇ ಬಡಾವಣೆಯಲ್ಲಿ 40 ಅಕ್ರಮ ಕಟ್ಟಡಗಳನ್ನು ಪತ್ತೆ ಮಾಡಿದೆ.
ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಹಾವಳಿ ನಿವಾರಣೆಗೆ ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಹೈಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ಸಮೀಕ್ಷೆ ಕೈಗೊಂಡಿದೆ. ಈ ಸರ್ವೇ ವೇಳೆ ಸಂದರ್ಭದಲ್ಲಿ, ಅಧಿಕಾರಿಗಳು ವೈಟ್ ರೋಸ್ ಬಡಾವಣೆಯಲ್ಲಿ ಅನೇಕ ಕಟ್ಟಡಗಳ (ಕೆಂಪು ಬಣ್ಣ ಬಳಿದ) ನಕ್ಷೆ ಮಂಜೂರಾತಿಯನ್ನು ನೀಡುವಂತೆ ಮಾಲೀಕರನ್ನು ಕೇಳಲಾಯಿತು. ಈ ವೇಳೆ ಒಟ್ಟು 40 ಪಿಜಿ ಕಟ್ಟಡಗಳು ಇರುವುದು ಪತ್ತೆ ಆಗಿದೆ.

ವೈಟ್‌ಫೀಲ್ಡ್ ನಿವಾಸಿಗಳು ಐಟ್ ರೋಸ್ ಬಡಾವಣೆ ಮತ್ತು ಇತರ ಬಡಾವಣೆಗಳನ್ನು ವಾಸಿಗಳು ಅಕ್ರಮ ಕಟ್ಟಡ ಸ್ಥಾಪನೆಗಳ ವಿರುದ್ಧ ಅನೇಕ ಬಾರಿ ದೂರು ನೀಡಿದ್ದರು. ಅದರ ಭಾಗವಾಗಿಯೇ ಇದೀಗ ಕ್ರಮ ಅಕ್ರಮ ಕಟ್ಟಡಗಳು ಪತ್ತೆ ಆಗಿವೆ. ಈ ಬಡಾವಣೆಯಲ್ಲಿರುವ ಅಕ್ರಮ ಕಟ್ಟಡಗಳಲ್ಲಿ ಬಹುತೇಕವುಗಳು ಹೆಚ್ಚು ಪಾವತಿಸುವ ಅತಿಥಿ ವಸತಿ ಗೃಹ (PG)ಗಳು ಇವೆ.
ಕೊಳಚೆ ನೀರು ಹರಿದು ಅನಾರೋಗ್ಯ ಸೃಷ್ಟಿ?
ಬಡಾವಣೆಯಲ್ಲಿರುವ ಕಟ್ಟಡಗಳಿಂದ ಕೊಳಚೆ ನೀರು ರಸ್ತೆಗಳಲೆಲ್ಲ ಹರಿಯುತ್ತಿದೆ. ಅಕ್ಕಪಕ್ಕದ ಪ್ರದೇಶಗಳಿಗೆ ಆರೋಗ್ಯದ ಅಪಾಯ ಎದುರಾಗುವ ಸಾಧ್ಯತೆಗಳು ಇವೆ ಎಂದು ಆ ಪ್ರದೇಶದ ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುಧನ್ ಅಳಲು ತೋಡಿಕೊಂಡರು. ಇಲ್ಲಿನ ನೀರು ಅಥವಾ ಒಳಚರಂಡಿ ಸಂಪರ್ಕಗಳ ಮೂಲಕ ಹರಿದು ಹೋಗುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ ಉಂಟಾಗುವ ಕೊಳಚೆ ಸೃಷ್ಟಿಯು ಅನಾರೋಗ್ಯ ತರಲಿದೆ ಎಂದರು.
ಸದ್ಯ ಪತ್ತೆಯಾಗಿರುವ 40 ಕಟ್ಟಡಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು, ಕಟ್ಟಡ ಬೈಲಾಗಳು, ನಿಯಮಗಳನ್ನು ಅನುಸರಿಸಿಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಅಗತ್ಯ ಕ್ರಮ ಜರುಗಿಸಲಾಗುತ್ತಿದೆ ಎಂದು ಡಿಎಚ್ ವರದಿ ಮಾಡಿದೆ.












Click it and Unblock the Notifications