ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ 4ಕಡೆ ತ್ಯಾಜ್ಯ ವಿಲೇವಾರಿ ಘಟಕ

By Ashwath
|
Google Oneindia Kannada News

ಬೆಂಗಳೂರು, ಜೂನ್‌.4: ಬೆಂಗಳೂರು ಕಸ ವಿಲೇವರಿ ಸಮಸ್ಯೆಗೆ ಪರಿಹಾರ ಮಾಡಲು 4 ಕಡೆ ತ್ಯಾಜ್ಯವಿಲೇವಾರಿ ಘಟಕಗಳನ್ನು ಆರಂಭಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ನಿತ್ಯ ನಾಲ್ಕು ಸಾವಿರ ಟನ್‌ ಕಸ ಸಂಗ್ರಹಣೆ ಆಗುತ್ತಿದ್ದು, ಘಟಕಗಳನ್ನು ಆರಂಭಿಸಿದ ನಂತರ 2700 ಟನ್‌ ಕಸ ವಿಲೇವಾರಿ ಮಾಡಬಹುದು ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

ದೊಡ್ಡಬೆಳವಂಗಲ 100 ಎಕರೆ ಜಾಗದಲ್ಲಿಎಂಎಸ್‌ಜಿಪಿ ಸಂಸ್ಥೆ ಬಳಿ 500 ಟನ್‌ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲಿದೆ. ಸತಾರಾಂ ಇಂಡಿಯಾ ಸಂಸ್ಥೆ ರಾಮನಗರ ಬಳಿಯ ಗೊರೂರು ಗ್ರಾಮದಲ್ಲಿ ಒಂದು ಸಾವಿರ ಟನ್‌ ಸಾಮರ್ಥ್ಯದ ಘಟಕ ಸ್ಥಾಪಿಸಲಿದೆ ಎಂದರು.[ಮಂಡೂರು: ಮದ್ಯದ ದಾಸರಾಗುತ್ತಿರುವ ಪ್ರೈಮರಿ ಮಕ್ಕಳು]

waste disposal unit
ಎಸ್‌ಎಲ್‌ ಇನ್ಫಾ ಪ್ರಾಜೆಕ್ಟ್‌ ಲಿಮಿಟೆಟ್‌ ಮಾಗಡಿ ರಸ್ತೆಯಲ್ಲಿ 600 ಟನ್‌ ಸಾಮರ್ಥ್ಯದ ಘಟಕ ಆರಂಭಿಸಲಿದೆ. ಮ್ಯಾಟೋಸ್‌ ಸಂಸ್ಥೆ ದೊಡ್ಡಬಳ್ಳಾಪುರ ಬಳಿ 200 ಟನ್‌ ಸಾಮರ್ಥ್ಯದ ಘಟಕ ಮತ್ತು ಬಿಬಿಎಂಪಿ ಹೋಟೆಲ್‌ ಅಸೋಸಿಯೇಷನ್‌ ಕನ್ನಹಳ್ಳಿಯಲ್ಲಿ 250 ಟನ್‌ ಸಾಮರ್ಥ್ಯದ ಘಟಕ ಸ್ಥಾಪಿಸಲಿದೆ ಎಂದರು

ನಗರದ 16 ಕಡೆ ಜೈವಿಕ ಇಂಧನ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ 5 ಕಡೆ ಕೆಲಸ ಶುರುವಾಗಿದೆ. ಪ್ರತಿ ಘಟಕದಲ್ಲಿ ತಲಾ 5 ಟನ್‌ ಕಸ ವಿಲೇವಾರಿ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮಾತೃಇಲಾಖೆಗೆ ಶಿಫ್ಟ್‌‌:
ಕಸ ವಿಲೇವಾರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಬಿಬಿಎಂಪಿಯಿಂದ ಮಾತೃ ಇಲಾಖೆಗೆ ಕಳುಹಿಸಲಾಗುವುದು. ಜಂಟಿ ಆಯುಕ್ತರ ಸಭೆ ಕರೆದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮಂಡೂರು ಗಲಾಟೆ ಆದ ಬಳಿಕ ಐದು ಜನ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಮುಂದೆ ಯಾವ ಅಧಿಕಾರಿಗಳಿಗೂ ಎಚ್ಚರಿಕೆ ನೀಡುವ ಪ್ರಶ್ನೆಯೆ ಇಲ್ಲ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.

English summary
BBMP Commissioner M Lakshminarayana said a few private firms have commenced work for setting up of plants for scientifically dispose 2700 tonnes of waste generated in the city.The government and the BBMP are underestimating the time required for their new waste processing units to become operational.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X