Get Updates
Get notified of breaking news, exclusive insights, and must-see stories!

ಬೆಂಗಳೂರು 195 ಕಿಮೀ 'ಟನಲ್' ನಿರ್ಮಾಣ, ಸಮರ್ಥ ನಿರ್ವಹಣೆ ಬಿಬಿಎಂಪಿಯಿಂದ ಸಾಧ್ಯವೆ?

ಬೆಂಗಳೂರು, ಅಕ್ಟೋಬರ್ 15: ರಾಜಧಾನಿಯನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಕನಸು ಹೊಂದಿರುವ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 195 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣ ಯೋಜನೆ ಪ್ರಸ್ತಾಪವಾಗಿದೆ. ಯೋಜನೆ ಆರಂಭವಾಗಬೇಕಿದ್ದು, ಈ ಮಧ್ಯೆ ಯೋಜನೆ ಕುರಿತು ಕೆಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಭಾರೀ ಉದ್ದದ ಸುರಂಗ ರಸ್ತೆ ಮಾರ್ಗ (Bengaluru Tunnel) ನಿರ್ಮಿಸಲು ಸರ್ಕಾರ ಮುಂದಾಗಿದೆ. ಅದರ ನಿರ್ವಹಣೆ ಮಾಡಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾರ್ಯ ನಿರ್ವಹಣೆ ಮೇಲೆ ನಂಬಿಕೆ ಇಲ್ಲದಾಗಿದೆ. ಈ ಸಂಬಂಧ ಟನಲ್ ಯೋಜನೆ ಆರಂಭಕ್ಕೂ ಮೊದಲೇ ಅಪಸ್ವರ ಕೇಳಿ ಬರುತ್ತಿದೆ.

BBMP Not Able To Maintain Roads- Underpasses Effective Then How Maintain 195 km Tunnel

ಈ ಯೋಜನೆ ಆರಂಭಕ್ಕೂ ಮೊದಲು ಸರ್ಕಾರ ಸಾರ್ವಜನಿಕ ಸಮಾಲೋಚನೆ ಮಾಡಬೇಕುತ್ತು. ಅದು ಮಾಡದೇ ಯೋಜನೆ ಪ್ರಸ್ತಾಪಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಮಳೆಗಾದಲ್ಲಿ ಆದ ಅನುಭವಗಳಿಂದ ಪಾಠ ಕಲಿಯದ ಬಿಬಿಎಂಪಿ ಇದೀಗ ಇಷ್ಟು ದೊಡ್ಡ ಟನಲ್ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಲಿದ್ದಾರೆಯೇ?. ಇದು ಸಾಧ್ಯವೇ ಎಂದು ಸರ್ಕಾರದ ಜೊತೆ ಕೆಲಸ ಮಾಡುವ ತಜ್ಞರು ಪ್ರಶ್ನಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ

ಬೆಂಗಳೂರು ನಗರ ದಲ್ಲಿರುವ ಸುರಂಗ ಮಾರ್ಗದಲ್ಲಿ ಸುಸೂತ್ರವಾಗಿ ನಿರ್ವಃಹಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಮಳೆ ಬಂತೆಂದರೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅವ್ಯವಸ್ಥೆ ಎದ್ದು ಕಾಣುತ್ತದೆ. ಈ ಸಂದರ್ಭಗಳಲ್ಲಿ ಬೃಹತ್ ಯೋಜನೆಗೆ ಕೈ ಹಾಕಿದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆಗಳು ಇವೆ.

ಆದ್ದರಿಂದ ಇಂತಹ ಯೋಜನೆ ಬಿಟ್ಟು ಜನರಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಮಾಡಬೇಕು. ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಉತ್ತೇಜಿಸಬೇಕು. ಈ ಮೂಲಕ ಖಾಸಗಿ ವಾಹನಗಳ ದಟ್ಟಣೆ ಕಡಿಮೆ ಮಾಡಬೇಕು ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಕೇವಲ ಒಂದು ಕಿಲೋಮೀಟರ್ ಉದ್ದದ ಶಿವಾನಂದ ಮೇಲ್ಸೇತುವೆಯನ್ನು (Steel bridge) ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಹಿಡಿದವು. ಈಜೀಪುರ ಮೇಲ್ಸೇತುವೆ ಕಾಮಗಾರಿ ಮುಗಿದಿಲ್ಲ. ಇನ್ನೂ ಪೆರಿಫೆರಲ್ ರಿಂಗ್ ರೋಡ್, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಲೇನ್ ಇನ್ನೂ ನಿರ್ಮಾಣ ಮಾಡಬೇಕಿದೆ. ಅವೆಲ್ಲ ಯೋಜನೆಗಳಲ್ಲಿವೆ. ಕೈಗೊಂಡ ಯೋಜನೆಗಳು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ.

BBMP Not Able To Maintain Roads- Underpasses Effective Then How Maintain 195 km Tunnel

ಟನಲ್ ರಸ್ತೆ ಯೋಜನೆಗೆ ಅಸಮಾಧಾನ
ನಿಮಿಷಗಳ ಮಳೆಗೆ ನಗರದಲ್ಲಿ ಪ್ರವಾಹದಂತಹ ಸಮಸ್ಯೆ ಇದೆ. ಈ ಹಿಂದೆ ಮಳೆ ವೇಳೆ ಅಂಡರ್‌ಪಾಸ್‌ನಲ್ಲಿ ನೀರು ನಿಂತರು ಅನಾಹುತ ಸಂಭವಿಸಿದೆ. ಕೆರೆ ಮತ್ತು ಚರಂಡಿಗಳ/ರಾಜಕಾಲುವೆಗಳ ಒತ್ತುವರಿ ಪೂರ್ಣವಾಗಿ ತೆರವು ಆಗಿಲ್ಲ. ರಾಜಕಾಲುವೆಗಳನ್ನು ಎತ್ತಿರಿಸುವ ಯೋಜನೆ ಆಗಿಲ್ಲ. ಹೀಗಿರುವಾಗ 195-ಕಿಮೀ ಉದ್ದದ ಟನ್ ರಸ್ತೆ (ಭೂಗತ ಸುರಂಗ ರಸ್ತೆ) ನಿರ್ಮಾಣ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರಿಗರ ಪಾಲಿಗೆ ಇದೊಂದು ಉತ್ತಮ ಯೋಜನೆ ಎಂದೆನಿಸಿದರೂ ಸಹಿತ ವಾಸ್ತವದಲ್ಲಿ ಇದು ಖಾಸಗಿ ವಾಹನಗಳ ಚಾಲನೆಯನ್ನು ಪ್ರೋತ್ಸಾಹಿಸಿದಂತಿದೆ. ಸರ್ಕಾರವೇ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸಬೇಕಿದೆ. ಇನ್ನೂ ಮೇಲಾಗಿ ಕೋಟ್ಯಾಂತರ ರೂಪಾಯಿ ಖರ್ಚಾಗುವ ಇಂತಹ ಮಹತ್ವದ ಯೋಜನೆಗಾಗಿ ಸಾರ್ವಜನಿಕರ ಸಹಭಾಗಿತ್ವ, ಚರ್ಚೆ ನಡೆಸಿಲ್ಲ ಎಂದರು.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಒಂದು 1ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ 125 ಕೋಟಿ ರೂಪಾಯಿ ತಗುಲಲಿದೆ. 14.5 ಮೀಟರ್ ಅಗಲದ 1 ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಾಣಕ್ಕೆ 450 ಕೋಟಿ ರೂ ಖರ್ಚಾಗಬಹುದು. ಇನ್ನೂ 195 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆಗೆ ಎಷ್ಟಾಗಬಹುದು ಎಂದು ಅಂದಾಜಿಸಬಹುದಾಗಿದೆ. ಆದ್ದರಿಂದ ಸಮರ್ಪಕ ನಿರ್ವಹಣೆ ಬಗ್ಗೆ ಖಾತರಿ ಇಲ್ಲದೆ ಯೋಜನೆ ಕೈಗೊಳ್ಳುವುದು ಸಮಂಜಸವಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+