• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಮೇಯರ್, ಉಪ ಮೇಯರ್ ಅಭ್ಯರ್ಥಿಗಳು ಅಂತಿಮ

|

ಬೆಂಗಳೂರು, ಸೆಪ್ಟೆಂಬರ್, 11 : ಸುಮಾರು 15 ದಿನಗಳಿಂದ ನಡೆಯುತ್ತಿದ್ದ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಕಸರತ್ತಿಗೆ ಇಂದು ತೆರೆ ಬೀಳುತ್ತಿದೆ. ಮೂರೂ ಪಕ್ಷಗಳಲ್ಲಿ ನಡೆದ ರೆಸಾರ್ಟ್‌ ರಾಜಕೀಯದ ಅಂತಿಮ ಚಿತ್ರಣ ಇಂದು ಹೊರಬರಲಿದ್ದು, ಯಾರು ಬೆಂಗಳೂರಿನ ಪ್ರಥಮ ಪ್ರಜೆ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಮೇಯರ್ ಮತ್ತು ಉಪ ಮೇಯರ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮೇಯರ್ ಗದ್ದುಗೆ ಏರಲು 131 ಸದಸ್ಯ ಬಲದ ಅಗತ್ಯವಿದೆ. ಶಾಸಕರು, ಸಂಸದರು ಸೇರಿ ಬಿಜೆಪಿ 128 ಸದಸ್ಯ ಬಲವನ್ನು ಹೊಂದಿದೆ. [ಕಾಂಗ್ರೆಸ್ ನಿಂದ ಮೇಯರ್ ಯಾರು?]

bjp

ಶುಕ್ರವಾರ ಬೆಳಗ್ಗೆ 11.30ಕ್ಕೆ ಮೇಯರ್‌, ಉಪಮೇಯರ್‌ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮೇಯರ್ ಚುನಾವಣೆಗಾಗಿ ಕಾಂಗ್ರೆಸ್-ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಸೇರಿ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಮೈತ್ರಿಕೂಟದ ಸದಸ್ಯ ಬಲ 132. [ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?]

ಮೇಯರ್ ಅಭ್ಯರ್ಥಿ ಅಂತಿಮ : ಗುರುವಾರ ರಾತ್ರಿ ನಗರದ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಸಭೆ ನಡೆಸಿದ ಬಿಜೆಪಿ ನಾಯಕರು ಮೇಯರ್ ಮತ್ತು ಉಪ ಮೇಯರ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. 'ಮೈತ್ರಿಕೂಟ, ಸಂಖ್ಯಾ ಲೆಕ್ಕಾಚಾರ ನಮಗೆ ಬೇಡ. ಬೆಂಗಳೂರಿನ ಜನರ ತೀರ್ಪಿನ ಬಗ್ಗೆ ನಮಗೆ ಗೌರವವಿದೆ' ಎಂದು ಬಿಬಿಎಂಪಿ ಬಿಜೆಪಿ ಚುನಾವಣಾ ಉಸ್ತುವಾರಿ ಆರ್.ಅಶೋಕ್ ಹೇಳಿದ್ದಾರೆ.[ಹೇಗೆ ನಡೆಯುತ್ತೆ ಮೇಯರ್ ಚುನಾವಣೆ?]

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಡು ಮಲ್ಲೇಶ್ವರ ವಾರ್ಡ್‌ನಿಂದ ಈ ಬಾರಿಯ ಚುನಾವಣೆಯಲ್ಲಿ 8,953 ಮತಗಳನ್ನು ಪಡೆದು ಜಯಗಳಿಸಿರುವ ಮಂಜುನಾಥ ರಾಜು ಅವರ ಹೆಸರನ್ನು ಮೇಯರ್ ಪಟ್ಟಕ್ಕೆ ಬಿಜೆಪಿ ಅಂತಿಮಗೊಳಿಸಿದೆ. ಕಳೆದ ಬಾರಿ ಸಹ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು ಸ್ಥಾಯಿ ಸಮಿತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ ಪಟ್ಟಾಭಿರಾಮನಗರ ವಾರ್ಡ್‌ನ ಎಚ್.ಸಿ.ನಾಗರತ್ನ ಅವರನ್ನು ಉಪ ಮೇಯರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂದು ಬೆಳಗ್ಗೆ 8 ರಿಂದ 9 ಗಂಟೆಯ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ. 11.30ರ ನಂತರ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, 260 ಸದಸ್ಯರು ಮತದಾನ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
The Karnataka BJP finalized party candidates for the Bruhat Bangalore Mahanagara Palike (BBMP) mayoral election scheduled on on Friday, September 11.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more