ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮುಚ್ಚಬೇಕಾದ ರಸ್ತೆಗುಂಡಿಗಳೆಷ್ಟು?, ಬಿಬಿಎಂಪಿ ಏನು ಹೇಳುತ್ತೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರಿನಲ್ಲಿ ಒಟ್ಟು 198 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಬಿಬಿಎಂಪಿ ಹೇಳಿದೆ.

ಇದುವರೆಗೆ ನಗರದಲ್ಲಿ 1,334 ಗುಂಡಿಗಳನ್ನು ಮುಚ್ಚಿದ್ದು, ಇನ್ನೂ ಕೇವಲ 198 ರಸ್ತೆ ಗುಂಡಿ ಮಾತ್ರ ಉಳಿದಿವೆ. ಅವುಗಳನ್ನು ಮುಂದಿನ ಮೂರು ದಿನಗಳಲ್ಲಿ ಸರಿ ಪಡಿಸಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದಾರೆ.

ಸೆಪ್ಟೆಂಬರ್ ಅಂತ್ಯದೊಳಗೆ ನಗರದ ರಸ್ತೆಗುಂಡಿ ಮುಚ್ಚಲು ಗಡುವುಸೆಪ್ಟೆಂಬರ್ ಅಂತ್ಯದೊಳಗೆ ನಗರದ ರಸ್ತೆಗುಂಡಿ ಮುಚ್ಚಲು ಗಡುವು

ಸೆಪ್ಟಂಬರ್ 20 ರವೆರೆಗೆ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಸರ್ಕಾರ ಗಡುವು ನೀಡಿತ್ತು. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ 1,344 ಕಿಮೀ ವ್ಯಾಪ್ತಿಯಲ್ಲಿ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕೆಲಸಗಳು ನಡೆಯುತ್ತಿವೆ.

ಜಯಮಹಲ್, ಮರಿಗೌಡ, ರಿಚ್‌ಮಂಡ್, ಗೊರಗುಂಟೆಪಾಳ್ಯ, ರಾಜಕುಮಾರ ಸಮಾಧಿ ಎದುರಿನ ರಸ್ತೆ ಮತ್ತು ಯಶವಂತಪುರದಿಂದ ಗೊರಗುಂಟೆಪಾಳ್ಯದವರೆಗೆ ರಸ್ತೆಗಳು ಹಾಳಾಗಿವೆ ಎಂದು ಬಿಬಿಎಂಪಿ ಆಯುಕ್ತರು ಒಪ್ಪಿಕೊಂಡಿದ್ದಾರೆ, ಈ ರಸ್ತೆಗಳಲ್ಲಿ ಸದ್ಯ ಡಾಂಬರೀಕರಣ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಇದುವರೆಗೂ ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ ಎಂಬ ಬಗ್ಗೆ ಆಯುಕ್ತರು ಮತ್ತು ಬಿಬಿಎಂಪಿ ಎಂಜಿನೀಯರ್ ಗಳು ಮಾಹಿತಿ ನೀಡಲಿಲ್ಲ, ಕೇವಲ ಇನ್ನೂ 198 ರಸ್ತೆಗುಂಡಿ ಮಾತ್ರ ಮುಚ್ಚಬೇಕು ಎಂದು ಹೇಳಿದ್ದಾರೆ, ಆದರೆ ಬೆಂಗಳೂರು ನಿವಾಸಿಗಳು ಬಿಬಿಎಂಪಿಯ ಈ ಅಂಕಿ ಅಂಶಗಳನ್ನು ಒಪ್ಪಿಕೊಳ್ಳುತ್ತಿಲ್ಲ.

 ವೃದ್ಧರೊಬ್ಬರ ಸಾವು

ವೃದ್ಧರೊಬ್ಬರ ಸಾವು

ರಸ್ತೆ ಗುಂಡಿ ತಪ್ಪಿಸಲು ಹೋಗಿ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಖುರ್ಷಿದ್ ಅಹ್ಮದ್ (60) ಮೃತ ವ್ಯಕ್ತಿಯಾಗಿದ್ದಾರೆ. ಜಯನಗರದ ನಿವಾಸಿಯಾಗಿರುವ ಖುರ್ಷಿದ್ ಅಹ್ಮದ್ ಅವರು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೃತ ಖುರ್ಷಿದ್ ಅಂಗವಿಕಲರಾಗಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಕ್ತಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ರಸ್ತೆ ಗುಂಡಿ ಮುಚ್ಚವಂತೆಯೂ ಸೂಚನೆ ನೀಡಲಾಗಿದೆ. ಮಳೆ ನಿಂತ ತಕ್ಷಣ ಯುದ್ಧೋಪಾದಿಯಲ್ಲಿ ಕೆಲಸ ಆರಂಭವಾಗುತ್ತೆ. ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದರು.

 ಜಲಮಂಡಳಿ ನಿರ್ಲಕ್ಷ್ಯದಿಂದ ಸಾವು

ಜಲಮಂಡಳಿ ನಿರ್ಲಕ್ಷ್ಯದಿಂದ ಸಾವು

ರಸ್ತೆ ಗುಂಡಿಗೆ ಬಿದ್ದು ಜೀವ ಕಳೆದುಕೊಳ್ಳುವ ಪ್ರಕರಣಗಳಿಗೆ ನಗರದಲ್ಲಿ ಕೊನೆಯೇ ಇಲ್ಲದಾಗಿದೆ. ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ಹೊಣೆಗೇಡಿತನದಿಂದ ಶುಕ್ರವಾರ ರಾತ್ರಿ ಸ್ಕೂಟರ್‌ ಸವಾರನೊಬ್ಬ ಪ್ರಾಣ ಬಿಟ್ಟಿದ್ದಾರೆ. ವಾಲ್ಟ್ ಅಳವಡಿಕೆಗೆ ರಸ್ತೆ ಮಧ್ಯೆಯೇ ದೊಡ್ಡ ಹೊಂಡ ತೆಗೆದಿದ್ದರೂ ಬ್ಯಾರಿಕೇಡ್‌ ಅಳವಡಿಸದ ಕಾರಣ ಈ ಅನಾಹುತ ಸಂಭವಿಸಿದೆ. ಜಲಮಂಡಳಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ನಲವತ್ತೇಳು ವರ್ಷದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಬಲಿಯಾಗಿದ್ದಾರೆ.

 ಟಿಡಿಆರ್ ಸರಳೀಕರಣ ವಿಧೇಯಕ

ಟಿಡಿಆರ್ ಸರಳೀಕರಣ ವಿಧೇಯಕ

ರಾಜ್ಯದಲ್ಲಿ ಯೋಜನೆಗಳ ವೇಗಗೊಳಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಗಾಯಿಸಬಹುದಾದ ಅಭಿವೃದ್ಧಿ (ಟಿಡಿಆರ್) ಸರಳೀಕರಣಗೊಳಿಸುವ ಕುರಿತು ಪ್ರತ್ಯೇಕ ವಿಧೇಯಕವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬನ್ನೇರುಘಟ್ಟರಸ್ತೆ, ಬೇಗೂರು ರಸ್ತೆ-ಸರ್ಜಾಪುರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಬನ್ನೇರುಘಟ್ಟ ರಸ್ತೆಯನ್ನು 120 ಅಡಿಗೆ ಅಗಲೀಕರಣ ಮಾಡುವ ಕುರಿತು ಭೂಸ್ವಾಧೀನವಾದ ಜಾಗಕ್ಕೆ ಮೆಟ್ರೋ ಸಂಸ್ಥೆಯು ಪ್ರತಿ ಚದರಡಿಗೆ ರೂ.17 ಸಾವಿರ ಪರಿಹಾರ ನೀಡಿದೆ. ಆದರೆ, ಆದರೆ, ಬಿಬಿಎಂಪಿಯಿಂದ ಭೂಸ್ವಾಧೀನ ಆಗಬೇಕಿರುವ ಜಾಗಕ್ಕೆ ಬಿಬಿಎಂಪಿಯವರು ಟಿಡಿಆರ್ ನೀಡಲು ಮುಂದಾಗಿದ್ದಾರೆ. ಈ ಟಿಡಿಆರ್‌ಗೆ ಬೆಲೆ ಇಲ್ಲದಿರುವುದರಿಂದ ಮಾಲೀಕರು ಪಡೆಯುತ್ತಿಲ್ಲ.

ಟಿಡಿಆರ್ ಬ್ಯಾಂಕ್ ಮಾಡಿದರೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ. ಭೂ ಸ್ವಾಧೀನ ಮತ್ತು ಯೋಜನೆ ಅಧಿಕಾರಿಗಳು ಬಿಬಿಎಂಪಿ ಮತ್ತು ಬಿಡಿಎಯಿಂದ ಒಪ್ಪಿಗೆ ಪಡೆಯಬೇಕಿದ್ದು. ಪ್ರಸ್ತುತ ಇರುವ ಟಿಡಿಆರ್ ಪ್ರಕ್ರಿಯೆ ಕಷ್ಟವಾಗಿದೆ. ಹೀಗಾಗಿ ಮೆಟ್ರೋ ವತಿಯಿಂದಲೇ ಈ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

Recommended Video

Bangalore: ನೋಡ ನೋಡುತ್ತಿದ್ದಂತೆ ಮಹಿಳೆ ಬೆಂಕಿಗಾಹುತಿ-ಮೊಬೈಲ್ ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ |Oneindia Kannada
 ಬೊಮ್ಮಾಯಿ ಉತ್ತರವೇನು?

ಬೊಮ್ಮಾಯಿ ಉತ್ತರವೇನು?

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿಬಿಎಂಪಿ ಖಜಾನೆಯಿಂದ ನೀಡಬೇಕಾದರೆ ರೂ.4,475 ಕೋಟಿ ಹೊರೆಯಾಗುತ್ತದೆ. ಹೀಗಾಗಿ ಟಿಡಿಆರ್ ಮುಂದೆ ಬರುತ್ತಿಲ್ಲ. ಏಕೆಂದರೆ ಟಿಡಿಆರ್ ನೀಡುವ ಪದ್ಧತಿಯಲ್ಲಿ ಗೊಂದಲಗಳಿವೆ. ಯೋಜನಾ ಪ್ರಾಧಿಕಾರ ಹಾಗೂ ಕಾಮಗಾರಿ ಅನುಷ್ಠಾನ ಏಜೆನ್ಸಿಗಳು ಇಬ್ಬರೂ ಟಿಡಿಆರ್‌ಗೆ ಅನುಮೋದನೆ ನೀಡಬೇಕು. ಇದರಿಂದ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತದೆ.
ಜೊತೆಗೆ ಟಿಡಿಆರ್ ಬಳಕೆ ಕುರಿತು ಸಹ ಗೊಂದಲಗಳಿವೆ. ಹೀಗಾಗಿ ಟಿಡಿಆರ್ ಸರಳೀಕರಣ ಮಾಡುವ ಮೂಲಕ ಹೆಚ್ಚು ಬೆಲೆ ಬರುವಂತೆ ಮಾಡಲು ವಿಧೇಯಕ ಮಂಡಿಸಲಾಗುತ್ತದೆ ಎಂದು ಹೇಳಿದರು.

English summary
Bruhat Bengaluru Mahanagara Palike (BBMP) Chief Commissioner Gaurav Gupta on Tuesday said that so far, 1,334 potholes on the main roads have been filled up and only 198 remain. They will be covered in the next three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X