ಕೋವಿಡ್; ಬೆಂಗಳೂರಲ್ಲಿ ಶೀಟ್‌ ಹಾಕಿ ಮನೆ, ರಸ್ತೆ ಸೀಲ್ ಡೌನ್ ಇಲ್ಲ

ಬೆಂಗಳೂರು, ಆಗಸ್ಟ್ 12 : ಬೆಂಗಳೂರು ನಗರದಲ್ಲಿ ಇನ್ನು ಮುಂದೆ ಕೋವಿಡ್ ಸೋಂಕಿತರ ಮನೆಗಳನ್ನು ಶೀಟ್ ಹಾಕಿ ಸೀಲ್ ಡೌನ್ ಮಾಡುವುದಿಲ್ಲ. ರಸ್ತೆಯನ್ನು ಸಹ ಬಂದ್ ಮಾಡುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ.

Recommended Video

      ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲು ಮಾಡಬೇಕಿತ್ತು | Oneindia Kannada

      ಮನೆಗಳನ್ನು ಶೀಟ್ ಹಾಕಿ ಸೀಲ್ ಡೌನ್ ಮಾಡುವ ಬಗ್ಗೆ ಟೀಕೆಗಳು ಬಂದ ಹಿನ್ನಲೆಯಲ್ಲಿ ಮತ್ತು ಕೋವಿಡ್ ಬಗ್ಗೆ ಜನರಿಗೆ ಅರಿವು ಬಂದಿರುವ ಹಿನ್ನಲೆಯಲ್ಲಿ ಶೀಟ್ ಹಾಕುವುದನ್ನು ಬಿಬಿಎಂಪಿ ಕೈ ಬಿಡಲಿದೆ.

      ಯಾವುದೇ ಮನೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾದರೆ ಮನೆಯ ಮುಂದೆ ಬ್ಯಾನರ್ ಹಾಕಲಾಗುತ್ತದೆ ಅಥವ ಪೋಸ್ಟರ್ ಅಂಟಿಸಲಾಗುತ್ತದೆ. ಮನೆಗೆ ಯಾರೋ ಭೇಟಿ ನೀಡಬಾರದು ಎಂದು ಬ್ಯಾನರ್‌ನಲ್ಲಿ ಮುದ್ರಿಸಲಾಗಿರುತ್ತದೆ.

      BBMP Not Use Metal Sheets To Seal Down House

      ಒಂದು ಬಡಾವಣೆಯ ಯಾವುದೇ ರಸ್ತೆಯಲ್ಲಿ 3 ಅಥವ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡು ಬಂದರೆ ಮಾತ್ರ ರಸ್ತೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ. ಇಲ್ಲವಾದರಲ್ಲಿ ರಸ್ತೆಯನ್ನು ಬಂದ್ ಮಾಡುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

      ಮನೆಯಲ್ಲಿ ಕೋವಿಡ್ ಪ್ರಕರಣ ಕಂಡು ಬಂದರೆ ಶೀಟ್ ಹಾಕಿ ಮನೆ ಗೇಟ್ ಬಂದ್ ಮಾಡಲಾಗುತ್ತಿತ್ತು. ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗುತ್ತಿತ್ತು. ಆದರೆ, ಈ ಮಾದರಿ ಸೀಲ್ ಡೌನ್ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು.

      ದೊಮ್ಮಲೂರಿನ ಅಪಾರ್ಟ್‌ಮೆಂಟ್ ವೊಂದರ ಮನೆ ಬಾಗಿಲಿಗೆ ಶೀಟ್ ಹಾಕಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಬಳಿಕ ಬಿಬಿಎಂಪಿ ಶೀಟ್ ತೆರವು ಮಾಡಿತ್ತು.

      ಬೆಂಗಳೂರು ನಗರದಲ್ಲಿ ಮಂಗಳವಾರ 1610 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 77,038ಕ್ಕೆ ಏರಿಕೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+