Brand Bengaluru: ಯೋಜನೆಗೆ ಪೂರಕವಾಗಿ ಸಲಹೆಗಳ ವಿಂಗಡಿಸಿದ ಬಿಬಿಎಂಪಿ, ಮುಖ್ಯ ಅಂಶಗಳು
ಬೆಂಗಳೂರು, ಆಗಸ್ಟ್ 08: ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ರಚಿತವಾದ ಸಮಿತಿಯ ಜೊತೆಗೆ ಬಿಬಿಎಂಪಿಯ ಎರಡನೇ ಸಭೆ ನಡೆಯಿತು. ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ನಾಗರಿಕರಿಂದ ಅನೇಕ ಬಗೆಯ ಸಲಹೆಗಳು ಬಂದಿವೆ. ಅವುಗಳ ಮೇಲೆ ಪಾಲುದಾರ ಶೈಕ್ಷಣಿಕ ಸಂಸ್ಥೆಯಾದ ಸೃಷ್ಟಿ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಟೆಕ್ನಾಲಜಿ ವತಿಯಿಂದ ಅಧ್ಯಯನ ನಡೆಸಿ ವರದಿ ಸಿದ್ದಪಡಿಸಲಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ತಿಳಿಸಿದರು.
ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಬ್ರ್ಯಾಂಡ್ ಬೆಂಗಳೂರು ಸಂಬಂಧ ರಚಿತವಾದ ಸಮತಿ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಲ್ಲಿಕೆಯಾದ ಸಲಹೆಗಳ ಆಧಾರದಲ್ಲಿ ಯೋಜನೆ ರೂಪಿಸಲು ವರದಿ ಸಿದ್ಧಪಡಿಸಲಾಗಿದೆ. ಆದಷ್ಟು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ನಾಗರಿಕರಿಂದ ಬಂದ ಪ್ರಮುಖ ಸಲಹೆಗಳನ್ನು ಈಗಾಗಲೇ ವಿವಿಧ ವರ್ಗಗಳಲ್ಲಿ ಬೇರ್ಪಡಿಸಲಾಗಿದೆ. ಅದರಲ್ಲಿರುವ ಪ್ರಮುಖ ಸಲಹೆಗಳನ್ನು ಅಂತಿಮಗೊಳಿಸಬೇಕಿದೆ. ಜತೆ CSR ಅಡಿಯಲ್ಲಿ ತೆಗೆದುಕೊಳ್ಳಬಹುದಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸಬೇಕಿದೆ ಎಂದು ಹೇಳಿದರು.
ವಿವಿಧ ವರ್ಗಗಳಲ್ಲಿ ಬೇರ್ಪಡಿಸಿರುವ ಸಲಹೆಗಳ ಮಾಹಿತಿ
* ಬೆಂಗಳೂರಿಗೆ 'ಸಾಂಸ್ಕೃತಿಕ ಕ್ಯಾಲೆಂಡರ್' ಪ್ರಕಟಿಸುವುದು
ಕೆರೆ ಹಬ್ಬ (ಜನವರಿ 14 ರಿಂದ 16), ಹೂವಿನ ಹಬ್ಬ (ಮಾರ್ಚ್ 2 ನೇ ವಾರಾಂತ್ಯ), ಕರಗ (ಏಪ್ರಿಲ್), ಥಿಯೇಟರ್ ಫೆಸ್ಟಿವಲ್(ಮೇ), ನಾಡ ಹಬ್ಬ - ಬೆಂಗಳೂರು ಹಬ್ಬ (ಜೂನ್ ಕೊನೆ ವಾರ), ಬೆಂಗಳೂರು ದಸರಾ (ಅಕ್ಟೋಬರ್), ಕನ್ನಡ ರಾಜ್ಯೋತ್ಸವ ಮಾಸ (ನವೆಂಬರ್ ತಿಂಗಳು), ಐಟಿ.ಕಾಂ (ನವೆಂಬರ್), ಕಡಲೆಕಾಯಿ ಪರಿಷೆ (ನವೆಂಬರ್ 26 ರಿಂದ 28), ಊರ ಹಬ್ಬ - ಗ್ರಾಮ ದೇವತೆ ಉತ್ಸವಗಳು (ನವೆಂಬರ್-ಡಿಸೆಂಬರ್), ಬೆಂಗಳೂರು ಫೆಸ್ಟ್ (ಡಿಸೆಂಬರ್ 10 ದಿನ), ಹೊಸ ವರ್ಷದ ಮುನ್ನಾದಿನ (31 ಮತ್ತು 1 ನೇ) ಈ ದಿನಗಳನ್ನು ಬೆಂಗಳೂರಿನ ಸಾಂಸ್ಕೃತಿ ಕ್ಯಾಲೆಂಡರ್ ನಲ್ಲಿ ಅಳವಡಿಸಿ ಕ್ಯಾಲೆಂಡರ್ ಹೊರ ತರಬೇಕು.

* ಸಾಂಸ್ಕೃತಿಕ ಪ್ರದೇಶ ನವೀಕರಣ
ನಗರದ ಜೆಸಿ ರಸ್ತೆಯಲ್ಲಿ ಥಿಯೇಟರ್ ಕಾಂಪ್ಲೆಕ್ಸ್, ಬಿಬಿಎಂಪಿಯೊಂದಿಗೆ ಎಲ್ಲಾ ಥಿಯೇಟರ್ ಸಂಕೀರ್ಣಗಳನ್ನು ನವೀಕರಿಸುವುದು ಮತ್ತು ಮರುಸ್ಥಾಪಿಸಬೇಕು. ಬೆಂಗಳೂರಿನ 4 ದಿಕ್ಕುಗಳಲ್ಲಿ 4 ಹೊಸ ಆಡಿಟೋರಿಯಂ ಸ್ಥಾಪಿಸಬೇಕು.
* ಸಾರ್ವಜನಿಕ ಸ್ಥಳ ಅಭಿವೃದ್ಧಿ
ಸಾರ್ವಜನಿಕ ಸ್ಥಳಗಳನ್ನು ರಚಿಸಲು ಕನಿಷ್ಠ 25 ಜಂಕ್ಷನ್‌ಗಳನ್ನು ವಿನ್ಯಾಸಗೊಳಿಸುವುದು, ಡಿಜಿಟಲ್ ಸೈನೇಜ್‌ಗಳು / ಗಾಳಿಯ ಗುಣಮಟ್ಟ ಸೂಚಕಗಳ ಅಳವಡಿಸುವುದು.
*ಪಾರಂಪರಿಕ ಕಾರಿಡಾರ್‌ಗಳು, ಪರಂಪರೆ ರಚನೆಗಳ ಮರುಸ್ಥಾಪನೆ
ಬೆಂಗಳೂರು ದಕ್ಷಿಣದಲ್ಲಿ ಕೆಂಪೇಗೌಡ ಹೆರಿಟೇಜ್ ಕಾರಿಡಾರ್ 12 ಕಿಮೀ ಕಾರಿಡಾರ್, ಸ್ಯಾಂಕಿ ಟ್ಯಾಂಕ್ - ಕಾಡು ಮಲ್ಲೇಶ್ವರ ದೇವಸ್ಥಾನ - ಉತ್ತರ ಗೋಪುರ ಕಾರಿಡಾರ್, ಹಲಸೂರು ಟ್ಯಾಂಕ್/ಸೋಮೇಶ್ವರ ದೇವಸ್ಥಾನ ಪೂರ್ವ ಗೋಪುರ ಕಾರಿಡಾರ್, ಸಿಬಿಡಿ ವಿಕ್ಟೋರಿಯನ್ ಬೆಂಗಳೂರು ಗೋಲ್ಡನ್ ಕಾರಿಡಾರ್ ರಚಿಸುವುದು.
*ಉದ್ಯಾನವನಗಳು ಮತ್ತು ಕೆರೆಗಳು
ಹೂ ಹಬ್ಬ / ಕೆರೆ ಹಬ್ಬ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಿವಿಲ್ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು, ಉದ್ಯಾನವನಗಳು ಮತ್ತು ಕೆರೆಗಳಲ್ಲಿರುವ ಮರಗಳನ್ನು ಟ್ಯಾಗ್ ಮಾಡುವುದು.
* ವಸ್ತು ಸಂಗ್ರಹಾಲಯಗಳು, ಫ್ರೀಡಂ ಪಾರ್ಕ ಮರುರೂಪಿಸುವುದು
ಬೆಂಗಳೂರಿಗೆ ಲ್ಯಾಂಡ್‌ಮಾರ್ಕ್ ವಾಚ್‌ಟವರ್, ಪಬ್ಲಿಕ್ ಯುಟಿಲಿಟಿ ಕಟ್ಟಡವನ್ನು ಮರುಬಳಕೆ ಮಾಡಬೇಕು. ಸ್ವಾತಂತ್ರ್ಯ ಉದ್ಯಾನ ಮರುರೂಪಿಸಬೇಕು ಫ್ರೀಡಂ ಪಾರ್ಕ್ ಅನ್ನು ಮರುರೂಪಿಸುವುದು. ಸಾಂಸ್ಕೃತಿಕ ಚಟುವಟಿಕೆಗಳಿಗೆ ವಸ್ತು ಸಂಗ್ರಹಾಲಯ (ಸರ್ಕಾರಿ ವಸ್ತುಸಂಗ್ರಹಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ವೆಂಕಟಪ್ಪ ಆರ್ಟ್ ಗ್ಯಾಲರಿ, ವಾಟರ್ ಮ್ಯೂಸಿಯಂ, ಕೆಂಪೇಗೌಡ ಮ್ಯೂಸಿಯಂ, ತಾರಾಲಯ, ಯುದ್ಧ ಸ್ಮಾರಕದಲ್ಲಿರುವ ಐಜಿ ಸಂಗೀತ ಕಾರಂಜಿ)ಗಳನ್ನು ಬಳಕೆ ಮಾಡಿಕೊಳ್ಳುವುದು.
* ಸಾರ್ವಜನಿಕ ಕಲೆ
ಸಾರ್ವಜನಿಕ ಕಲೆಗಳಿಗಾಗಿ ಸ್ಥಳಗಳನ್ನು ಆಯ್ಕೆಮಾಡಬೇಕು ಎಂದು ಸಲಹೆಗಳು ಬಂದಿವೆ. ಸ್ಟೋನ್ ಆರ್ಟ್/ಮೆಟಲ್ ಆರ್ಟ್/ ಭಿತ್ತಿ ಚಿತ್ರಗಳು / ಕಲೆಗಳ ಮರುಬಳಕೆ, ಮೇಲುಸೇತುವೆಗಳ ಕೆಳಗಿನ ಜಾಗಗಳನ್ನು ಬಳಸುವುದು, ಪ್ರತಿ ಮೇಲುಸೇತುವೆ ಕೆಳಭಾಗದಲ್ಲಿ ಕಲಾ ಶಾಲೆಗಳನ್ನು ತೆರೆಯಬೇಕು. ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಗೋಪುರ ನಿರ್ಮಿಸುವುದು.
* ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ
ಬ್ಯಾಂಡ್ ಸ್ಟ್ಯಾಂಡ್‌ಗಳನ್ನು ಮರು ಬಳಸುವುದು, ಬೆಂಗಳೂರು ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವುದು, ಓಪನ್ ಸ್ಟ್ರೀಟ್ ಕಾರ್ಯಕ್ರಮಗಳನ್ನು ನಡೆಸುವುದು, ಸಮೂಹ ಗಾಯನ, ರಾಮನವಮಿ ಸಂಗೀತೋತ್ಸವ ನಡೆಸಬೇಕು. ಹೀಗೆ ಹಲವು ಸಲಹೆಗಳನ್ನು ವಿಂಗಡಿಸಿದ್ದೇವೆ. ಅದರ ಆಧಾರದಲ್ಲಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications