ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!

ಬೆಂಗಳೂರು, ಡಿಸೆಂಬರ್ 04 : ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಲು ನೀಡಿದ ಎರಡು ಡೆಡ್‌ಲೈನ್ ಪೂರ್ಣಗೊಂಡಿವೆ. ಹೊಸ ವರ್ಷಾಚರಣೆಯ ವೇಳೆಗೂ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ.

ಟೆಂಡರ್ ಶ್ಯೂರ್ ಯೋಜನೆಯಡಿ ಚರ್ಚ್ ಸ್ಟ್ರೀಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಮೊದಲು ಜೂನ್ 1ರ ಗಡುವು ನೀಡಲಾಗಿತ್ತು. ನಂತರ ಗಡುವು ಡಿಸೆಂಬರ್ 1ಕ್ಕೆ ವಿಸ್ತರಣೆಯಾಯಿತು.

BBMP misses 2nd deadline to complete Church street road development

ಡಿಸೆಂಬರ್ ತಿಂಗಳು ಬಂದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, 2018ರ ಜನವರಿ ಅಂತ್ಯದ ಮೂರನೇ ಗಡುವು ನೀಡಲಾಗಿದೆ. ಇದರಿಂದಾಗಿ ಈ ಬಾರಿಯ ಹೊಸ ವರ್ಷಾಚರಣೆ ವೇಳೆಯೂ ಚರ್ಚ್ ಸ್ಟ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ.

2017ರ ಫೆಬ್ರವರಿ 22ರಂದು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಜೂನ್ 1ಕ್ಕೆ ಕಾಮಗಾರಿ ಮುಗಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮೊದಲ ಗುಡುವು ನೀಡಿದ್ದರು.

BBMP misses 2nd deadline to complete Church street road development

ಬಿಬಿಎಂಪಿ 8 ಕೋಟಿ ರೂ. ವೆಚ್ಚದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದೆ. ರಸ್ತೆ, ಫುಟ್‌ ಪಾತ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆಯ ಫುಟ್‌ಪಾತ್‌ಗಳಿಗೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+