ಬಿಬಿಎಂಪಿಯಿಂದ ಮಳೆ ಸಂತ್ರಸ್ತರಿಗೆ ಪರಿಹಾರ ಯೋಜನೆ; ಪಡೆಯುವುದು ಹೇಗೆ?
ಬೆಂಗಳೂರು, ಜುಲೈ 21; ಆಧಾರ್ ಸಂಖ್ಯೆಯನ್ನು ಗುರುತಿನ ದಾಖಲೆಯಾಗಿ ಬಳಸುವ ಮೂಲಕ ಸರ್ಕಾರದ ಸೇವೆಗಳು, ಸೌಲಭ್ಯಗಳು ಹಾಗೂ ಸಬ್ಸಿಡಿಗಳ ವಿತರಣೆ ಪ್ರಕ್ರಿಯೆಯು ಸರಳೀಕೃತವಾಗಿದೆ. ಇದರಿಂದಾಗಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿ, ಫಲಾನುಭವಿಗಳು ತಮ್ಮ ಅರ್ಹತೆಯ ಸೌಲಭ್ಯವನ್ನು ಸರಳವಾಗಿ ಹಾಗೂ ಯಾವುದೇ ಅಡತಡೆಯಿಲ್ಲದೆ ಪಡೆಯಲು ಅನುಕೂಲವಾಗುತ್ತದೆ. ಆಧಾರ್‌ನಿಂದಾಗಿ ಬಹುಸಂಖ್ಯೆಯ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆಯೂ ಇಲ್ಲವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆ ಸಂತ್ರಸ್ತರಿಗೆ ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಜಾರಿಯಲ್ಲಿರುವ ಯೋಜನಾ ಮಾರ್ಗಸೂಚಿಗಳನ್ವಯ ಅನುಷ್ಠಾನ ಏಜೆನ್ಸಿಯ ಮೂಲಕ ಸದರಿ ಯೋಜನೆಯಡಿ ನಗದನ್ನು ಮಳೆ ಹಾನಿಗೊಳಗಾದ ಬಿಪಿಎಲ್ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಈ ಯೋಜನೆಯಡಿ ಪರಿಹಾರವನ್ನು ಪಡೆಯಲು ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 (18 ರ 2016) ಸೆಕ್ಷನ್ 7ರ ಅನುಸಾರ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್. ಶಾಂತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಈ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆಯಲ್ಲಿ ಏನಿದೆ?; ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅಪೇಕ್ಷಿಸುವ ವ್ಯಕ್ತಿಯು ಆಧಾರ್ ಅನ್ನು ಹೊಂದಿರುವ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ ಅಥವಾ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕಾಗುತ್ತದೆ. ಪ್ರಯೋಜನವನ್ನು ಪಡೆಯಲು ಬಯಸುವ ಯಾವುದೇ ವ್ಯಕ್ತಿಯು, ಆಧಾರ್ ಅನ್ನು ಹೊಂದಿಲ್ಲದೇ ಇದ್ದ ಪಕ್ಷದಲ್ಲಿ ಅಥವಾ ಇದುವರೆಗೆ ಆಧಾರ್‌ಗೆ ನೋಂದಣಿಯಾಗದೇ ಇದ್ದ ಪಕ್ಷದಲ್ಲಿ, ಆಧಾರ್ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಆಧಾರ್ ಪಡೆಯಲು ಅರ್ಹರಾಗಿದ್ದಲ್ಲಿ, ಆಧಾರ್ ಪಡೆಯಲು ಅರ್ಜಿ ಸಲ್ಲಿಸತಕ್ಕದ್ದು ಎಂದು ತಿಳಿಸಿದೆ. ಒಂದು ವೇಳೆ ಫಲಾನುಭವಿಗಳು ಮಕ್ಕಳಾಗಿದ್ದಲ್ಲಿ ತನ್ನ ತಂದೆ/ ತಾಯಿ ಅಥವಾ ಪೋಷಕರ ಒಪ್ಪಿಗೆಗೆ ಒಳಪಟ್ಟು, ಆಧಾರ್ ನೋಂದಣಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂತಹ ಮಕ್ಕಳು/ ವ್ಯಕ್ತಿಗಳು ಯಾವುದೇ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್‌ಗೆ ನೋಂದಾಯಿಸಿಕೊಳ್ಳತಕ್ಕದ್ದು.
ಆಧಾರ್ (Enrolment and Update) ನಿಯಮಗಳು, 2016ರ ನಿಯಮಾವಳಿ 12 ರಂತೆ, ಇದುವರೆಗೂ ಆಧಾರ್ ನೋಂದಣಿಯಾಗದ ಫಲಾನುಭವಿಗಳಿಗೆ ಅಥವಾ ಫಲಾನುಭವಿಗಳ ನಿವಾಸದ ಬ್ಲಾಕ್ ಅಥವಾ ತಾಲ್ಲೂಕು ಅಥವಾ ತಹಶೀಲ್ದಾರ್‌ರಲ್ಲಿ ಯಾವುದೇ ಆಧಾರ್ ನೋಂದಣಿ ಕೇಂದ್ರ ಇಲ್ಲದೇ ಇದ್ದ ಪಕ್ಷದಲ್ಲಿ, ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿಯ ಮೂಲಕ ಆಧಾರ್ ನೋಂದಣಿ ಕೇಂದ್ರದ ಸೌಲಭ್ಯವನ್ನು ಅನುಕೂಲಕರ ಸ್ಥಳಗಳಲ್ಲಿ UIDAI ರಿಜಿಸ್ಟ್ರಾರ್‌ಗಳ ಸಮನ್ವಯದೊಂದಿಗೆ ಅಥವಾ ಸ್ವತಃ UIDAI ರಿಜಿಸ್ಟ್ರಾರ್‌ಗಳಾಗಿ ನೋಂದಣಿಯಾಗುವ ಮೂಲಕ ಒದಗಿಸತಕ್ಕದ್ದು.
ಆಧಾರ್ ಇಲ್ಲವಾದಲ್ಲಿ ಯಾವ ದಾಖಲೆ?; ವ್ಯಕ್ತಿಗೆ ಆಧಾರ್ ಅನ್ನು ನಿಗದಿಪಡಿಸುವವರೆಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಯೋಜನೆಯ ಪ್ರಯೋಜನವನ್ನು ನೀಡತಕ್ಕದ್ದು ಎಂದು ಸಹ ಸ್ಪಷ್ಟಪಡಿಸಲಾಗಿದೆ.
18 ವರ್ಷ ಒಳಗಿನ ಮಕ್ಕಳು
* ಐದು ವರ್ಷ ಪೂರೈಸಿರುವ ಮಗುವನ್ನು ದಾಖಲಿಸಿದರೆ (ಬಯೋಮೆಟ್ರಿಕ್ಸ್ ಸಂಗ್ರಹದೊಂದಿಗೆ), ಆತನ ಆಧಾರ್ ದಾಖಲಾತಿ ಗುರುತಿನ ಚೀಟಿ ಅಥವಾ ಬಯೋ- ಮೆಟ್ರಿಕ್ ನವೀಕರಣ ಗುರುತಿನ ಚೀಟಿ ಮತ್ತು ಜನನ ಪ್ರಮಾಣ ಪತ್ರ ಅಥವಾ ಸಕ್ಷಮ ಪ್ರಾಧಿಕಾರದಿಂದ ವಿತರಿಸಿರುವ ಜನನದ ದಾಖಲೆ ಅಥವಾ ಶಾಲೆಯ ಮುಖ್ಯಸ್ಥರಿಂದ ಸಹಿ ಮಾಡಲ್ಪಟ್ಟ ಪೋಷಕರ ಹೆಸರನ್ನು ಒಳಗೊಂಡ ಶಾಲಾ ಗುರುತಿನ ಚೀಟಿ ಹಾಗೂ ಅಸ್ತಿತ್ವದಲ್ಲಿರುವ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಪೋಷಕರು ಅಥವಾ ಕಾನೂನು ಪಾಲಕರೊಂದಿಗೆ ಫಲಾನುಭವಿಯ ಸಂಬಂಧದ ಪುರಾವೆಯಾಗಿ ದಾಖಲೆಗಳನ್ನು ನೀಡಬೇಕು.
ಆ ದಾಖಲೆಗಳು ಜನನ ಪ್ರಮಾಣಪತ್ರ ಅಥವಾ ಸಕ್ಷಮ ಪ್ರಾಧಿಕಾರದಿಂದ ವಿತರಿಸಿರುವ ಜನನದ ದಾಖಲೆ; ಅಥವಾ ಪಡಿತರ ಚೀಟಿ ಅಥವಾ Ex-Servicemen Contributory Health Scheme (ECHS) Card or Employee's State Insurance Corporation (ESIC) Card or Central government Health Scheme (CGHS) Card. ಪಿಂಚಣಿ ಕಾರ್ಡ್, ಸೇನಾ ಕ್ಯಾಂಟೀನ್ ಕಾರ್ಡ್ ಅಥವಾ ಸರ್ಕಾರದ ಯಾವುದೇ ಕುಟುಂಬ ಸವಲತ್ತು ಕಾರ್ಡ್ ಅಥವಾ ಇಲಾಖೆಯು ನಿಗದಿಪಡಿಸಿದ ಇತರೆ ಯಾವುದೇ ದಾಖಲೆಗಳು.
18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಆಧಾರ್ ಪಡೆಯಲು ನೋಂದಾಯಿಸಲಾದ Enrolment Identification ಚೀಟಿ ಹಾಗೂ ಭಾವಚಿತ್ರ ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಛೇರಿ ಪಾಸ್ ಬುಕ್ ಅಥವಾ ಆದಾಯ ತೆರಿಗೆ ಇಲಾಖೆಯಿಂದ ವಿತರಿಸಿದ ಶಾಶ್ವತ ಖಾತೆ ಸಂಖ್ಯೆ ಕಾರ್ಡ್ (PAN Card) ಅಥವಾ ಪಾಸ್ ಪೋರ್ಟ್ ಅಥವಾ ಪಡಿತರ ಚೀಟಿ ಅಥವಾ ಭಾರತದ ಚುನಾವಣಾ ಆಯೋಗ ವಿತರಿಸಿದ ಮತದಾರರ ಗುರುತಿನ ಚೀಟಿ ಅಥವಾ MGNREGA ಕಾರ್ಡ್ ಅಥವಾ ಕಿಸಾನ್ ಫೋಟೋ ಪಾಸ್ ಬುಕ್ ಅಥವಾ ಮೋಟಾರು ವಾಹನ ಕಾಯ್ದೆ 1988 ರಡಿಯಲ್ಲಿ ಪರವಾನಗಿ ಪ್ರಾಧಿಕಾರ ನೀಡಿರುವ ಚಾಲನಾ ಪರವಾನಗಿ ಅಥವಾ ಭಾವಚಿತ್ರ ಹೊಂದಿರುವ ವ್ಯಕ್ತಿಯ ಗುರುತನ್ನು ಅಧಿಕೃತ ಪತ್ರದಲ್ಲಿ, ಪತ್ರಾಂಕಿತ ಅಧಿಕಾರಿ ಅಥವಾ ತಹಶೀಲ್ದಾರ್ ಧೃಡೀಕರಿಸಿ ನೀಡಿದ ಪ್ರಮಾಣ ಪತ್ರ ಅಥವಾ ಇಲಾಖೆಯು ನಿಗದಿ ಪಡಿಸಿದ ಇತರೆ ಯಾವುದೇ ದಾಖಲೆಗಳು.
ದಾಖಲೆಗಳ ಪರಿಶೀಲನೆ; ಈ ಉದ್ದೇಶಕ್ಕಾಗಿ ಇಲಾಖೆಯು ನಿರ್ಧಿಷ್ಟವಾಗಿ ಗೊತ್ತುಡಿಸಿದ ಅಧಿಕಾರಿಯಿಂದ ಈ ದಾಖಲೆಗಳನ್ನು ಪರಿಶೀಲಿಸತಕ್ಕದ್ದು ಎಂದು ಅಧಿಸೂಚನೆ ತಿಳಿಸಿದೆ.
* ಯೋಜನೆಯಡಿ ಫಲಾನುಭವಿಗಳಿಗೆ ಸುಲಭವಾಗಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶಕ್ಕಾಗಿ, ಇಲಾಖೆಯು ತನ್ನ ಅನುಷ್ಠಾನ ಏಜೆನ್ಸಿಯ ಮೂಲಕ ಆಧಾರ್‌ನ ಅವಶ್ಯಕತೆಯ ಬಗ್ಗೆ ಫಲಾನುಭವಿಗಳಿಗೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನು ಮಾಡಲು ಅಗತ್ಯ ಕ್ರಮವಹಿಸುವುದು.
* ಒಂದು ವೇಳೆ ಫಲಾನುಭವಿಗಳ ಬೆರಳಚ್ಚಿನ ಗುಣಮಟ್ಟದಿಂದ ಬಯೋಮೆಟ್ರಿಕ್ ಅಥವಾ ಯಾವುದೇ ಇತರ ಕಾರಣದಿಂದ ಆಧಾರ್ ದೃಡೀಕರಣ ವಿಫಲವಾದರೆ, ಕಣ್ಣು ಹಾಗೂ ಮುಖದ ದೃಡೀಕರಣವನ್ನು ಅಳವಡಿಸಿಕೊಳ್ಳತಕ್ಕದ್ದು. ಇಲಾಖೆಯ ಸೌಲಭ್ಯಗಳನ್ನು ತಡೆರಹಿತ ರೀತಿಯಲ್ಲಿ ವಿತರಿಸಲು ತನ್ನ ಅನುಷ್ಠಾನ ಏಜೆನ್ಸಿಯ ಮೂಲಕ ಐರಿಸ್ ಸ್ಕ್ಯಾನರ್‌ಗಳ ಅಥವಾ ಬೆರಳಚ್ಚು ದೃಢೀಕರಣದೊಂದಿಗೆ ಮುಖದ ದೃಡೀಕರಣ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.
ಒಂದು ವೇಳೆ ಬಯೋಮೆಟ್ರಿಕ್ ದೃಡೀಕರಣದಲ್ಲಿ ಬೆರಳಚ್ಚು, ಕಣ್ಣು ಹಾಗೂ ಮುಖದ ದೃಡೀಕರಣ ವಿಫಲವಾದ ಸಂದರ್ಭದಲ್ಲಿ, ಎಲ್ಲಿ ಸ್ವೀಕಾರಾರ್ಹವೋ ಮತ್ತು ಕಾರ್ಯಸಾಧ್ಯವೋ ಅಲ್ಲಿ ಆಧಾರ್ ಒನ್ ಟೈಮ್ ಪಾಸ್‌ವರ್ಡ್ ಅಥವಾ ಸೀಮಿತ ಸಮಯದ ಸಮಯ ಆಧಾರಿತ ಒನ್-ಟೈಮ್ ಪಾಸ್‌ವರ್ಡ್ ದೃಡೀಕರಣವನ್ನು ನೀಡತಕ್ಕದ್ದು.
ಬಯೋಮೆಟ್ರಿಕ್ ಅಥವಾ ಆಧಾರ್ ಒನ್-ಟೈಮ್ ಪಾಸ್‌ವರ್ಡ್ ಅಥವಾ ಸಮಯ-ಆಧಾರಿತ ಒನ್-ಟೈಮ್ ಪಾಸ್‌ವರ್ಡ್ ದೃಡೀಕರಣವು ಸಾಧ್ಯವಾಗದ ಎಲ್ಲಾ ಇತರ ಸಂದರ್ಭಗಳಲ್ಲಿ, ಯೋಜನೆಯ ಪುಯೋಜನಗಳನ್ನು ಭೌತಿಕ ಆಧಾರ್ ಪತ್ರದ ಮೇಲೆ ಮುದ್ರಿಸಿರುವ ತ್ವರಿತ ಪ್ರತಿಕ್ರಿಯೆಯ ಕೋಡ್ ಮೂಲಕ (Quick Response Code) ದೃಡೀಕರಿಸಿ ನೀಡಬಹುದು.
ಈ ಮೇಲಿನ ಯಾವುದೇ ವಿಷಯದ ಹೊರತಾಗಿಯೂ, ದೃಢೀಕರಣಕ್ಕೆ ಒಳಗಾಗುವ ಮೂಲಕ ಅಥವಾ ಆಧಾರ್ ಸಂಖ್ಯೆಯ ಸ್ವಾಧೀನದ ಪುರಾವೆಯನ್ನು ಒದಗಿಸುವ ಮೂಲಕ ತನ್ನ ಗುರುತನ್ನು ಸ್ಥಾಪಿಸಲು ವಿಫಲವಾದ ಸಂದರ್ಭದಲ್ಲಿ ಅಥವಾ ಯಾವುದೇ ಆಧಾರ್ ಸಂಖ್ಯೆಯನ್ನು ನಿಗದಿಪಡಿಸದ ಸಂದರ್ಭದಲ್ಲಿ ಅಥವಾ ಆಧಾರ್ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸುವ ಯಾವುದೇ ಮಗುವಿಗೆ/ ವ್ಯಕ್ತಿಗೆ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ನಿರಾಕರಿಸತಕ್ಕದ್ದಲ್ಲ.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications