Kambala: 'ಕಂಬಳ' ಆಯೋಜಕರಿಗೆ ಬಿಬಿಎಂಪಿಯಿಂದ ₹50000 ದಂಡ, ಕಾರಣವೇನು?
ಬೆಂಗಳೂರು, ನವೆಂಬರ್ 26: ಬೆಂಗಳೂರಿನಲ್ಲಿ ದಕ್ಷಿಣ ಕನ್ನಡದ ದೇಶಿಯ ಕ್ರೀಡೆ ಕಂಬಳ (Kambala) ಇದೇ ಮೊದಲ ಬಾರಿಗೆ ಆಯೋಜನೆ ಆಗಿದೆ. ಇಂದು ಭಾನವಾರಕ್ಕೆ ಎರಡು ದಿನ ಕಂಬಳಕ್ಕೆ ತೆರೆ ಬಿದ್ದಿದೆ. ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಂಬಳ ಆಯೋಜಕರಿಗೆ ಭಾರೀ ಪ್ರಯಾಣದಲ್ಲಿ ದಂಡ ವಿಧಿಸುವ ಮೂಲಕ ಆಘಾತ ನೀಡಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ಚಾಲನೆಗೊಂಡ ಕಂಬಳ ಆಯೋಜಕರಿಗೆ ಬಿಬಿಎಂಪಿಯು ಬರೊಬ್ಬರಿ 50000 ರೂಪಾಯಿ ದಂಡ ವಿಧಿಸಿದೆ. ಕಂಬಳ ಆಯೋಜಕರು ಬಿಬಿಎಂಪಿಯ ಫ್ಲೆಕ್, ಬ್ಯಾನರ್ ಅಳವಡಿಕೆ ನಿಯಮ ಉಲ್ಲಂಘಿಸಿದ್ದರಿಂದ ಈ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧವಿದೆ. ಹೀಗಿದ್ದರೂ ಸಹಿತ ಕಂಬಳ ನಡೆಯುತ್ತಿದ್ದ ಅರಮನೆ ಮೈದಾನ ಸುತ್ತಮುತ್ತ, ಬಳ್ಳಾರಿ ರಸ್ತೆಗಳ ಅಕ್ಕಪಕ್ಕದಲ್ಲಿ ಕಂಬಳಕ್ಕೆ ಕುರಿತಾದ ಬ್ಯಾನರ್, ಫ್ಲೆಕ್ಸ್ ಅಳವಡಿಸಿದ್ದರಿಂದ ಬಿಬಿಎಂಪಿ ಕಂಬಳ ಆಯೋಜಕರಿಗೆ ದಂಡ ವಿಧಿಸಿದ್ದಾರೆ. ಇನ್ನೂ ಈ ಪ್ರಕರಣ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಂಡು ವಿಧಿಸಿದ ಬಿಬಿಎಂಪಿ ಸಿಬ್ಬಂಧಿ ಬ್ಯಾನರ್, ಫ್ಲೆಕ್ಸ್ ತೆರವು ಮಾಡಿದ್ದಾರೆ.
ಅಂದುಕೊಂಡಂತೆ ನಡೆದ ಕಂಬಳ ಉತ್ಸವ
ಇದೇ ಮೊದಲ ಬಾರಿಗೆ ಕರಾವಳಿ ಭಾಗದ ಸಾಂಪ್ರದಾಯಿಕ ಸೊಗಡು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪ್ರದರ್ಶನಗೊಂಡಿದೆ. ಈವರೆಗೆ ಕೆಸರುಗದ್ದೆಯಲ್ಲಿ ಎಮ್ಮೆ-ಕೋಣಗಳ ಓಟ (ಕಂಬಳ) ಕುರಿತು ಬೆಂಗಳೂರಿಗರಿಗೆ ಈ ಬಾರಿ ಈ ಕಂಬಳ ಉತ್ಸವವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
ಅಗತ್ಯ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದ ಕಂಬಳ ಆಯೋಜಕರು, ದೇಸಿ ಕ್ರೀಡೆ ಪರಿಚಯಿಸುವ ಜೊತೆಗೆ ಕರಾವಳಿಯ ಸಾಂಪ್ರದಾಯಿಕ ಅಡುಗೆ ಪರಿಚಯಿಸಲು ಮಳಿಗೆಗಳಿಗೂ ಅವಕಾಶ ಮಾಡಿಕೊಟ್ಟಿದ್ದರು. ಸುಮಾರು ಎರಡು ತಿಂಗಳಿಂದ ಮೊದಲೇ ಎಲ್ಲ ತಯಾರಿಗಳು ಆರಂಭವಾಗಿತ್ತು.

ಕಂಬಳ ರಕ್ಷಣೆಗೆ ಒಗ್ಗೂಡಲು ಸಂಸದ ಕರೆ
ಅಂದುಕೊಂಡಂತೆ ಎರಡು ದಿನದ ಕಂಬಳವು ನವೆಂಬರ್ 25 ರಂದು ಆರಂಭವಾಯಿತು. ನಟ ದಿವಂಗತ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಂಬಳಕ್ಕೆ ಚಾಲನೆ ನೀಡಿದರು. ಮೊದಲ ದಿನವೇ ಲಕ್ಷಾಂತರ ಜನರು ಕಂಬಳ ಕಣ್ತುಂಬಿಕೊಂಡರು. ಸಾವಿರಾರು ಜನ ಸೀಫುಡ್ ಸವಿದು ಆನಂದಿಸಿದರು. ಸುಮಾರು 178 ಜೋಡಿ ಎಮ್ಮೆಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು.
ಇನ್ನೂ ಎರಡನೇ ದಿನ ಕಂಬಳದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಸಾಂಪ್ರದಾಯಿಕ ಕ್ರೀಡೆಗಳಾದ 'ಜಲ್ಲಿಕಟ್ಟು' ಮತ್ತು 'ಕಂಬಳ' ತಡೆಗೆ ಕೆಲವು ಅಜೆಂಡಾಗಳ ಶಕ್ತಿಗಳು ನ್ಯಾಯಾಲಯ ಮೊರೆ ಹೋಗಿದ್ದನ್ನು ಇಂದು ನಾವು ನೋಡಿದ್ದೇವೆ. ಇದು ಸರಿಯಲ್ಲ. ನಮ್ಮ ಸಾಂಪ್ರದಾಯಿಕ ಕ್ರೀಡೆಗಳನ್ನು ಉಳಿಸಲು ನಾವು ರಾಜಕೀಯ ಭಿನ್ನಾಭಿಪ್ರಾಯ ಮರೆದು ಒಗ್ಗೂಡಬೇಕು ಎಂದು ಅವರು ಕರೆ ನೀಡಿದ್ದಾರೆ.
-
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications