ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ
ಬೆಂಗಳೂರು, ಸೆಪ್ಟೆಂಬರ್ 12: ಬಿಬಿಎಂಪಿ ಬೆಂಗಳೂರಿನ ನಾಗರಿಕರ ಮೇಲೆ ದಿನಕ್ಕೊಂದು ಸೆಸ್ ಹೇರಲು ಯೋಜನೆ ರೂಪಿಸುತ್ತಲೇ ಇದೆ. ಇತ್ತೀಚೆಗೆ ಸಾರಿಗೆ ಸೆಸ್, ವಾಹನ ಸೆಸ್ ಹೀಗೆ ನಾಗರಿಕರಿಂದ ಹಣ ಸಂಗ್ರಹಿಸಲು ಪ್ಲಾನ್ ಮಾಡುತ್ತಲೇ ಇದೆ. ಆದರೆ ವಸೂಲಿ ಮಾಡಿದ ಸೆಸ್ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ.
ಇದೀಗ ನಾಗರಿಕರಿಂದ 350 ಕೋಟಿ ರೂ.ಗಳನ್ನು ಗ್ರಂಥಾಲಯ ಸೆಸ್ ವಸೂಲಿ ಮಾಡಿದ್ದರೂ ಅದನ್ನು ರಾಜ್ಯ ಸರ್ಕಾರಕ್ಕೆ ಭರಿಸದೇ ತನ್ನಲ್ಲೇ ಉಳಿಸಿಕೊಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1984ರ ಪ್ರಕಾರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಶೇ.6ರಷ್ಡು ಗ್ರಂಥಾಲಯ ಸೆಸ್ ವಸೂಲಿ ಮಾಡಬೇಕು. ಅದೇ ರೀತಿ ಬಿಬಿಎಂಪಿ ಕಳೆದ ಐದು ವರ್ಷಗಳಿಂದ ವಸೂಲಿ ಮಾಡಿದ 350 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಭರಿಸಿಲ್ಲ.

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ನಮಗೆ ಒಟ್ಟಾರೆ 430 ಕೋಟಿ ರೂ.ಗಳು ಗ್ರಂಥಾಲಯ ಸೆಸ್ ಬಾಕಿ ಉಳಿದಿದೆ. ಈ ಹಣದಿಂದಲೇ ನಾವು ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ, ಕಟ್ಟಡ ನಿರ್ಮಾಣ, ಗ್ರಂಥಾಲಯ ನಿರ್ವಹಣೆ ಮಾಡುತ್ತೇವೆ. ಆದರೆ ಬಿಬಿಎಂಪಿಯಿಂದಲೇ 350 ಕೋಟಿ ರೂಪಾಯಿ ಬಾಕಿ ಬರಬೇಕಿದೆ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ನಿರ್ದೇಶಕ ಶಶಿಕುಮಾರ್ ಹೊಸಮನಿ.












Click it and Unblock the Notifications