ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಸಾಲ ಮಾಡದಂತೆ ಮಾನ್ಯ ಮುಖ್ಯಮಂತ್ರಿ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಜ.24 : ಬೆಂಗಳೂರನ್ನು ಅಭಿವೃದ್ಧಿ ಮಾಡುವ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿರುವ ಸಾಲ ಎಷ್ಟುಗೊತ್ತೆ ಬರೋಬ್ಬರಿ 3,420.85 ಕೋಟಿ ರೂ.. ಇದು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿಗೆ ನೀಡಿರುವ ಮಾಹಿತಿ. ಸದ್ಯ ಯಾವುದೇ ಬ್ಯಾಂಕ್ ಗಳಿಂದ ಸಾಲ ಮಾಡದಂತೆ ಬಿಬಿಎಂಪಿಗೆ ಅವರು ಸೂಚನೆ ನೀಡಿದ್ದಾರೆ.

ಬಿಜೆಪಿಯ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿಯು ಹುಡ್ಕೊ ಸಂಸ್ಥೆ ಹಾಗೂ ಖಾಸಗಿ ಬ್ಯಾಂಕ್‌ಗಳಿಂದ ಒಟ್ಟು ರೂ. 3,420.85 ಕೋಟಿ ಸಾಲ ಮಾಡಿದೆ. ಅಲ್ಲದೆ, ಗುತ್ತಿಗೆದಾರರಿಗೆ ರೂ. 3,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

CM Siddaramaiah

ಬಿಬಿಎಂಪಿಗೆ ಹುಡ್ಕೊ 1,545.85 ಕೋಟಿ ರೂ., ವಾಣಿಜ್ಯ ಬ್ಯಾಂಕ್‌ಗಳು ರೂ. 1,850 ಕೋಟಿ ಮತ್ತು ಕೆಯು­ಐಡಿಎಫ್‌ಸಿ ರೂ. 25 ಕೋಟಿ ಸಾಲ ನೀಡಿವೆ ಎಂದು ಸಿಎಂ ವಿವರಣೆ ನೀಡಿದರು. ಹುಡ್ಕೊದಿಂದ ಇತ್ತೀಚೆಗೆ ರೂ. 169 ಕೋಟಿ ಸಾಲ ಪಡೆಯಲಾಗಿದೆ. ಆದರೆ, ಅದನ್ನು ವೆಚ್ಚ ಮಾಡಲು ಪಡೆ­ದಿಲ್ಲ. ಬ್ಯಾಂಕ್‌ಗಳ ಬಡ್ಡಿ ಹೊರೆ­ಯನ್ನು ಕಡಿಮೆ ಮಾಡಿಕೊಳ್ಳಲು ಹುಡ್ಕೊ­ದಿಂದ ಹೊಸ ಸಾಲ ಪಡೆದು, ಹಳೆಯ ಸಾಲ ತೀರಿಸಲಾಗಿದೆ ಎಂದು ತಿಳಿಸಿದರು.[ಬಿಬಿಎಂಪಿಯಲ್ಲಿ ಸಾವಿರ ರೂ. ಇಲ್ಲ]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಸಾಲವನ್ನು ಪಡೆಯುವುದು ಬೇಡ ಎಂದು ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದರು. ಸರ್ಕಾರ ನೀಡುವ ಅನುದಾನ ಮತ್ತು ಪಾಲಿಕೆಯ ಆದಾಯದಿಂದಲೇ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಗೌಡ, ಸಿದ್ದು ಜಟಾಪಟಿ : ಸಿಎಂ ಸಿದ್ದರಾಮಯ್ಯ ಮಾತಿನಿಂದ ತೃಪ್ತರಾಗದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷವೂ ವಿಶೇಷ ಅನುದಾನವನ್ನು ನೀಡಲಾಗಿತ್ತು. ಅದೇ ಮಾದರಿಯಲ್ಲಿ ಕಾಂಗ್ರೆಸ್‌ ಸರ್ಕಾರವೂ ಬಿಬಿಎಂಪಿಗೆ ಧನ ಸಹಾಯ ಮಾಡಬೇಕು. ನಗರದ ರಸ್ತೆಗಳು ಹಾಳಾಗಿದ್ದು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿ ವ್ಯಾಪ್ತಿ­ಯಲ್ಲಿ ಒಟ್ಟು 13,000 ಕಿ.ಮೀ. ಉದ್ದದ ರಸ್ತೆ ಜಾಲವಿದೆ. ಅದ­ರಲ್ಲಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಉದ್ದ 1,940 ಕಿ.ಮೀ.­ಯಷ್ಟಿದೆ. ಪ್ರಸಕ್ತ ವರ್ಷ 551 ಕಿ.ಮೀ. ಉದ್ದದ ಹದಗೆಟ್ಟ ರಸ್ತೆಯನ್ನು ಸುಧಾರಣೆ ಮಾಡಲಾಗುತ್ತಿದೆ ಎಂದು ಸಿಎಂ ಉತ್ತರ ನೀಡಿದರು. ಬಿಜೆಪಿ ಸರ್ಕಾರ ಬಿಬಿಎಂಪಿಗೆ ಕೊಟ್ಟ ಅನುದಾನ ಎಲ್ಲಿಹೋಗಿದೆ ಎಂದು ಸಿಎಂ ಗೌಡರಿಗೆ ಪ್ರಶ್ನಿಸಿದರು.

ಬಿಬಿಎಂಪಿ ವ್ಯಾಪ್ತಿ­ಯಲ್ಲಿ ರಾಜಾಕಾಲುವೆ ಒತ್ತುವರಿಯಾಗಿತ್ತು. ಇದರಿಂದ ಮಳೆನೀರು ಸರಾಗವಾಗಿ ಹರಿ­ಯಲು ಅಡ್ಡಿಯಾಗಿತ್ತು. ಇದುವರೆಗೂ 625 ಒತ್ತುವರಿ ಪ್ರಕರಣಗ­ಳನ್ನು ಗುರುತಿಸಲಾಗಿದ್ದು, 416 ಪ್ರದೇಶಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು. 857 ಕಿ.ಮೀ. ಉದ್ದದ ರಾಜಕಾಲುವೆ­ಗಳ ಉದ್ದ ಮತ್ತು ಅಗಲ ಖಾತರಿ ಮಾಡಿಕೊಳ್ಳಲು ಸರ್ವೆ ಕಾರ್ಯ ನಡೆದಿದ್ದು, ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

English summary
Chief Minister Siddaramaiah has directed the Bruhat Bangalore Mahanagara Palike (BBMP) not to take fresh loans. The civic body should function with its own resources and government grants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X