ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಪ್ರಿಯ ಯೋಜನೆಗಳ ಹೂರಣ ಬಿಬಿಎಂಪಿ ಬಜೆಟ್!

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಬಿಬಿಎಂಪಿಯ 2018-19 ನೇ ಸಾಲಿನ ಬಜೆಟ್ ನ್ನು ಬುಧವಾರ ಆರ್ಥಿಕ ಸ್ಥಾಯಿ‌ ಸಮಿತಿ ಅಧ್ಯಕ್ಷ ಎಂ.ಮಹಾದೇವ್ ಅವರು ಮಂಡಿಸಿದರು.

ಬಿಬಿಎಂಪಿಯ 2018-19ನೇ ಸಾಲಿನ ಬಜೆಟ್‌ ಮಂಡನೆಯಾಗಿದೆ. ಬಡವರು, ಮಧ್ಯಮ ವರ್ಗದವರು ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಒಟ್ಟು 9235.53 ಕೋಟಿ ಗಾತ್ರೆ ಬಜೆಟ್ ಮಂಡಿಸಿದರು. ಪುಲಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ ಹಾಗೂ ರಾಜಾಜಿನರದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 15 ಕೋಟಿ ರೂ ಸೇರಿದಂತೆ ಇಂದಿರಾ ಕ್ಯಾಂಟೀನ್ ನಲ್ಲಿ ಜನೌಷಧ ಕೇಂದ್ರ ಮತ್ತು ಬಡರೋಗಿಗಳಿಗೆ ಖುಷಿಗೆ ಉಚಿತ ಸ್ಟಂಟ್ ಅಳವಡಿಕೆಯ ಜನಪ್ರಿಯ ಯೋಜನೆಗಳನ್ನು ಒಳಗೊಂಡ 9, 235 ಕೋಟಿ ರೂ ಗಳ ಬಜೆಟ್ ನ್ನು ಬುಧವಾರ ಬಿಬಿಎಂಪಿ ಮಂಡಿಸಿದೆ.
ಅದರಲ್ಲಿ ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ಸಂಸ್ಕೃತಿ ಮತ್ತು ಕ್ರೀಡೆ, ಕಲ್ಯಾಣ ಶಿಕ್ಷಣ, ಆರೋಗ್ಯ ಹೀಗೆ ಹಲವಾರು ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ.

ಬಿಬಿಎಂಪಿಯು 2017-18 ನೇ ಸಾಲಿನ ಬಜೆಟ್ ನಲ್ಲಿ 9241 ಕೋಟಿ ಮೀಸಲಿಟ್ಟಿತ್ತು. ಈಬಾರಿ ಬಜೆಟ್ ನಲ್ಲಿ 10 ಸಾವಿರ ಕೋಟಿ ದಾಟುವ ನಿರೀಕ್ಷೆಯಿತ್ತು ಆದರೆ ನಿರೀಕ್ಷೆ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.

ವಿದ್ಯುತ್ ಉತ್ಪಾದನಾ ಘಟಕ, ಕಸ ಸಂಸ್ಕರಣಾ ಕೇಂದ್ರ ಸ್ಥಾಪನೆ

ವಿದ್ಯುತ್ ಉತ್ಪಾದನಾ ಘಟಕ, ಕಸ ಸಂಸ್ಕರಣಾ ಕೇಂದ್ರ ಸ್ಥಾಪನೆ

-ಕೈಗಾರಿಕಾ ಶೆಡ್ ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರೋತ್ಸಾಹ

-ಪಣತ್ತೂರು ಮತ್ತು ಹಲಸೂರು ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಕೆನೆಲ್ ನಿರ್ಮಾಣ

-ಶೆಟ್ಟಿಹಳ್ಳಿ ಮತ್ತು ಬಿಂಗೀಪುರ ಗ್ರಾಮದ ಲ್ಯಾಂಡ್ ಫಿಲ್ ನಲ್ಲಿ ತಲಾ ಒಂದು ದೊಡ್ಡಿ ನಿರ್ಮಾಣ

-ಪಾಲಿಕೆಯ ವ್ಯಾಪತಿಯ ಬೆಳ್ಳಹಳ್ಳಿ ವ್ಯಾಪ್ತಿಯ ಕ್ವಾರಿಯಲ್ಲಿ ತ್ಯಾಜ್ಯದಿಂದ ಭರ್ತಿ ಮಾಡಿ ರೇಸ್ ಟ್ರ್ಯಾಕ್ ನಿರ್ಮಿಸಲು ಸುತ್ತಲೂ ಗೋಡೆ ನಿರ್ಮಾಣ ಕ್ಕೆ 2 ಕೋಟಿ

-ಕನ್ನಹಳ್ಳಿ ಮತ್ತು ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ 100 ಕೋಟಿ ಮೀಸಲು

ಉದ್ಯಾನಗಳ ನಿರ್ವಹಣೆಗೆ 156 ಕೋಟಿ ಮೀಸಲು

ಉದ್ಯಾನಗಳ ನಿರ್ವಹಣೆಗೆ 156 ಕೋಟಿ ಮೀಸಲು

-ಧನ್ವಂತರಿ ಮರ, ಕೆರೆಗಳ ಬದಿ ಔಷಧ ಸಸಿಗಳ ನೆಡಲು 50 ಲಕ್ಷ ರೂ,

-ಉದ್ಯಾನ ನಿರ್ವಹಣೆಗೆ 40 ಕೋಟಿ

-ಉದ್ಯಾನಗಳ ಬೋರ್ ವೆಲ್ ಗಳ ನಿರ್ವಹಣೆಗೆ 2 ಕೋಟಿ, ಒಟ್ಟು ಉದ್ಯಾನಗಳಿಗೆ 156 ಕೋಟಿ ಬಿಬಿಎಂಪಿಯಿಂದ ಕೈಗೊಳ್ಳುವ ಪ್ರತಿ ಚರಂಡಿ ಕಾಮಗಾರಿ ಶೇ. 10 ಮೊತ್ತ ಇಂಗುಗುಂಡಿಗಳ ನಿರ್ಮಾಣಕ್ಕೆ ಮೀಸಲು
ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅನುದಾನ ಮೀಸಲು

ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅನುದಾನ ಮೀಸಲು

-ವಾರ್ಡ್ ವಾರು ನಾಡಪ್ರಭು ಕೆಂಪೇಗೌಡ ಮತ್ತು ಅಬೇಂಡ್ಕರ್ ಜಯಂತಿ ಆಚರಣೆ

-ಹಾಕಿ ದಂತಕಥೆ ಧ್ಯಾನ್ ಚಂದ್ ಪುತ್ಥಳಿ ಸ್ಥಾಪನೆ

- ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮತ್ತು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪ್ರತಿಮೆ ಸ್ಥಾಪನೆ

- ನಾಟಕ, ಸಂಗೀತ ಕಾರ್ಯಕ್ರಮಗಳ ಪ್ರೋತ್ಸಾಹಕ್ಕೆ ೫ ಕಲಾಭವನ ನಿರ್ಮಾಣ ೫ ಕೋಟಿ ಮೀಸಲು

-ಆಡೋಣ ಬಾ ಅಂಗಳದಲ್ಲಿ ಕಾರ್ಯಕ್ರಮಕ್ಕೆ ಪ್ರತಿ ವಾರ್ಡ್ 1 ಲಕ್ಷ ಅನುದಾನ

ಬಿಬಿಎಂಪಿ ಬಜೆಟ್ ನಲ್ಲಿ ಮಂಡಿಸಲಾದ ಕಲ್ಯಾಣ ಕಾರ್ಯಕ್ರಮಗಳೇನು

ಬಿಬಿಎಂಪಿ ಬಜೆಟ್ ನಲ್ಲಿ ಮಂಡಿಸಲಾದ ಕಲ್ಯಾಣ ಕಾರ್ಯಕ್ರಮಗಳೇನು

-ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಬಿಡಿಯೂಟ

-ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನಾ ಕಿಟ್

-ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವುವರಿಗೆ ವಸತಿ ಸಮುಚ್ಛಯ

-ತೃತೀಯಲಿಂಗಿಗಳ ಕಲ್ಯಾಣಕ್ಕೆ 1 ಕೋಟಿ

-ಶವ ರಕ್ಷಣೆಗೆ ಬಾಡಿಗೆ ರಹಿತ 40 ಫ್ರೀಜರ್ ಒದಗಿಸಲು 2 ಕೋಟಿ

-ಪ್ರತಿ ವಾರ್ಡ್ ಗೆ ಹೊಲಿಗೆ ಯಂತ್ರ ಮತ್ತು ಸೈಕಲ್

-ಹಿರಿಯ ನಾಗರಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಬಿಸಿಯೂಟ

-ಮಹಿಳಾ ಕಾರ್ಯಕ್ರಮ ಪ್ರತಿ ವಾರ್ಡ್ ಗೆ10 ಲಕ್ಷ

ಬೆಂಗಳೂರು ವಿದ್ಯಾರ್ಥಿಗಳಿಗೆ ಬಿಬಿಎಂಪಿ ಬಜೆಟ್ ನಿಂದ ದೊರೆತಿದ್ದೇನು

ಬೆಂಗಳೂರು ವಿದ್ಯಾರ್ಥಿಗಳಿಗೆ ಬಿಬಿಎಂಪಿ ಬಜೆಟ್ ನಿಂದ ದೊರೆತಿದ್ದೇನು

-ಪಾಲಿಕೆಯ ವಿದ್ಯಾರ್ಥಿಗಳ ಆರೋಗ್ಯ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ

-ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಶುದ್ಧ ನೀರು ಕುಡಿಯುವ ಘಟಕ ಸ್ಥಾಪನೆಗೆ 5 ಕೋಟಿ

-ಬಡ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ

-ಹೆಣ್ಣುಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರ ಅಳವಡಿಕೆ

ಆರೋಗ್ಯ ಬಜೆಟ್ ನಲ್ಲಿ ಬೆಂಗಳೂರಿಗರಿಗೆ ದಕ್ಕಿದ್ದೇನು

ಆರೋಗ್ಯ ಬಜೆಟ್ ನಲ್ಲಿ ಬೆಂಗಳೂರಿಗರಿಗೆ ದಕ್ಕಿದ್ದೇನು

-ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ವರ್ಷ ಮೊದಲ ಹೆಣ್ಣುಮಗುವಿಗೆ ಪಿಂಕ್ ಬೇಬಿ ಗೆ 5 ಲಕ್ಷ ಠೇವಣಿ

-ದಿವ್ಯಾಂಗರ ಕಲ್ಯಾಣಕ್ಕೆ 68 ಕೋಟಿ

-ಪತ್ರಕರ್ತರಿಗೆ ಆರೋಗ್ಯ ರಕ್ಷಣೆಗೆ ಸಾಮೂಹಿಕ ವಿಮೆ

-124 ಪಾಲಿಕೆಯ ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಪ್ರಸೂತಿಯಲ್ಲಿ ಜನಿಸುವ ಪ್ರಥಮ‌ ಹೆಣ್ಣು‌ಮಗವಿನ ಶಿಕ್ಷಣಕ್ಕೆ 5 ಲಕ್ಷ ಠೇವಣಿಗೆ, 1.2 ಕೋಟಿ ರೂ. ಮೀಸಲು

ಬಿಬಿಎಂಪಿ ಕೈಗೊಳ್ಳುವ ಕಾಮಗಾರಿಗಳ ವಿವರ

ಬಿಬಿಎಂಪಿ ಕೈಗೊಳ್ಳುವ ಕಾಮಗಾರಿಗಳ ವಿವರ

-ಹಡ್ಸನ್ ವೃತ್ತದಲ್ಲಿ ಇಂಜಿನಿಯರ್ಡ್ ವುಡ್ ಉಪಯೋಗಿಸಿ ಅತಿ ಹೆಚ್ಚು ಉದ್ದದ5 ಮಾರ್ಗ ನಿರ್ಮಾಣ

- ಎಂಟು ವಲಯ ವ್ಯಾಪ್ತಿಯಲ್ಲಿ ತಲಾ ಒಂದು ಹೆಲಿಪ್ಯಾಡ್ ನಿರ್ಮಾಣ

- 1 ಸಾವಿರ ಇ ಟಾಯ್ಲೆಟ್ ನಿರ್ಮಾಣ

- ಕನ್ನಡಮಯ ಬಸ್ ನಿಲ್ದಾಣ ನಿರ್ಮಿಸಲು5 ಕೋಟಿ

ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆದ ಕಾರ್ಯಗಳು

ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆದ ಕಾರ್ಯಗಳು

-150 ಕಿ.ಮೀ ಆರ್ಟೀರಿಯಲ್ ರಸ್ತೆಗಳ ವೈಟ್ ಟಾಪಿಂಗ್

- 40 ಕೆರೆಗಳ ಅಭಿವೃದ್ಧಿ

-ಎಂಟು ಜಂಕ್ಷನ್ ಗಳಲ್ಲಿ ಗ್ರೇಡ್ ಸಪರೇಟರ್

-250 ಕಿ.ಮೀ ಉದ್ದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗಗಳ ಅಭಿವೃದ್ಧಿ

- ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿ

-25 ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ

ರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿ

ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್

English summary
BBMP has proposed a popular schemes budget with estimate of R.9235 crores on Wednesday. Eying on coming state assembly elections, the authority has provided huge allocations on individual benefit schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X